ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆಯಂತೆ ರೆಪೋ ದರವನ್ನು ಶೇ. 6.5ರಲ್ಲಿ ಮುಂದುವರಿಸಲು ನಿರ್ಧರಿಸಿದೆ. ಜೂನ್ 6ರಿಂದ 3 ದಿನಗಳ ಕಾಲ ನಡೆದ ಆರ್‌ಬಿಐನ ಹಣಕಾಸು ನೀತಿ ಸಮಿತಿ ಸಭೆ ಮುಕ್ತಾಗೊಂಡ ಬಳಿಕ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪತ್ರಿಕಾಗೋಷ್ಠಿ ನಡೆಸಿ ಸಭೆಯ ನಿರ್ಧಾರವನ್ನು ಪ್ರಕಟಿಸಿದರು.
ಆರ್‌ಬಿಐ ರೆಪೊ ದರವನ್ನು ಸ್ಥಿರವಾಗಿರಿಸಿಕೊಂಡಿರುವುದು ಇದು ಸತತ ಎರಡನೇ ಬಾರಿ ಎಂಬುದು ಗಮನಾರ್ಹ. ಆರ್‌ಬಿಐನ ನೀತಿ ನಿರ್ಧಾರ ಸಾಲಗಾರರಿಗೆ ಕೊಂಚ ನೆಮ್ಮದಿ ತರಲಿದೆ ಎನ್ನಬಹುದು. ಏಕೆಂದರೆ ಸಾಲದ ದರಗಳು ಹೆಚ್ಚಾಗದೇ ಇರಬಹುದು. ಆದರೆ FD ದರಗಳು ಕೂಡ ಹೆಚ್ಚಾಗುವುದಿಲ್ಲ. ಕಡಿಮೆಯಾಗುವ ಸಾಧ್ಯತೆ ಇದೆ. ಇದು ಠೇವಣಿದಾರರ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಪ್ರಸ್ತುತ, ರೆಪೊ ದರವು 6.5 ಶೇಕಡಾದಲ್ಲಿಯೇ ಉಳಿದಿದೆ. ಆರ್‌ಬಿಐ ರೆಪೋ ದರವನ್ನು ಫೆಬ್ರವರಿಯಲ್ಲಿ 25 ಮೂಲಾಂಕ ಏರಿಕೆ ಮಾಡಿದ್ದು, ದರವು ಶೇಕಡ 6.50ಕ್ಕೆ ತಲುಪಿದೆ. ಈಗ ಆ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel