ಭತ್ತ ಸುಲಿದರೆ ಅಕ್ಕಿ | ಅಕ್ಕಿ ಊಟಕ್ಕೆ ಅಷ್ಟೇ ಅಲ್ಲ.. | ಅನೇಕ ರೋಗ ನಿವಾರಿಸುವ ಗುಣವೂ ಹೊಂದಿದೆ..|

October 31, 2023
3:17 PM

ಭತ್ತ(paddy) ನಮ್ಮ ಭಾರತದ ಪ್ರಮುಖ ಆಹಾರ‌‌‌‌‌‍(food). ಅಕ್ಕಿ ಊಟಕ್ಕೆ ಅಷ್ಟೇ ಅಲ್ಲ.. ಹಾಗೆ ಇದರಲ್ಲಿ ಹಸಿವು ನಿವಾರಿಸುವ ಗುಣ ಅಷ್ಟೇ ಅಲ್ಲ. ಇದನ್ನು ಅನೇಕ ರೋಗಗಳಿಗೆ ಔಷಧಿಯಾಗಿಯೂ(Medicinal) ಉಪಯೋಗಿಸಬಹುದು….

Advertisement
  • ಭತ್ತದ ಹೊಟ್ಟನ್ನು ಸುಟ್ಟು ಬೂದಿ ಮಾಡಿ ಚೆನ್ನಾಗಿ ಗಾಳಿಸಿ ವಸ್ತ್ರಗಾಳಿತ ಚೂರ್ಣಕ್ಕೆ ಸೈಂಧವ ಲವಣ ಸೇರಿಸಿ ಹಲ್ಲುಜ್ಜಲು ಉಪಯೋಗಿಸಿದರೆ ಹಲ್ಲು ನೋವು ಗುಣವಾಗುತ್ತದೆ.
  • ಭತ್ತದ ಹೊಟ್ಟಿನ ಬಸ್ಮಕ್ಕೆ ಅಂಟುವಾಳ ಪುಡಿ ಸೇರಿಸಿ ಸ್ನಾನಕ್ಕೆ ಉಪಯೋಗಿಸುವುದರಿಂದ ಕಜ್ಜಿ ತುರಿ ಗುಣವಾಗುತ್ತದೆ.
  • ಭತ್ತ ವನ್ನು ಹುರಿದು ಅರಳು ಮಾಡಿ ಮೇಲಿನ ಕವಚವನ್ನು ಬೇರ್ಪಡಿಸಿ ಆಹಾರವಾಗಿ ಉಪಯೋಗಿಸುವುದರಿಂದ ಅಜೀರ್ಣ ಗ್ಯಾಸ್ಟ್ರಿಕ್ ಗುಣವಾಗುತ್ತದೆ
  • ಭತ್ತದ ಮಿಲ್ಲಿನಲ್ಲಿ ಅಕ್ಕಿ ಮಾಡಿಸಿದಾಗ ಅಕ್ಕಿಯ ಜೊತೆಯಲ್ಲಿ ತೌಡು ಬರುತ್ತದೆ. ಇದು ಅತ್ಯಂತ ಪೌಷ್ಟಿಕವಾದ ಆಹಾರ. ಇದನ್ನು ಹುರಿದು ತುಪ್ಪ ಹಾಕಿ ಬೆಲ್ಲ ಹಾಕಿ ಉಂಡೆ ಮಾಡಿ ಮಕ್ಕಳಿಗೆ ತಿನ್ನಿಸಿದರೆ ತುಂಬಾ ಒಳ್ಳೆಯದು. ಇದು ವಿಟಮಿನ್ ಗಳ ಆಗರ
  • ತೌಡು ಡ್ರೈ ಫ್ರೂಟ್ಸ್ ಎಲ್ಲಾ ಸೇರಿಸಿ ಮಕ್ಕಳಿಗೆ ಮತ್ತು ಗರ್ಭಿಣಿ ಸ್ತ್ರೀಯರಿಗೆ ಕೊಡಬಹುದಾದ ಒಳ್ಳೆಯ ತಿನಿಸನ್ನು ತಯಾರಿಸಬಹುದು.
  • ಅಕ್ಕಿಯಿಂದ ಮಾಡುವ ಖಾದ್ಯಗಳು ತಮಗೆಲ್ಲ ಚಿರಪರಿಚಿತ.
  • ಅಕ್ಕಿಯನ್ನು ಹುರಿದು ಪುಡಿ ಮಾಡಿ ಬಿಸಿನೀರಿನೊಂದಿಗೆ ಸೇವಿಸಿದರೆ ಗ್ಯಾಸ್ಟ್ರಿಕ್ ಗುಣವಾಗುತ್ತದೆ.
  • ಒಂದು ಚಮಚ ಅಕ್ಕಿ ಹಿಟ್ಟಿಗೆ ನೀರು ಹಾಕಿ ದೋಸೆ ಹಿಟ್ಟಿನಂತೆ ಕದಡಿ ಬಿಸಿ ಮಾಡಿ ಪೇಸ್ಟ್ ಮಾಡಿ ಕೊಂಡು ಕುರದ ಮೇಲೆ ಹಚ್ಚಿದರೆ ಕುರು ಒಡೆಯುತ್ತದೆ.
  • ಅಕ್ಕಿ ಹಿಟ್ಟನ್ನು ದೋಸೆ ಹಿಟ್ಟಿನಂತೆ ಕದಡಿ ಕಾಯಿಸಿ ಪೇಸ್ಟ್ ಮಾಡಿ ಅರಿಶಿನ ನಿಂಬೆರಸ ಸೇರಿಸಿ ಮುಖಕ್ಕೆ ಪ್ಯಾಕ್ ಹಾಕುವುದರಿಂದ ಮುಖದ ಕಪ್ಪು ಕಲೆ ಬಂಗು ಮತ್ತು ಇತರೆ ಕಲೆಗಳು ಗುಣವಾಗುತ್ತದೆ.
  • ದೇಹ ಆಕಸ್ಮಿಕ ಬೆಂಕಿಯಿಂದ ಅಥವಾ ನೀರಿನಿಂದ ಸುಟ್ಟಾಗ ಅಕ್ಕಿ ಹಿಟ್ಟನ್ನು ಗಾಯದ ಮೇಲೆ ಉದುರಿಸಿದರೆ ಬೊಬ್ಬೆ ಏಳುವುದಿಲ್ಲ.
ಬರಹ :
ಸುಮನಾ ಮಳಲಗದ್ದೆ, ಪಾರಂಪರಿಕ ವೈದ್ಯರು, 9980182883
Paddy is the most important food of our India. Rice is not only for lunch.. It also has the property of relieving hunger. It can be used medicinally for many diseases

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹೆಚ್ಚುತ್ತಿರುವ ತಾಪಮಾನ | 2030 ರ ವೇಳೆಗೆ ಭಾರತದಲ್ಲಿ ಶೇ.5 ರಷ್ಟು ಉತ್ಪಾದನೆ ಕುಸಿತ
April 2, 2025
11:46 PM
by: The Rural Mirror ಸುದ್ದಿಜಾಲ
ರೈತರ ಹಿತಾಸಕ್ತಿ ರಕ್ಷಿಸಲು ಪಿಎಂ-ಕಿಸಾನ್ | ರೈತರಿಗೆ ನಿಖರ ಹವಾಮಾನ ಮುನ್ಸೂಚನೆಗೂ ಕ್ರಮ |
April 2, 2025
9:31 PM
by: The Rural Mirror ಸುದ್ದಿಜಾಲ
ದೇಶದಲ್ಲಿ 40 ಸಾವಿರ ಗ್ರಾಮ ಪಂಚಾಯತ್ ಗಳಿಗೆ ಕಚೇರಿಗಳಿಲ್ಲ…!
April 2, 2025
8:51 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 02-04-2025 | ಮುಂದೆ 10 ದಿನಗಳ ಕಾಲ ಮಳೆಯ ವಾತಾವರಣ ಸಾಧ್ಯತೆ |
April 2, 2025
11:02 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group