ಗ್ರಾಮ ಪಂಚಾಯತ್, ಹೋಬಳಿ ಮಟ್ಟದಲ್ಲಿ ಹವಾಮಾನ ಮತ್ತು ಮಳೆಮಾಪನ ಕೇಂದ್ರಗಳನ್ನು ಅಳವಡಿಸಿದರೆ ಬೆಳೆಗಳಿಗೆ ಯೋಗ್ಯ ರೀತಿಯಲ್ಲಿ ’ಪ್ರಧಾನ ಮಂತ್ರಿ ಬೆಳೆವಿಮೆ’ಯನ್ನು ಪಾವತಿಸಲು ಅನುಕೂಲವಾಗಲಿದೆ ಎಂದು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್, ಕೇಂದ್ರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವ ಶಿವರಾಜ ಸಿಂಗ್ ಚೌಹಾಣ್ ಅವರಲ್ಲಿ ಮನವಿ ಮಾಡಿದ್ದಾರೆ. ನವದೆಹಲಿಯಲ್ಲಿ ಸಚಿವರನ್ನು ಭೇಟಿಯಾದ ಜಗದೀಶ್ ಶೆಟ್ಟರ್, ಗ್ರಾಮ ಪಂಚಾಯತ್ ಹಾಗೂ ಹೋಬಳಿ ಮಟ್ಟದಲ್ಲಿ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಹವಾಮಾನ ಕೇಂದ್ರಗಳು ಮತ್ತು ಮಳೆ ಮಾಪನ ಕೇಂದ್ರಗಳನ್ನು ಹೊರತು ಪಡಿಸಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಸ್ಥಾಪಿಸುವಂತೆ ಕೋರಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel