ಯುಗಾದಿ ದಿನವೇ ಸಿಹಿ ಸುದ್ದಿ ಕೊಟ್ಟ ರಿಷಬ್ ಶೆಟ್ಟಿ; ಇಲ್ಲಿದೆ ‘ಕಾಂತಾರ 2’ ಅಪ್ಡೇಟ್

Advertisement

ಕಾಂತರ 2 ಗಾಗಿ ಇಡೀ ವಿಶ್ವವೇ ಕಾದು ಕೂತಿದೆ. ಕಾಂತರ ಮೊದಲ ಮೇನಿಯಾದಿಂದ ಜನತೆ ಇನ್ನೂ ಹೊರ ಬಂದಿಲ್ಲ. ಇದೀಗ ಕಾತರದಿಂದ ಕಾದಿದ್ದ ಅಭಿಮಾನಿಗಳಿಗೆ ರಿಷಬ್ಶೆಟ್ಟಿ ಅವರುಕಾಂತಾರ 2’ ಸಿನಿಮಾ ಬಗ್ಗೆ ಅಪ್ಡೇಟ್ನೀಡಿದ್ದಾರೆ. ಅದರ ಜೊತೆಗೆ ಅವರು ಯುಗಾದಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.

Advertisement

ನಟ ರಿಷಬ್ಶೆಟ್ಟಿ ಅವರು ‘ಕಾಂತಾರ 2’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾ ಬಗ್ಗೆ ಅವರು ಯಾವಾಗ ಅಪ್​ಡೇಟ್​ ನೀಡಲಿದ್ದಾರೆ ಎಂದು ಪ್ರೇಕ್ಷಕರು ಕಾದಿದ್ದರು. ಯುಗಾದಿ ಹಬ್ಬದ ಪ್ರಯುಕ್ತ ರಿಷಬ್​ ಶೆಟ್ಟಿ ಹೊಸ ಸುದ್ದಿ ನೀಡಿದ್ದಾರೆ. ಈ ಶುಭ ದಿನದಂದು ಕಾಂತಾರ 2’ ಸ್ಕ್ರಿಪ್ಟ್​ ಕೆಲಸ ಆರಂಭ ಆಗಿದೆ ಎಂದು ಅವರು ತಿಳಿಸಿದ್ದಾರೆ.

Advertisement

ಈ ಸಿಹಿ ಸುದ್ದಿ ನೀಡುವ ಮೂಲಕ ಅವರು ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ. ‘ಬರವಣಿಗೆಯ ಆದಿ’ ಎಂಬ ಕ್ಯಾಪ್ಷನ್​ನೊಂದಿಗೆ ಅವರು ಪೋಸ್ಟರ್​ ಹಂಚಿಕೊಂಡಿದ್ದಾರೆ. ಅದನ್ನು ಹೊರತುಪಡಿಸಿ ಅವರು ಹೆಚ್ಚೇನೂ ಮಾಹಿತಿ ಬಿಟ್ಟುಕೊಟ್ಟಿಲ್ಲ.  ಆದಷ್ಟ ಬೇಗ ರಿಷಬ್ ಶೆಟ್ಟಿ ಶೂಟಿಂಗ್​ ಆರಂಭಿಸಲಿ ಎಂದು ಫ್ಯಾನ್ಸ್​ ಬಯಸುತ್ತಿದ್ದಾರೆ.

ತುಳುನಾಡಿನ ಕಥೆಯುಳ್ಳ ‘ಕಾಂತಾರ’ ಸಿನಿಮಾ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಬಾಕ್ಸ್​ ಆಫೀಸ್​ನಲ್ಲಿ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡುವ ಮೂಲಕ ರಿಷಬ್​ ಶೆಟ್ಟಿ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟ ಸಿನಿಮಾ ಅದು. ಅದರ ಸಕ್ಸಸ್​ ಮೀಟ್​ನಲ್ಲಿ ‘ಕಾಂತಾರ 2’ ಬಗ್ಗೆ ಅಧಿಕೃತವಾಗಿ ಘೋಷಿಸಲಾಗಿತ್ತು. ‘ಹೊಂಬಾಳೆ ಫಿಲ್ಮ್ಸ್​’ ಬ್ಯಾನರ್​ ಮೂಲಕ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಲು ಪ್ಲ್ಯಾನ್​ ಮಾಡಲಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಯುಗಾದಿ ದಿನವೇ ಸಿಹಿ ಸುದ್ದಿ ಕೊಟ್ಟ ರಿಷಬ್ ಶೆಟ್ಟಿ; ಇಲ್ಲಿದೆ ‘ಕಾಂತಾರ 2’ ಅಪ್ಡೇಟ್"

Leave a comment

Your email address will not be published.


*