ನೇಪಾಳದಲ್ಲಿ ಅಡಿಕೆ ಆಮದು ಮೇಲಿನ ನಿರ್ಬಂಧ ಸಡಿಲಿಕೆ | ಅಡಿಕೆ ಕಳ್ಳಸಾಗಾಣಿಕೆಗೆ ಇನ್ನೊಂದು ದಾರಿ…? |

September 29, 2024
8:00 AM
ಕೈಗಾರಿಕೆ ಉದ್ದೇಶಕ್ಕೆ ಅಗತ್ಯವಾದ ಅಡಿಕೆ, ಕರಿಮೆಣಸು, ಬಟಾಣಿ ಸೇರಿದಂತೆ ಇನ್ನೂ ಕೆಲವು ಕಚ್ಚಾ ಸಾಮಗ್ರಿಗಳನ್ನು ಆಮದು ಮಾಡಲು ನೇಪಾಳದಲ್ಲಿ ಅವಕಾಶ ನೀಡಲಾಗಿದೆ.
ನೇಪಾಳವು ಕಳೆದ ಕೆಲವು ಸಮಯಗಳಿಂದ ಬೇರೆ ದೇಶಗಳಿಂದ ಅಡಿಕೆ ಸಹಿತ ಕೆಲವು ಕೃಷಿ ವಸ್ತುಗಳ ಆಮದು ಮೇಲೆ  ನಿರ್ಬಂಧ ಹಾಕಿತ್ತು. ಇದೀಗ ನೇಪಾಳದ ಕೈಗಾರಿಕಾ ಸಚಿವಾಲಯವು ಅಡಿಕೆ, ಬಟಾಣಿ ಮತ್ತು ಕರಿಮೆಣಸಿನ ಆಮದು ಮೇಲಿನ ನಿರ್ಬಂಧವನ್ನು ಸಡಿಲಗೊಳಿಸಲು ನಿರ್ಧರಿಸಿದೆ. ಈ ಹಣಕಾಸು ವರ್ಷಕ್ಕೆ ಕೈಗಾರಿಕಾ ಉದ್ದೇಶಗಳಿಗಾಗಿ ಈ ನಿರ್ಬಂಧಗಳನ್ನು ತೆಗೆದುಹಾಕಲು ಉದ್ದೇಶಿಸಲಾಗಿದೆ. 
ಕಳೆದ ಸೋಮವಾರ ರಾಜ್ಯಪತ್ರದಲ್ಲಿ ಮಾಹಿತಿ ಪ್ರಕಟಿಸಿರುವ ಕೈಗಾರಿಕೆ, ವಾಣಿಜ್ಯ ಮತ್ತು ಸರಬರಾಜು ಸಚಿವಾಲಯವು, ಕೈಗಾರಿಕೆ ಉದ್ದೇಶಕ್ಕೆ ಅಗತ್ಯವಾದ ಅಡಿಕೆ, ಕರಿಮೆಣಸು, ಬಟಾಣಿ ಸೇರಿದಂತೆ ಇನ್ನೂ ಕೆಲವು ಕಚ್ಚಾ ಸಾಮಗ್ರಿಗಳನ್ನು ಆಮದು ಮಾಡಲು ಅವಕಾಶ ನೀಡಲಾಗಿದೆ.  ಕಳೆದ ಕೆಲವು ಸಮಯಗಳಿಂದ ಆಮದು ನಿರ್ಬಂಧವಿತ್ತು.ಆದರೆ ಈಗ ಯಾವ ವಸ್ತುಗಳನ್ನು , ಯಾವ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಬೇಕು ಎಂಬುದನ್ನು ಸರ್ಕಾರ ಅಧಿಸೂಚನೆಯಲ್ಲಿ ಬಹಿರಂಗಪಡಿಸಿಲ್ಲ.
ಇದರಿಂದ ಕೈಗಾರಿಕಾ ಉದ್ದೇಶದ ಹೆಸರಿನಲ್ಲಿ ಮತ್ತೆ ಕಳ್ಳಸಾಗಣೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ನೇಪಾಳದ ಮಾಧ್ಯಮಗಳು ಎಚ್ಚರಿಸಿದೆ. ಈ ಹಿಂದೆ ನೇಪಾಳಕ್ಕೆ ಮಿತಿಗಿಂತ ಅಧಿಕವಾಗಿ ಅಡಿಕೆ ಆಮದಾಗಿ ಅಲ್ಲಿಂದ ಕಳ್ಳಸಾಗಾಣಿಕೆ ಮೂಲಕ ಭಾರತದ ಮಾರುಕಟ್ಟೆಗೆ  ತಲಪುತ್ತಿತ್ತು. ನೇಪಾಳ ಹಾಗೂ ಭಾರತದ ನಡುವೆ ಒಪ್ಪಂದದ ಪ್ರಕಾರ ಮುಕ್ತವಾಗಿ ಭಾರತದೊಳಕ್ಕೆ ಸಾಗಾಟವಾಗುತ್ತದೆ. ಹೀಗಾಗಿ ಬೇರೆ ದೇಶಗಳಿಂದ ಆಮದು ಮಾಡಿರುವ ಅಡಿಕೆಯನ್ನು ನೇಪಾಳದ ಮೂಲಕ ಭಾರತಕ್ಕೆ ಸಾಗಿಸುವ ಕೆಲಸ  ಈ ಹಿಂದೆ ನಡೆಯುತ್ತಿತ್ತು. ಇದಕ್ಕಾಗಿ ಅಡಿಕೆ ಆಮದು ನಿಷೇಧವನ್ನು ನೇಪಾಳ ಸರ್ಕಾರ ಮಾಡಿತ್ತು.
ನೇಪಾಳದಲ್ಲಿ ಬೆಳೆಯುವ ಅಲ್ಪಸ್ವಲ್ಪ ಅಡಿಕೆಯ ಮೇಲೆ, ಕಾಳುಮೆಣಸು ಮೇಲೆ ಪರಿಣಾಮ ಬೀರಿ, ಅಲ್ಲಿನ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲಾಗದ ಸ್ಥಿತಿಯಾಗಿತ್ತು. ಅಲ್ಲಿನ ಬಳಕೆಗೆ ನೇಪಾಳದಲ್ಲಿಯೇ ಬೆಳೆಯುವ ಅಡಿಕೆ ಉಪಯೋಗವಾಗುತ್ತಿತ್ತು. ಸರ್ಕಾರಕ್ಕೆ ಯಾವುದೇ ಲಾಭ ಇಲ್ಲದೆಯೇ ಬೇರೆ ದೇಶಗಳಿಂದ ಅಡಿಕೆ ನೇಪಾಳದ ಮೂಲಕ ಭಾರತದ ಮಾರುಕಟ್ಟೆಗೆ ಕಳ್ಳಸಾಗಾಣಿಕೆಯಲ್ಲಿ ನೇಪಾಳದ ಹೆಸರಿನಲ್ಲಿ ಬರುತ್ತಿತ್ತು. ಇದಕ್ಕಾಗಿ ನೇಪಾಳವು ಅಡಿಕೆ ಆಮದು ನಿಷೇಧ ಮಾಡಿತ್ತು. ಇದೀಗ ಅಡಿಕೆ, ಬಟಾಣಿ ಮತ್ತು ಕರಿಮೆಣಸಿನ ಆಮದು ಮೇಲಿನ ನಿರ್ಬಂಧವನ್ನು ಸಡಿಲಗೊಳಿಸಿದೆ. ಹೀಗಾಗಿ ಭಾರತದಲ್ಲಿ ಈಗಲೇ ಎಚ್ಚರವಹಿಸಬೇಕಾದ ಅಗತ್ಯ ಇದೆ.

Advertisement
Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬಂಡಿಪುರ ಅರಣ್ಯದಲ್ಲಿ ವಾಹನಗಳ ರಾತ್ರಿ ಸಂಚಾರ ನಿರ್ಬಂಧ ತೆರವಿಗೆ ಚರ್ಚಿಸಿ ನಿರ್ಧಾರ | ಅರಣ್ಯ ಸಚಿವ ಈಶ್ವರ್ ಖಂಡ್ರೆ
March 29, 2025
9:58 AM
by: The Rural Mirror ಸುದ್ದಿಜಾಲ
ಬೇಸಿಗೆ ಹಿನ್ನೆಲೆ | ರಾಜ್ಯದ ಜಲಾಶಯಗಳಿಂದ ಕುಡಿಯುವ ನೀರು ಬಿಡುಗಡೆ ಕುರಿತು ಚರ್ಚೆ
March 29, 2025
9:54 AM
by: The Rural Mirror ಸುದ್ದಿಜಾಲ
ವಿಶೇಷ ಕಾಫಿ ಉತ್ಪನ್ನಗಳ ಬಿಡುಗಡೆ | ಡಿಪ್ ಕಾಫಿ ಬ್ಯಾಗ್ ಗಳನ್ನು ಪರಿಚಯಿಸಿದ ಕಾಫಿ ಬೋರ್ಡ್
March 29, 2025
9:49 AM
by: The Rural Mirror ಸುದ್ದಿಜಾಲ
ರಸಗೊಬ್ಬರಗಳ ಬೆಲೆ ಸ್ಥಿರವಾಗಿರಿಸಲು ಕ್ರಮ | 45 ಕೆ.ಜಿ. ಯೂರಿಯಾ ಬೆಲೆ 242 ರೂ.ಗೆ ನಿಗದಿ
March 29, 2025
9:39 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group