ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಕ್ಷೇತ್ರದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಲಿದೆ. ಇದು ಆರ್ಥಿಕತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದ್ದು ಕೃಷಿ ಸಾಲದ ಮೇಲೆ 2030 ರ ವೇಳೆ ಶೇ.30 ರಷ್ಟು ಪರಿಣಾಮ ಬೀರಬಹುದು ಎಂದು ಬಿಸಿಜಿ ವರದಿ ಹೇಳಿದೆ.ಸಾಲ ಮರುಪಾವತಿಯಲ್ಲಿ ವ್ಯತ್ಯಾಸ ಸಾಧ್ಯತೆಯ ಬಗ್ಗೆ ಉಲ್ಲೇಖಿಸಿದೆ.………ಮುಂದೆ ಓದಿ……..
2030 ರ ವೇಳೆಗೆ, ಈಗಿನ ಅಂದಾಜಿನ ಪ್ರಕಾರ, ಭಾರತದ 42 ಶೇಕಡಾ ಜಿಲ್ಲೆಗಳು 2 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಏರಿಕೆಯನ್ನು ಅನುಭವಿಸುವ ನಿರೀಕ್ಷೆಯಿದೆ. ಹಾಗಾಗಿ, ಮುಂದಿನ ಐದು ವರ್ಷಗಳಲ್ಲಿ 321 ಜಿಲ್ಲೆಗಳು ತಾಪಮಾನ ಏರಿಕೆಯಿಂದ ಸಂಕಷ್ಟ ಒಳಗಾಗಬಹುದು.ಇದು ನೇರವಾಗಿ ಕೃಷಿಯ ಮೇಲೆ ಪರಿಣಾಮ ಬೀರುತ್ತದೆ. ಕೃಷಿಯ ಮೇಲೆ ಪರಿಣಾಮ ಬೀರುವುದರಿಂದ ಆರ್ಥಕತೆಯ ಮೇಲೂ ಹೊಡೆತ ಬೀಳಬಹುದು. ವಾಣಿಜ್ಯ ಬ್ಯಾಂಕುಗಳ ಅರ್ಧದಷ್ಟು ಸಾಲವು ಪ್ರಕೃತಿ ಮತ್ತು ಪರಿಸರ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಯಾವುದೇ ನೈಸರ್ಗಿಕ ವಿಕೋಪವು ಪರಿಣಾಮ ಬೀರುತ್ತದೆ. ಹೀಗಾಗಿ ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ 30% ಕೃಷಿ ಮತ್ತು ವಸತಿ ಸಾಲಗಳಲ್ಲಿ ಮರುಪಾವತಿಯ ಮೇಲೆ ಒತ್ತಡವನ್ನು ಹೆಚ್ಚಿಸಬಹುದು ಎಂದು ಬಿಸಿಜಿ ವರದಿ ಹೇಳಿದೆ.
ವರದಿಯ ಪ್ರಕಾರ, ಸರಾಸರಿ ಜಾಗತಿಕ ತಾಪಮಾನವು ಈಗಾಗಲೇ ಸರಿಸುಮಾರು 1.2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ. ಹಿಂದಿನ ಹವಾಮಾನಗಳಿಗೆ ಹೋಲಿಸಿದರೆ ಕರಾವಳಿ ಪ್ರದೇಶಗಳಲ್ಲಿ ಈಗ ಪ್ರವಾಹ ಹೆಚ್ಚಾಗಿದ್ದು , ಕೃಷಿ ಉತ್ಪಾದನೆಯಲ್ಲಿ ಇಳಿಕೆಗೆ ಕಾರಣವಾಗುತ್ತಿದೆ. ಇದರ ಪರಿಣಾಮವಾಗಿ, ಏರುತ್ತಿರುವ ಹವಾಮಾನ ಕಾರಣದಿಂದ ಜನರ ತಲಾ ಆದಾಯದಲ್ಲಿ ಕುಸಿತ ಕಂಡುಬಂದಿದೆ ಎಂದು ಬಿಸಿಜಿ ವರದಿ ಹೇಳಿದೆ.