ಮಳೆ ಬಿಸಿಲು ಲೆಕ್ಕಿಸದೆ ದಿನವಿಡೀ ಸಾಲು ನಿಂತು ತಮ್ಮ ಕಷ್ಟಗಳನ್ನು ಪರಿಹರಿಸಲು ಮನವಿ ಪತ್ರಗಳನ್ನು ಜನರು ಕೊಡುತ್ತಾರೆ. ತಮ್ಮ ಕಷ್ಟ ನಮ್ಮ ನಾಡಿನ ದೊರೆಯ ಕೈ ಸೇರಿದೆ ಎಂದು ಜನರೂ ಸಂತಸ ಪಡುತ್ತಾರೆ. ಹಾಗಾಗಿ ಇಂದಲ್ಲ ನಾಳೆ ಕಷ್ಟಕ್ಕೆ ಪರಿಹಾರ ಸಿಗಬಹುದು ಎಂದು ಆಸೆಯಿಂದ ಕಾಯುತ್ತಿರುತ್ತಾರೆ. ಆದರೆ ಜನಸೇವಕ ಅನ್ನಿಸಿಕೊಂಡ ನಮ್ಮ ಮುಖ್ಯಮಂತ್ರಿಗಳು ಸಾರ್ವಜನಿಕರ ಮನವಿ ಪತ್ರಗಳನ್ನು ಏನು ಮಾಡಿದ್ದಾರೆ ಅನ್ನೋದನ್ನ ನೀವೇ ನೋಡಿ..
ತಮ್ಮ ಮನವಿಗಳನ್ನು ಸ್ವೀಕರಿಸಿದ್ದಾದರೂ ಯಾಕೆ? ರೈತರ ಬಗ್ಗೆ ಯಾಕಿಷ್ಟೊಂದು ನಿರ್ಲಕ್ಷ್ಯ? ಸ್ವತಃ ಮುಖ್ಯಮಂತ್ರಿಯನ್ನೇ ಭೇಟಿ ಮಾಡಿ ಸಲ್ಲಿಸಿದ್ದ ಮನವಿ ಪತ್ರಗಳಿಗೆ ಈ ಗತಿಯಾದರೆ ಅಧಿಕಾರಿಗಳಿಗೆ ಸಲ್ಲಿಸುವ ಮನವಿಗಳ ಕಥೆ ಏನು ಎಂದು ಕಿಡಿಕಾರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ಕ್ಷಮೆ ಕೋರಬೇಕು. ಇಲ್ಲದಿದ್ದಲ್ಲಿ ಚಾಮರಾಜನಗರ ಜಿಲ್ಲೆಗೆ ಭೇಟಿ ಮಾಡಿದಾಗ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಸದ ರಾಶಿ ಸೇರಿದ ಮನವಿ ಪತ್ರಗಳ ವೀಡಿಯೋ ವೈರಲ್ ಆಗಿದೆ.
- ಅಂತರ್ಜಾಲ ಮಾಹಿತಿ