ರಾಜ್ಯದಲ್ಲಿ ಏರುತ್ತಿರುವ ಡೆಂಗ್ಯು ಪ್ರಕರಣ | ಬರೋಬ್ಬರಿ 7 ಸಾವಿರ ಗಡಿದಾಟಿದ ಕೇಸ್‌ | ಸಾವಿನ ಸಂಖ್ಯೆಯಲ್ಲೂ ಹೆಚ್ಚಳ

July 8, 2024
1:27 PM

ರಾಜ್ಯದ(Karnataka) ಜಿಲ್ಲೆಗಳಲ್ಲಿ ಮುಂಗಾರು ಮಳೆ(Rain) ಜೋರಾಗುತ್ತಿದ್ದಂತೆ ಡೆಂಗ್ಯು ಸೋಂಕಿತರ (Dengue fever) ಸಂಖ್ಯೆಯೂ ಮಿತಿ ಮೀರುತ್ತಿದೆ.  ಜೊತೆಗೆ ಸಾವಿನ ಸಂಖ್ಯೆಯೂ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ರಾಜ್ಯದಲ್ಲಿ ಇಲ್ಲಿಯವರೆಗೂ 7 ಸಾವಿರ ಗಡಿ ದಾಟಿದ ಡೆಂಗ್ಯು ಪಾಸಿಟಿವ್ ಕೇಸ್‌ಗಳ(Positive Case) ಸಂಖ್ಯೆ. 

Advertisement
Advertisement
ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಜಿಲ್ಲೆಗಳು : ಚಿಕ್ಕಮಗಳೂರಲ್ಲಿ 521 ಜನರು ಸೋಂಕಿತರಾಗಿದ್ರೆ ಮೈಸೂರಲ್ಲಿ 496, ಹಾವೇರಿ 481, ಧಾರವಾಡ 289, ಚಿತ್ರದುರ್ಗು 275, ಹಾಸನ 224 ಜನರು ಡೆಂಗ್ಯು ಸೋಂಕಿನಿಂದ ಕಂಗಾಲಾಗಿದ್ದಾರೆ. ಸಾವಿನ ಸಂಖ್ಯೆಯೂ ಮಿತಿ ಮೀರುತ್ತಿದ್ದು, ಹಾಸನ, ಮೈಸೂರು, ಗದಗದಲ್ಲಿ ತಲಾ ಒಬ್ಬೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. 
ಹಾಸನದಲ್ಲಿ ಡೆಂಗ್ಯು ಸೋಂಕು ಅಬ್ಬರ ಸೃಷ್ಟಿಸುತ್ತಿದೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಗದಗ ಜಿಲ್ಲೆಯಲ್ಲಿ ಶಂಕಿತ ಡೆಂಗ್ಯುಗೆ ಮೊದಲ ಬಲಿ ಆಗಿದೆ. ಶಿರುಂಜ ಗ್ರಾಮದ ಐದು ವರ್ಷದ ಮಗು ತೀವ್ರ ಜ್ವರದಿಂದ ಬಳಲುತ್ತಿತ್ತು. ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿತ್ತು. ಮೈಸೂರಲ್ಲಿ ಡೆಂಗ್ಯು ಸೋಂಕು ನಗಾರಿ ಬಾರಿಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ ನೇತೃತ್ವದಲ್ಲಿ ಸಭೆ ಮಾಡಲಾಗಿದ್ದು, ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಡೆಂಘೀ ಪ್ರಕರಣದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಡೆಂಗ್ಯು ಸೋಂಕಿಗೆ ಎರಡನೇ ಬಲಿ ಆಗಿದೆ.

ಈ ನಡುವೆ ಝೀಕಾ ವೈರಸ್‌ನಿಂದ ಜ್ವರ ಬಂದಿದ್ದ ಪ್ರಕರಣ ಶಿವಮೊಗ್ಗದಲ್ಲಿ ಪತ್ತೆಯಾಗಿತ್ತು. ಹಾವೇರಿಯಲ್ಲೂ ಡೆಂಗ್ಯು ಜೊತೆಗೆ ಹಾವೇರಿಯಲ್ಲಿ ಇಲಿ ಜ್ವರ ಪತ್ತೆಯಾಗಿದೆ. 12 ವರ್ಷದ ಬಾಲಕನಿಗೆ ಇಲಿ ಜ್ವರ ಬಂದಿದ್ದು, ಹಾವೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ.

ಸರ್ಕಾರ ಆರೋಗ್ಯಾಧಿಕಾರಿಗಳ ಸಭೆ ಮಾಡಿತ್ತು. ಜಿಲ್ಲಾಡಳಿತಕ್ಕೆ ಕಟ್ಟೆಚ್ಚರ ವಹಿಸಲು ಸೂಚಿಸಿತ್ತು. ಆರೋಗ್ಯ ಸಚಿವರು ಸಭೆ ಮಾಡಿ ಸುಮ್ಮನಾದ್ರು ಎನಿಸುತ್ತದೆ. ಯಾವುದೇ ಕ್ರಮ ಕೈಗೊಂಡಂತೆ ಕಾಣ್ತಿಲ್ಲ. ಸೂಕ್ತ ಕ್ರಮ ತೆಗೆದುಕೊಂಡು  ಡೆಂಗ್ಯು ಸೋಂಕಿತರಿಗೆ ಉತ್ತಮ ಚಿಕಿತ್ಸೆ ಕೊಡಿಸುವಂತೆ ಆಗಬೇಕಿದೆ.

  • ಅಂತರ್ಜಾಲ ಮಾಹಿತಿ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಉದ್ಯೋಗ | ಐಟಿಐ-ಡಿಪ್ಲೊಮಾ ಅಭ್ಯರ್ಥಿಗಳಿಗೆ ಇಲ್ಲಿದೆ ಅವಕಾಶ |
July 22, 2025
10:37 PM
by: The Rural Mirror ಸುದ್ದಿಜಾಲ
ಬಿಹಾರ ಸೇರಿ ಹಲವು ರಾಜ್ಯಗಳಲ್ಲಿ 2 ದಿನ ಭಾರಿ ಮಳೆ
July 22, 2025
10:01 PM
by: The Rural Mirror ಸುದ್ದಿಜಾಲ
ಒಂದೇ ಕುಟುಂಬದ ಮೂವರ ಮೃತ್ಯು | ತರಕಾರಿಗೆ ಸಿಂಪಡಿಸಿದ್ದ ಕ್ರಿಮಿನಾಶಕ ಜೀವಕ್ಕೇ ಕುತ್ತಾಯಿತೇ ?
July 22, 2025
9:52 PM
by: The Rural Mirror ಸುದ್ದಿಜಾಲ
 ಇಂದು ವಿಶ್ವ ಮಾವು ದಿನಾಚರಣೆ | ರಾಜ್ಯದ ಮಾವಿಗೆ ಜಗತ್ತಿನಾದ್ಯಂತ ಬೇಡಿಕೆ |
July 22, 2025
9:34 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group