Advertisement
Opinion

ಅಕ್ಕಿ, ಜೋಳ, ರಾಗಿ ಅಥವಾ ಸಜ್ಜೆ, ಯಾವ ರೊಟ್ಟಿಯನ್ನು ತಿನ್ನಬೇಕು….? | ರೊಟ್ಟಿ ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯಿರಿ |

Share

ಅಕ್ಕಿ(Rice) ಮತ್ತು ಜೋಳದ ರೊಟ್ಟಿ(Corn Rotti) ಮೃದುವಾಗಿದ್ದರೆ ರಾಗಿ ಮತ್ತು ಸಜ್ಜೆ ರೊಟ್ಟಿ(Ragi, Sajje) ಬಿರುಸು(ಗರಿಗರಿ)ಯಾಗಿರುತ್ತವೆ. ತಯಾರಿಸುವ ವಿಧಾನವನ್ನು ಅವಲಂಬಿಸಿ, ರೊಟ್ಟಿ ಮೃದುವಾಗಿ ಅಥವಾ ಗಟ್ಟಿಯಾಗಿರುತ್ತದೆ. ಚಪಾತಿಗಿಂತಲೂ(Chapathi) ರೊಟ್ಟಿ ಆರೋಗ್ಯಕ್ಕೆ(Health) ಉತ್ತಮ ಎಂದು ನೀವು ಹಲವಾರು ಬಾರಿ ಕೇಳಿರಬಹುದು. ಅಕ್ಕಿ ಹಾಗೂ ಗೋಧಿಗಳಿಗಿಂತಲೂ ಈ ಮೂರು ಧಾನ್ಯಗಳಲ್ಲಿ ನಾರಿನ ಅಂಶ(Fiber content) ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.

Advertisement
Advertisement
Advertisement

ಬಿಳಿ ಪ್ಯಾಡಿ ಅಕ್ಕಿ ಪಾಲಿಶ್ ಮಾಡಿದ್ದಾಗಿ ಇರುತ್ತದೆ. ಆದ್ದರಿಂದ, ಅದರಲ್ಲಿ ಕೇವಲ ಪಿಷ್ಟಗಳ (ಸಕ್ಕರೆ) ಹೊರತು ನಾರಿನಂಶ ಹಾಗೂ ಇತರ ಪೋಷಕಾಂಶಗಳು ಇರುವುದಿಲ್ಲ. ಇದು ಕೇವಲ ರುಚಿ ಹಾಗೂ ಹಸಿವೆ ನೀಗಲು ಉಪಯುಕ್ತ, ಪೋಷಣೆ ಸೊನ್ನೆ. ಕೆಲವರು ಕೆಂಪು ಅಕ್ಕಿ ಇತ್ಯಾದಿಗಳನ್ನು ಬಳಸುತ್ತಾರೆ. ಆದರೂ ಅದರಲ್ಲಿ ನಾರಿನಂಶ ತುಂಬಾ ಕಡಿಮೆ ಇರುತ್ತದೆ.

Advertisement

ಗೋಧಿ ಪಾಲಿಶ್ ಮಾಡಿರದಿದ್ದರೂ ಮೂಲತಃ ಅದರಲ್ಲಿ ನಾರಿನಂಶ ತುಂಬಾ ಕಡಿಮೆ, ಪಿಷ್ಟಗಳು ಅಧಿಕ. ಅಲ್ಲದೆ, ಗೋಧಿಯಲ್ಲಿ ಗ್ಲುಟೆನ್ ಎಂಬ ಜಿಗುಟು ಪದಾರ್ಥ ಇರುತ್ತದೆ. ಈ ಪದಾರ್ಥದಿಂದ ಅನೇಕರಿಗೆ ಅಲರ್ಜಿ ಆಗುತ್ತದೆ. ಗ್ಲುಟೆನ್ ಸುಲಭವಾಗಿ ಜೀರ್ಣವಾಗುವುದಿಲ್ಲ. ಇದು ಗ್ಯಾಸ್, ಹೊಟ್ಟೆ ನೋವು, ಮಲಬದ್ಧತೆಗಳಿಗೆ ಕಾರಣವಾಗುತ್ತದೆ. ಇದರಿಂದಾಗಿ ಅನೇಕ ತರಹದ ರೋಗಗಳು ಉಂಟಾಗುವ ಸಾಧ್ಯತೆ ಹೆಚ್ಚು.

ಪಿಷ್ಟಮಯ ಪದಾರ್ಥಗಳು ತಿನ್ನಲು ರುಚಿಯಾಗಿರುತ್ತವೆ, ಆದರೆ, ಅವುಗಳಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿರುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಬೇಗ ಹೆಚ್ಚಿಸುತ್ತವೆ. ಇದು ಆರೋಗ್ಯಕ್ಕೆ ಅಪಾಯಕಾರಿ.

Advertisement

ಅದೇ ಜೋಳ, ರಾಗಿ ಮತ್ತು ಸಜ್ಜೆಗಳಲ್ಲಿ ನಾರಿನಂಶವು ಸ್ವಲ್ಪ ಜಾಸ್ತಿ ಪ್ರಮಾಣದಲ್ಲಿ ಇರುತ್ತದೆ ಹಾಗೂ ಇದರಲ್ಲಿನ ಪಿಷ್ಟಗಳು ಸಂಕೀರ್ಣ ರೂಪದಲ್ಲಿ ಇರುವುದರಿಂದ ಸಕ್ಕರೆಯನ್ನು ಬೇಗ ಬಿಡುಗಡೆ ಮಾಡುವುದಿಲ್ಲ. ಜೊತೆಗೆ ಖನಿಜ ಹಾಗೂ ಜೀವ ಸತ್ವಗಳಂಥ ಅನೇಕ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಅಲ್ಲದೆ ಈ ಮೂರು ಧಾನ್ಯಗಳಲ್ಲಿ ಗ್ಲುಟೆನ್ ಎಂಬ ಜಿಗುಟು ಪದಾರ್ಥ ಇರುವುದಿಲ್ಲ. ಆದ್ದರಿಂದ, ಈ ಧಾನ್ಯಗಳು ಆರೋಗ್ಯಕ್ಕೆ ಹಾನಿಕಾರಕವಲ್ಲ. ಈ ಮೂರೂ ಪ್ರಕಾರದ ಧಾನ್ಯಗಳು ತೂಕ ನಿಯಂತ್ರಣಕ್ಕಾಗಿ ಉಪಯುಕ್ತವಾಗಿವೆ. ಆದರೆ, ಈ ಧಾನ್ಯಗಳು ಸಿರಿಧಾನ್ಯಗಳಷ್ಟು ಉತ್ತಮವೂ ಅಲ್ಲ. ಆದರೂ ಆರೋಗ್ಯವಂತರು ಇವುಗಳನ್ನು ನಿತ್ಯ ಆಹಾರದಲ್ಲಿ ಬಳಸಲು ಅಡಚಣೆ ಇಲ್ಲ.

ಯಾವ ರೊಟ್ಟಿ ಯಾವಾಗ ತಿನ್ನಬೇಕು? ರಾಗಿ/ರಾಗಿ ರೊಟ್ಟಿ: ರಾಗಿ ರೊಟ್ಟಿ ತಿಂದರೆ ಏನು ಪ್ರಯೋಜನ? ರಾಗಿಯದು ತುಸು ತಂಪು ಗುಣಧರ್ಮ. ಆದರೆ ಇದನ್ನು ಚಳಿಯ ಹಾಗೂ ಉಷ್ಣ ಹವಾಮಾನ ಎರಡರಲ್ಲೂ ಬಳಸಬಹುದು. ತಂಪು ಹವಾಮಾನದಲ್ಲಿ ರಾಗಿಯನ್ನು ಬಿಸಿ ಅಂಬಲಿ ಅಥವಾ ಮುದ್ದೆಯ ರೂಪದಲ್ಲಿ ಸೇವಿಸಬಹುದು. ಬೇಸಿಗೆಯಲ್ಲಿ ಅಂಬಲಿಯನ್ನು ತಣ್ಣಗಾಗಿಸಿ ಸೇವಿಸಬಹುದು. ಇದು ತುಂಬಾ ಆರಾಮದಾಯಕವಾಗಿರುತ್ತದೆ. ರಾಗಿಯು ಪೌಷ್ಟಿಕ ಧಾನ್ಯವಾಗಿದ್ದು ಸುಲಭವಾಗಿ ಜೀರ್ಣವಾಗುತ್ತದೆ. ರಾಗಿಯಲ್ಲಿ ಕಬ್ಬಿನಾಂಶ ಹಾಗೂ ಕ್ಯಾಲ್ಸಿಯಂ ಪ್ರಮಾಣ ಇರುವುದರಿಂದ ಇದು ರಕ್ತಹೀನತೆ ಹಾಗೂ ಕ್ಯಾಲ್ಸಿಯಂ ನ ಕೊರತೆಯನ್ನು ಈಗಲೂ ಉಪಯುಕ್ತವಾಗಿದೆ. ಮೂಳೆಗಳ ಸಮಸ್ಯೆ ಇರುವವರು, ವಯಸ್ಕರು ಹಾಗೂ ಮಹಿಳೆಯರು ರಾಗಿಯನ್ನು ಹೆಚ್ಚಾಗಿ ಬಳಸಬೇಕು.

Advertisement

ಸಜ್ಜೆ/ಸಜ್ಜೆ ರೊಟ್ಟಿ: ಸಜ್ಜೆ ಉಷ್ಣವಾಗಿರುವುದರಿಂದ ಬೇಸಿಗೆಯಲ್ಲಿ ಬಳಸಬಾರದು. ತಂಪು ಹವಾಮಾನದಲ್ಲಿ ಇದರ ಬಳಕೆಯನ್ನು ಹೆಚ್ಚಿಸಬಹುದು. ಸಜ್ಜೆಯು ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇದರ ಸೇವನೆಯು ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯವಾಗಿದೆ. ಏಕೆಂದರೆ ಇದು ಅಂಟು-ಮುಕ್ತವಾಗಿದೆ ಮತ್ತು ತೂಕ ನಷ್ಟಕ್ಕೂ ಸಹಕಾರಿಯಾಗಿದೆ. ಸಜ್ಜೆ ಮೆಗ್ನೀಸಿಯಮ್ನ ಉತ್ತಮ ಮೂಲವಾಗಿರುವುದರಿಂದ, ಹೃದ್ರೋಗಿಗಳು ತಮ್ಮ ಆಹಾರದಲ್ಲಿ ಸಜ್ಜೆಯನ್ನು ಸೇರಿಸುತ್ತಾರೆ. ಮೆಗ್ನೀಸಿಯಮ್ ಬಿಪಿ ಮತ್ತು ಮಧುಮೇಹದಂತಹ ಹೃದ್ರೋಗದ ಅಪಾಯಕಾರಿ ಅಂಶಗಳನ್ನು ತಡೆಯಲು ಸಾಧ್ಯವಾಗುತ್ತದೆ. LDL (ಕೆಟ್ಟ) ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಪಾರ್ಶ್ವವಾಯು ವಿರುದ್ಧ ರಕ್ಷಿಸುವಲ್ಲಿ ಮೆಗ್ನೀಸಿಯಮ್ನ ಪ್ರಯೋಜನಕಾರಿ ಪರಿಣಾಮಗಳನ್ನು ಅಧ್ಯಯನಗಳು ಸೂಚಿಸಿವೆ.

ಜೋಳದ ರೊಟ್ಟಿ: ಜೋಳ ತಿನ್ನುವುದರಿಂದ ಶಕ್ತಿ ಸಿಗುತ್ತದೆ. ಇದು ಶಕ್ತಿಯ ಉತ್ತಮ ಮೂಲವಾಗಿದೆ. ಇದರ ಹೊರತಾಗಿ, ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ, ಜೋಳ ತಿನ್ನುವುದು ನಿಮಗಾಗಿ ಪ್ರಯೋಜನಕಾರಿಯಾಗಲಿದೆ. ವಾಸ್ತವವಾಗಿ, ಜೋಳವನ್ನು ತಿಂದ ನಂತರ, ಹಸಿವು ದೀರ್ಘಕಾಲ ನೀಗುತ್ತದೆ. ಇದು ತೂಕ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಜೋಳವು ಸಹಾಯ ಮಾಡುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ, ಇದು ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ನ ಉತ್ತಮ ಮೂಲವಾಗಿದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅತಿ ಉಷ್ಣ ಅಥವಾ ತಂಪು ಅಲ್ಲದ ಈ ಧಾನ್ಯವನ್ನು ವರ್ಷವಿಡಿ ಬಳಸಬಹುದು. ಜೋಳದಲ್ಲಿ ಅನೇಕ ಪೋಷಕಾಂಶಗಳಿದ್ದು ಅದು ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ. ನೀವು ಬಯಸಿದರೆ ನಿಮಗೆ ಆಹಾರ ಅಲರ್ಜಿ ಇದ್ದರೆ, ನೀವು ಜೋಳವನ್ನು ಸೇವಿಸಬಹುದು. ಸೋರ್ಗಮ್ ಬಹಳಷ್ಟು ಫೈಬರ್ ಅನ್ನು ಹೊಂದಿರುತ್ತದೆ, ಆದ್ದರಿಂದ ಇದು ಸುಲಭವಾಗಿ ಜೀರ್ಣವಾಗುತ್ತದೆ. ಜೋಳ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ.

Advertisement

ಈ ಮೂರೂ ಬಗೆಯ ಧಾನ್ಯಗಳು ನಿತ್ಯ ಊಟದಲ್ಲಿ ಪ್ರಮುಖ ಆಹಾರವಾಗಿ ಆರೋಗ್ಯಕ್ಕೆ ಉಪಯುಕ್ತವಾಗಿವೆ ಆದರೆ ಪ್ರತಿಯೊಬ್ಬರೂ ತಮ್ಮ ದೇಹ ಪ್ರಕೃತಿ ಹಾಗೂ ಹವಾಮಾನಕ್ಕನುಗುಣವಾಗಿ ಅವುಗಳ ಬಳಕೆಯನ್ನು ನಿರ್ಧರಿಸಬೇಕು. ಯಾವುದೇ ಧಾನ್ಯವನ್ನು ಬಳಸಿದರೂ ಹಿಟ್ಟನ್ನು ಜರಡಿ ಹಿಡಿಯಬಾರದು, ಸಂಪೂರ್ಣವಾಗಿ ಬಳಸಬೇಕು. ಆಗಲೇ ಮೇಲೆ ತಿಳಿಸಿದ ಲಾಭಗಳು ದೊರೆಯುವುದು. ಆದರೆ ದಕ್ಷಿಣ ಭಾರತದಲ್ಲಿ ರೊಟ್ಟಿಯ ಬಳಕೆ ಇಲ್ಲವೇ ಇಲ್ಲ. ಕೆಲ ಭಾಗಗಳಲ್ಲಿ ರಾಗಿಮುದ್ದೆಯನ್ನು ತಿನ್ನುತ್ತಾರೆ. ಆದರೆ ಸಜ್ಜೆ ಹಾಗೂ ಜೋಳದ ಬಳಕೆ ಶೂನ್ಯ.ದಕ್ಷಿಣ ಭಾರತದಲ್ಲಿ ಪ್ಯಾಡಿ ಅಕ್ಕಿಯ ಬಳಕೆ ತುಂಬಾ ಜಾಸ್ತಿ.

ಆದ್ದರಿಂದ ಇತ್ತೀಚೆಗೆ ರಕ್ಷಣೆ ಭಾರತೀಯರಲ್ಲಿ ಮಧುಮೇಹ ಕೊಲೆಸ್ಟ್ರಾಲ್ ಇತ್ಯಾದಿ ಜೀವನ ಶೈಲಿಗೆ ಸಂಬಂಧಪಟ್ಟ ಕಾಯಿಲೆಗಳು ಹೆಚ್ಚಾಗುತ್ತಿವೆ ಹಾಗೂ ಅವುಗಳನ್ನು ನಿಯಂತ್ರಿಸುವುದು ಕೂಡ ಕಷ್ಟ. ದಕ್ಷಿಣ ಭಾರತೀಯ ಜನರು ಕೂಡ ಜೋಳ, ರಾಗಿ, ಸಜ್ಜೆ, ಇವುಗಳ ರೊಟ್ಟಿಗಳನ್ನು ತಿನ್ನುವ ಅಭ್ಯಾಸ ಬೆಳೆಸಿಕೊಳ್ಳುವುದು ಉತ್ತಮ. ನಾನು ಈ ಸಲಹೆಯನ್ನು ಅನೇಕರಿಗೆ ಕೊಡುತ್ತಿರುತ್ತೇನೆ. ಆದರೆ, ನನಗೆ ಇವರಿಂದ ಸಿಗುವ ಸಾಮಾನ್ಯ ಉತ್ತರವೆಂದರೆ “ನಮ್ಮಲ್ಲಿ ರೊಟ್ಟಿ ತಿನ್ನುವ ಅಭ್ಯಾಸವಿಲ್ಲ. ಆದ್ದರಿಂದ, ಅದನ್ನು ತಿನ್ನುವುದು ಕಷ್ಟ..! ತಿಂದರೂ ನಮಗೆ ರೊಟ್ಟಿ ಸರಿಯಾಗಿ ಜೀರ್ಣವಾಗುವುದಿಲ್ಲ..!” ಇಂಥ ಉತ್ತರಗಳನ್ನು ಕೇಳಿದಾಗ ನನಗೊಂದು ಪ್ರಶ್ನೆ ಕಾಡುತ್ತದೆ.

Advertisement

ಇವರಿಗೆಲ್ಲಾ ಪಿಜ್ಜಾ, ಬರ್ಗರ್, ಪಾಸ್ತಾ, ಮಂಚೂರಿಯನ್, ಪಾನಿಪುರಿ, ಭೇಳ್, ವಡಾ ಪಾವ್, ಪಾವ್ ಭಾಜಿ, ಇತ್ಯಾದಿಗಳನ್ನು ತಿನ್ನುವ ರೂಢಿ ಮುಂಚಿನಿಂದಲೂ ಇತ್ತೇ? ಹಾಗಾದರೆ, ಇಂಥ ಪದಾರ್ಥಗಳನ್ನು ತಿನ್ನುವುದು ಅದು ಹೇಗೆ ಬೇಗನೆ ಅಭ್ಯಾಸವಾಯಿತು..?? ಕೋಲಾ, ಪೆಪ್ಸಿ, ಇತ್ಯಾದಿಗಳನ್ನು ನೂರಾರು ವರ್ಷಗಳಿಂದ ಕುಡಿಯುವ ಸಂಪ್ರದಾಯವಿತ್ತೆ..?! ಅವು ಹೇಗೆ ರೂಢಿಯಾದವು..?! ನಾನು ಇನ್ನೂ ಒಂದು ಅಂಶವನ್ನು ಗಮನಿಸಿದ್ದೇನೆ.

ರೊಟ್ಟಿ ಉಣ್ಣುವುದು ಬಡತನದ ಅಥವಾ ಹಿಂದುಳಿದವರ ಲಕ್ಷಣ ಎಂದು ಅನೇಕರು ಭಾವಿಸುತ್ತಾರೆ. ಆದರೆ, ಇಂಥ ಪೊಳ್ಳು ಪ್ರತಿಷ್ಠೆಯ ದುಷ್ಪರಿಣಾಮಗಳನ್ನು ಅನಾರೋಗ್ಯದ ರೂಪದಲ್ಲಿ ಮುಂದೆ ಅನುಭವಿಸಬೇಕಾಗುತ್ತದೆ. ಸಮಸ್ಯೆ ಶರೀರಕ್ಕಿಂತಲೂ ಮನಸ್ಸಿನಲ್ಲಿ ಜಾಸ್ತಿ ಇರುತ್ತದೆ. ಆದ್ದರಿಂದ, ಮಾನಸಿಕತೆಯನ್ನು ಬದಲಾಯಿಸಿಕೊಳ್ಳುವುದು ಅಗತ್ಯ.

Advertisement

ಲೇಖನ: ಡಾ. ಕುಲಕರ್ಣಿ ಪಿ. ಎ. ಹೋಮಿಯೋಪತಿ ತಜ್ಞ, ಪ್ರಕೃತಿ ಚಿಕಿತ್ಸಕ, ಜೀವನಶೈಲಿ ಸಮಾಲೋಚಕ.

Rice and Corn Rotti are soft while Ragi and Sajje are crisp. Depending on the method of preparation, the bread can be soft or hard. You must have heard many times that roti is better for health than chapathi. Fiber content is higher in these three grains than rice and wheat.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

3 hours ago

ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ

ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…

7 hours ago

ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |

ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…

7 hours ago

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ

ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…

3 days ago

ಮುಂಜಾನೆ ಏಳಬೇಕು, ಬೇಗನೇ ಏಳಬೇಕು

ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…

3 days ago

ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |

ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…

4 days ago