ರಾಜ್ಯದ(Karnataka) ಜಿಲ್ಲೆಗಳಲ್ಲಿ ಮುಂಗಾರು ಮಳೆ(Rain) ಜೋರಾಗುತ್ತಿದ್ದಂತೆ ಡೆಂಗ್ಯು ಸೋಂಕಿತರ (Dengue fever) ಸಂಖ್ಯೆಯೂ ಮಿತಿ ಮೀರುತ್ತಿದೆ. ಜೊತೆಗೆ ಸಾವಿನ ಸಂಖ್ಯೆಯೂ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ರಾಜ್ಯದಲ್ಲಿ ಇಲ್ಲಿಯವರೆಗೂ 7 ಸಾವಿರ ಗಡಿ ದಾಟಿದ ಡೆಂಗ್ಯು ಪಾಸಿಟಿವ್ ಕೇಸ್‌ಗಳ(Positive Case) ಸಂಖ್ಯೆ.
ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಜಿಲ್ಲೆಗಳು : ಚಿಕ್ಕಮಗಳೂರಲ್ಲಿ 521 ಜನರು ಸೋಂಕಿತರಾಗಿದ್ರೆ ಮೈಸೂರಲ್ಲಿ 496, ಹಾವೇರಿ 481, ಧಾರವಾಡ 289, ಚಿತ್ರದುರ್ಗು 275, ಹಾಸನ 224 ಜನರು ಡೆಂಗ್ಯು ಸೋಂಕಿನಿಂದ ಕಂಗಾಲಾಗಿದ್ದಾರೆ. ಸಾವಿನ ಸಂಖ್ಯೆಯೂ ಮಿತಿ ಮೀರುತ್ತಿದ್ದು, ಹಾಸನ, ಮೈಸೂರು, ಗದಗದಲ್ಲಿ ತಲಾ ಒಬ್ಬೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಹಾಸನದಲ್ಲಿ ಡೆಂಗ್ಯು ಸೋಂಕು ಅಬ್ಬರ ಸೃಷ್ಟಿಸುತ್ತಿದೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಗದಗ ಜಿಲ್ಲೆಯಲ್ಲಿ ಶಂಕಿತ ಡೆಂಗ್ಯುಗೆ ಮೊದಲ ಬಲಿ ಆಗಿದೆ. ಶಿರುಂಜ ಗ್ರಾಮದ ಐದು ವರ್ಷದ ಮಗು ತೀವ್ರ ಜ್ವರದಿಂದ ಬಳಲುತ್ತಿತ್ತು. ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿತ್ತು. ಮೈಸೂರಲ್ಲಿ ಡೆಂಗ್ಯು ಸೋಂಕು ನಗಾರಿ ಬಾರಿಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ ನೇತೃತ್ವದಲ್ಲಿ ಸಭೆ ಮಾಡಲಾಗಿದ್ದು, ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಡೆಂಘೀ ಪ್ರಕರಣದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಡೆಂಗ್ಯು ಸೋಂಕಿಗೆ ಎರಡನೇ ಬಲಿ ಆಗಿದೆ.
ಈ ನಡುವೆ ಝೀಕಾ ವೈರಸ್‌ನಿಂದ ಜ್ವರ ಬಂದಿದ್ದ ಪ್ರಕರಣ ಶಿವಮೊಗ್ಗದಲ್ಲಿ ಪತ್ತೆಯಾಗಿತ್ತು. ಹಾವೇರಿಯಲ್ಲೂ ಡೆಂಗ್ಯು ಜೊತೆಗೆ ಹಾವೇರಿಯಲ್ಲಿ ಇಲಿ ಜ್ವರ ಪತ್ತೆಯಾಗಿದೆ. 12 ವರ್ಷದ ಬಾಲಕನಿಗೆ ಇಲಿ ಜ್ವರ ಬಂದಿದ್ದು, ಹಾವೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ.
ಸರ್ಕಾರ ಆರೋಗ್ಯಾಧಿಕಾರಿಗಳ ಸಭೆ ಮಾಡಿತ್ತು. ಜಿಲ್ಲಾಡಳಿತಕ್ಕೆ ಕಟ್ಟೆಚ್ಚರ ವಹಿಸಲು ಸೂಚಿಸಿತ್ತು. ಆರೋಗ್ಯ ಸಚಿವರು ಸಭೆ ಮಾಡಿ ಸುಮ್ಮನಾದ್ರು ಎನಿಸುತ್ತದೆ. ಯಾವುದೇ ಕ್ರಮ ಕೈಗೊಂಡಂತೆ ಕಾಣ್ತಿಲ್ಲ. ಸೂಕ್ತ ಕ್ರಮ ತೆಗೆದುಕೊಂಡು ಡೆಂಗ್ಯು ಸೋಂಕಿತರಿಗೆ ಉತ್ತಮ ಚಿಕಿತ್ಸೆ ಕೊಡಿಸುವಂತೆ ಆಗಬೇಕಿದೆ.
ಯಾವುದೇ ಬ್ಯಾಂಕು ಅಥವಾ ಸಹಕಾರಿ ಸಂಸ್ಥೆ ರೈತನಿಗೆ ಬೇಕಾಬಿಟ್ಟಿಯಾಗಿ ಅಲ್ಪಾವಧಿ ಬೆಳೆ ಸಾಲ…
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…