#ODIWorldCup2023| ಪರಿಷ್ಕೃತ ಏಕದಿನ ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ | ಹೈವೋಲ್ಟೇಜ್‌ ಪಂದ್ಯದಲ್ಲಿ ಬದಲಾವಣೆ |

August 10, 2023
11:07 AM
ಅಕ್ಟೋಬರ್ 14 ರಂದು ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ಮುಖಾಮುಖಿಯಾಗಲಿವೆ.

ಕ್ರಿಕೆಟ್‌ ಅಂದ ತಕ್ಷಣ ಅಭಿಮಾನಿಗಳಿಗೆ ಅದೆಲ್ಲಿಲ್ಲದ ಉತ್ಸಾಹ. ಪಂದ್ಯಗಳನ್ನು ನೋಡಲು ಕಾತುರದಿಂದ ಕಾಯುತ್ತಿರುತ್ತಾರೆ. ಅದರಲ್ಲೂ ಇಂಡಿಯಾ ಮತ್ತು ಪಾಕಿಸ್ತಾನ ಅಂದ್ರೆ ಕೇಳಬೇಕೇ..? ಸದ್ಯ ಮುಂಬರಲಿರುವ  ಏಕದಿನ ವಿಶ್ವಕಪ್  #ODIWorldCup2023ರ ಪರಿಷ್ಕೃತ ವೇಳಾಪಟ್ಟಿ  ಬಿಡುಗಡೆಯಾಗಿದೆ. ನೂತನ ವೇಳಾಪಟ್ಟಿಯ ಪ್ರಕಾರ 9 ಪಂದ್ಯಗಳ ದಿನಾಂಕಗಳು ಬದಲಾಗಿವೆ. ಇದರಲ್ಲಿ ಟೀಂ ಇಂಡಿಯಾದ 2 ಪಂದ್ಯಗಳು ಸೇರಿವೆ. ಹಾಗಿದ್ದರೆ ಬದಲಾದ ವೇಳಾಪಟ್ಟಿಯ ಪ್ರಕಾರ ಟೀಂ ಇಂಡಿಯಾ ಯಾವ ದಿನ ಯಾವ ತಂಡವನ್ನು ಎದುರಿಸಿದೆ ಎಂಬುದರ ವಿವರವನ್ನು ನೋಡುವುದಾದರೆ..

Advertisement

ಏಕದಿನ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ತನ್ನ ಅಭಿಯಾನವನ್ನು ಆಸ್ಟ್ರೇಲಿಯಾ ವಿರುದ್ಧ ಆರಂಭಿಸಲಿದೆ. ಉಭಯ ತಂಡಗಳ ಈ ಪಂದ್ಯ ಅಕ್ಟೋಬರ್ 8 ರಂದು ಚೆನ್ನೈನಲ್ಲಿ ನಡೆಯಲ್ಲಿದೆ. ಭಾರತ ತನ್ನ ಎರಡನೇ ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದ್ದು, ಈ ಪಂದ್ಯ ಅಕ್ಟೋಬರ್ 11 ರಂದು ದೆಹಲಿಯಲ್ಲಿ ನಡೆಯಲ್ಲಿದೆ. ಈ ಎರಡು ಪಂದ್ಯಗಳ ಬಳಿಕ ಅಕ್ಟೋಬರ್ 14 ರಂದು ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಈ ಹಿಂದೆ ಈ ಪಂದ್ಯವನ್ನು ಅಕ್ಟೋಬರ್ 15 ರಂದು ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಭದ್ರತಾ ಸಮಸ್ಯೆಯಿಂದ ಪಂದ್ಯವನ್ನು 1 ದಿನ ಮೊದಲು ಆಯೋಜಿಸಲಾಗುತ್ತಿದೆ. ಭಾರತ ತನ್ನ ನಾಲ್ಕನೇ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಈ ಪಂದ್ಯ ಅಕ್ಟೋಬರ್ 19 ರಂದು ಪುಣೆಯಲ್ಲಿ ನಡೆಯಲ್ಲಿದೆ.

ಅಕ್ಟೋಬರ್ 22 ರಂದು ನಡೆಯಲ್ಲಿರುವ ಐದನೇ ಪಂದ್ಯದಲ್ಲಿ ಟೀಂ ಇಂಡಿಯಾ, ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಧರ್ಮಶಾಲಾದಲ್ಲಿ ಎದುರಿಸಲಿದೆ. ಹಾಗೆಯೇ ಅಕ್ಟೋಬರ್ 29 ರಂದು ಮತ್ತೊಂದು ಬಲಿಷ್ಠ ತಂಡವಾದ ಇಂಗ್ಲೆಂಡ್ ಎದುರು ತನ್ನ ಆರನೇ ಪಂದ್ಯವನ್ನು ಟೀಂ ಇಂಡಿಯಾ ಲಕ್ನೋದಲ್ಲಿ ಆಡಲಿದೆ.ತನ್ನ 7ನೇ ಪಂದ್ಯದಲ್ಲಿ ರೋಹಿತ್ ಪಡೆ ಶ್ರೀಲಂಕಾ ತಂಡವನ್ನು ಎದುರಿಸುತ್ತಿದ್ದು, ಈ ಪಂದ್ಯ ನವೆಂಬರ್ 2 ರಂದು ಮುಂಬೈನಲ್ಲಿ ನಡೆಯಲ್ಲಿದೆ. ನವೆಂಬರ್ 5 ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತನ್ನ 8ನೇ ಪಂದ್ಯವನ್ನು ಆಡಲಿದೆ. ಈ ಪಂದ್ಯಕ್ಕೆ ಕೋಲ್ಕತ್ತಾ ಆತಿಥ್ಯವಹಿಸಲಿದೆ. ಅಂತಿಮವಾಗಿ ಲೀಗ್ ಹಂತದಲ್ಲಿ ಭಾರತ ನವೆಂಬರ್ 12 ರಂದು ಬೆಂಗಳೂರಿನಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ. ಈ ಮೊದಲು ಈ ಪಂದ್ಯವನ್ನು ನವೆಂಬರ್ 11 ರಂದು ನಡೆಸಲು ತೀರ್ಮಾನಿಸಲಾಗಿತ್ತು.

Source: Sports News

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮೀಸಲಾತಿಗಾಗಿ ಜಾತಿಯಾಗುವ ಮತಧರ್ಮ
April 16, 2025
9:41 PM
by: ಡಾ.ಚಂದ್ರಶೇಖರ ದಾಮ್ಲೆ
ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ
April 16, 2025
8:40 PM
by: ದ ರೂರಲ್ ಮಿರರ್.ಕಾಂ
ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!
April 16, 2025
11:18 AM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ
ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |
April 16, 2025
10:50 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group