ಉರಿ ಬಿಸಿಲು ತಾರಕ್ಕೇರುತ್ತಿದೆ. ಬೆಳಿಗ್ಗೆ 9 ಗಂಟೆ ನಂತರ ಮನೆಯಿಂದ ಹೊರಗೆ ಕಾಲಿಡೊದೇ ಬೇಡ ಅನ್ನಿಸುತ್ತಿದೆ. ಹೊರಗಡೆ ಹೋದರೆ ತಂಪು ಪಾನೀಯ(Cold drinks), ಕಲ್ಲಂಗಡಿ(Watermelon), ಎಳನೀರು(Tender Coconut) ಕಡೆಗೆ ಕಣ್ಣು ಹೋಗುತ್ತದೆ. ಒಮ್ಮೆ ಕುಡಿದು ಸಮಾಧಾನ ಮಾಡಿಕೊಂಡರೆ ಸಾಕು ಅನ್ನಿಸುತ್ತದೆ. ಬಿಸಿಲಿನ ಬೇಗೆಗೆ ಜನ ತಂಪು ಪಾನೀಯದ ಕಡೆ ಮುಖ ಮಾಡುತ್ತಿದ್ದಾರೆ. ಇದ್ರಿಂದ ಸಹಜವಾಗಿಯೇ ಹಾಸನ ಭಾಗ ಸೇರಿದಂತೆ ರಾಜ್ಯದಾದ್ಯಂತ ಎಳನೀರು , ಕಲ್ಲಂಗಡಿ ವ್ಯಾಪಾರಿಗಳು(Traders) ಖುಷಿ ಆಗಿದ್ದಾರೆ. ರೇಟು(Rate) ಜಾಸ್ತಿಯಾದ್ರೂ, ಖರೀದಿಸೋರ ಸಂಖ್ಯೆನೂ ಜಾಸ್ತಿಯಾಗಿದೆ. ಸದ್ಯ ಕಲ್ಲಂಗಡಿ, ಎಳನೀರು ಮಾರ್ಕೆಟ್ (Market)ಸದಾ ಬ್ಯುಸಿಯಾಗಿದೆ.
ಭರ್ಜರಿ ಡಿಮ್ಯಾಂಡ್! : ಹೌದು, ಅರೆ ಮಲೆನಾಡು ಹಾಸನದಲ್ಲೂ ವಾತಾವರಣ ಬಿಸಿಯೇರಿದೆ. ಜನರು ಅತಿ ಹೆಚ್ಚು ಎಳನೀರು ಮತ್ತು ಕಲ್ಲಂಗಡಿ ಹಣ್ಣಿನತ್ತ ಮುಖ ಮಾಡುತ್ತಿದ್ದಾರೆ. ಸಹಜವಾಗಿಯೇ ಅವುಗಳ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ. 30 ರೂಪಾಯಿ ಇದ್ದ ಕಲ್ಲಂಗಡಿ ಹಣ್ಣಿನ ರೇಟು ಈಗ 40 ಆಗಿದೆ. ಆದ್ರೂ ಏನಿಲ್ಲ ಅಂದ್ರೂ ಒಂದೊಂದು ಕಲ್ಲಂಗಡಿ ಹಣ್ಣಿನ ಅಂಗಡಿಯಲ್ಲಿ 100 ರಿಂದ 150 ಹಣ್ಣುಗಳು ಮಾರಾಟವಾಗ್ತಿವೆ. ಅಲ್ಲದೇ, ಕಟ್ ಮಾಡಿರುವ ಕಲ್ಲಂಗಡಿ ಹಣ್ಣಿನ ಪೀಸ್‌ಗಳನ್ನು ತಿನ್ನೋದಕ್ಕೆ ಜನ ಮುಗಿಬೀಳುತ್ತಾರೆ.
ಉತ್ತಮ ಸಂಪಾದನೆ : ಮಳೆ, ಚಳಿಯ ಸಮಯದಲ್ಲಿ 50 ಕಲ್ಲಂಗಡಿ ಮಾರಾಟವಾದ್ರೆ ದೊಡ್ಡದು. ಆದ್ರೀಗ ಭರ್ಜರಿ ಡಿಮ್ಯಾಂಡ್ ಇದ್ದು, ವ್ಯಾಪಾರಿಗಳು ಕೂಡಾ ಎರಡು ದಿನಕ್ಕೊಮ್ಮೆ 400 ರಿಂದ 500 ರಷ್ಟಿರುವ ಕಲ್ಲಂಗಡಿ ಲೋಡ್ ಅನ್ನ ತರಿಸಿಕೊಳ್ಳುತ್ತಾರೆ. ಹೀಗೆ ಒಂದು ದಿನಕ್ಕೆ ಈ ವ್ಯಾಪಾರಿಗಳು ಏನಿಲ್ಲ ಅಂದ್ರೂ ದಿನಕ್ಕೆ 8 ರಿಂದ 10 ಸಾವಿರ ರೂಪಾಯಿವರೆಗೂ ಸಂಪಾದನೆ ಮಾಡುತ್ತಾರೆ.
ಎಳನೀರಿಗೂ ಹೆಚ್ಚಿದ ಬೇಡಿಕೆ! : ಇನ್ನು ಎಳನೀರಿಗೂ ಅಷ್ಟೇ ಭಾರೀ ಬೇಡಿಕೆ ಹೆಚ್ಚಿದೆ. 40 ರೂಪಾಯಿ ಅಂತೆ ಮಾರಾಟ ಮಾಡೋ ಎಳನೀರಿನಿಂದ ದಿನಕ್ಕೆ ಏನಿಲ್ಲ ಅಂದ್ರೂ 3 ರಿಂದ 4 ಸಾವಿರ ಆದಾಯವನ್ನು ಪಡೆಯುತ್ತಿದ್ದಾರೆ. ಒಟ್ಟಿನಲ್ಲಿ ಬಿಸಿಲಿನ ಬೇಗೆಗೆ ದಣಿವರಿದ ಜನರು ದರ ಎಷ್ಟಿದೆ ಅನ್ನೋದರ ಬದಲು ಇಂತಹ ನೀರಿನ ಅಂಶವಿರುವ ಹಣ್ಣುಗಳ ಮೊರೆ ಹೋಗುತ್ತಿದ್ದಾರೆ.
– ಅಂತರ್ಜಾಲ ಮಾಹಿತಿ
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಸಂಸ್ಕಾರದಿಂದ ಮೀಯದ ಮನಸ್ಸು, ತನ್ನ ಬಗ್ಗೆ ಯೋಚಿಸುವುದಿಲ್ಲ. ತನ್ನ ಭವಿಷ್ಯದತ್ತ ನೋಟ ಹರಿಸುವುದಿಲ್ಲ.…
ಶನಿವಾರ ಸಂಜೆ 5 ಗಂಟೆಗೆ ಆರಂಭವಾದ ತೀವ್ರ ಘರ್ಷಣೆಗಳ ನಂತರ ಭಾರತ ಮತ್ತು…
ಪೆಹಲ್ಗಾಮ್ ಭಯೋತ್ಪಾದಕರ ವಿರುದ್ಧ ಪ್ರಧಾನಿ ನರೇಂದ್ರಮೋದಿಯವರು ತೆಗೆದುಕೊಂಡಿರುವ ಕಠಿಣ ಕ್ರಮವನ್ನು ಸಂಪೂರ್ಣ ಬೆಂಬಲಿಸುವುದಾಗಿ…
ಒಂದೆರಡು ಕಡೆ ಸಂಜೆ, ರಾತ್ರಿ ಗುಡುಗು ಸಹಿತ ಸಾಮಾನ್ಯ ಮಳೆಯ ಸಾಧ್ಯತೆಗಳಿವೆ. ಮೇ14ರಿಂದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490