ವಿದ್ಯಾಬೋಧಿನಿ ಹಿರಿಯ ಪ್ರಾಥಮಿಕ ಶಾಲೆಗೆ ರೈಟ್ ಟು ಲಿವ್ ಕೋಟೆ ಪೌಂಡೇಷನ್ ನಿಂದ ಐದು ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಬಾಲಕಿಯರ ಟಾಯ್ಲೆಟ್ ಕೊಡುಗೆ ನೀಡಲಾಯಿತು.
ಅಹಾನ ಸಂಸ್ಥೆ ಬೆಂಗಳೂರು ಇವರು ರೈಟ್ ಟು ಲಿವ್ ಕೋಟೆ ಪೌಂಡೇಷನ್ ಮೂಲಕ ವಿದ್ಯಾಬೋಧಿನಿ ಹಿರಿಯ ಪ್ರಾಥಮಿಕ ಶಾಲೆಗೆ 10 ಸುಸಜ್ಜಿತ ಟಾಯ್ಲೆಟ್ ಕೊಡುಗೆ ನೀಡಿದ್ದಾರೆ. ರೈಟ್ ಟು ಲಿವ್ ಕೋಟೆ ಪೌಂಡೇಷನ್ ಸಮನ್ವಯ ಅಧಿಕಾರಿ ಪ್ರದೀಪ್ ಉಬರಡ್ಕ ಉಪಸ್ಥಿತರಿದ್ದರು. ಶಶಿಕಲಾ ಜಿ ಕೆ ವನಶ್ರಿ ಪೆರುವಾಜೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ರಾಧಾಕೃಷ್ಣರಾವ್ ಯು. ಶಾಲಾ ನಿಕಟ ಪೂರ್ವ ಅಧ್ಯಕ್ಷರಾದ ವೆಂಕಟ್ರಮಣ ಭಟ್. ಶಾಲಾ ಸಂಚಾಲಕರಾದ ಪಿ ಜಿ ಎಸ್ ಎನ್ ಪ್ರಸಾದ್, ಶಾಲಾ ಕೋಶಾಧಿಕಾರಿ ಕೈಂತಾಜೆ ರಾಮ್ ಭಟ್. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ರುಕ್ಮಯ್ಯ ನಾಯ್ಕ್ ಇದ್ದರು.
ಶಾಲಾ ಮುಖ್ಯಗುರು ಕೃಷ್ಣಮೂರ್ತಿ ಸ್ವಾಗತಿಸಿದರು. ಶಿಕ್ಷಕಿ ಅನಿತಾ ಟಿ. ಧನ್ಯವಾದ ಅರ್ಪಿಸಿದರು. ಶಿಕ್ಷಕ ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel