ಪೈಂಬೆಚ್ಚಾಲು- ಅಜ್ಜಾವರ ರಸ್ತೆ ಅವ್ಯವಸ್ಥೆ | ಊರ ಮುಖಂಡರಿಂದಲೇ ದುರಸ್ತಿ ಭಾಗ್ಯ….!

July 21, 2021
9:17 PM
ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೋಲ್ಚಾರಿನಿಂದ ಪೈಂಬೆಚ್ಚಾಲು ಮೂಲಕ ಅಜ್ಜಾವರ ಗ್ರಾಮವನ್ನು  ಸಂಪರ್ಕಿಸುವ ಜಿಲ್ಲಾ ಪಂಚಾಯತ್ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. ಇದೀಗ ಈ ರಸ್ತೆಯನ್ನು ಈಚೆಗೆ ಊರಿನ ಪ್ರಮುಖರಾದ ಟಿ ಹೆಚ್ ಹಸೈನಾರ್ ಹಾಜಿ ಅವರ ನೇತೃತ್ವದಲ್ಲಿ ದುರಸ್ತಿ ಮಾಡಲಾಯಿತು.

ಕೋಲ್ಚಾರಿನಿಂದ ಅಜ್ಜಾವರ ತನಕದ ಸುಮಾರು ಐದು ಕಿ.ಮೀ.ಉದ್ದವಿರುವ ಈ ರಸ್ತೆಗೆ ಇನ್ನೂ ಕೂಡಾ ಕಾಯಕಲ್ಪ ಒದಗಿ ಬಂದಿಲ್ಲ.  ಈ ರಸ್ತೆಗೆ ಪೈಂಬೆಚ್ಚಾಲು ಪ್ರದೇಶದ ಒಂದಷ್ಟು ಭಾಗದಲ್ಲಿ ಕಾಂಕ್ರೀಟೀಕರಣ ಮಾಡಲಾಗಿದ್ದು ರಸ್ತೆಗೆ ಸೂಕ್ತ ಚರಂಡಿ ವ್ಯವಸ್ತೆ ಇಲ್ಲದ ಕಾರಣ ಮಳೆಗಾಲದಲ್ಲಿ ನೀರು  ಹರಿದು ಕಾಂಕ್ರೀಟ್ ರಸ್ತೆಯು ಕೂಡಾ    ಹಾಳಾಗಿರುತ್ತದೆ.  ಇನ್ನು ಉಳಿದ ಕಡೆ ಇದುವರೆಗೂ ಯಾವುದೇ ರೀತಿಯ ಅಭಿವೃದ್ಧಿ ಕಾಣದ ಮಣ್ಣು ರಸ್ತಯಿದ್ದು ಮಳೆಗಾಲ ಬಂತೆಂದರೆ ಪೂರ್ತಿ ಕೆಸರುಮಯವಾಗಿ ಸಂಚಾರಕ್ಕೆ ಅಯೋಗ್ಯವಾಗಿರುತ್ತದೆ. ಈ ಪ್ರದೇಶದ ಜನರು ತುರ್ತು ಅಗತ್ಯಗಳಿಗಾಗಿ ನಗರವನ್ನು ಸಂಪರ್ಕಿಸಲು ಈ ರಸ್ತೆಯನ್ನು ಬಳಸಬೇಕಾಗಿದ್ದು ಮಳೆಗಾಲದಲ್ಲಿ ತೀರಾ ಸಂಕಷ್ಟ ಅನುಭವಿಸಬೇಕಾಗುತ್ತದೆ. ರಸ್ತೆ ಸಮಸ್ಯೆಯ ಕಾರಣ ಈ ಪ್ರದೇಶಕ್ಕೆ  ಸಾರ್ವಜನಿಕ ಬಸ್ಸು ಸಂಚಾರವು ಮಳೆಗಾಲದಲ್ಲಿ ಸಮರ್ಪಕವಾಗಿರದ ಕಾರಣ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂಕಷ್ಟ ಅನುಭವಿಸಬೇಕಾಗುತ್ತದೆ.

ಇದನ್ನು ಮನಗಂಡ ಊರಿನ ಮುಖಂಡರಾದ ಹಸೈನಾರ್ ಹಾಜಿಯವರು ತಮ್ಮ ಸ್ವಂತ ಖರ್ಚಿನಲ್ಲಿ ಜನರನ್ನು , ಕೆಲಸದ ಜನರನ್ನು ಸೇರಿಸಿ ಅಲ್ಲಲ್ಲಿ ರಸ್ತೆ ಗುಂಡಿಗಳಿಗೆ ಕಲ್ಲು, ಮಣ್ಣುಗಳನ್ನು ಹಾಕಿ ,ಚರಂಡಿ ದುರಸ್ತಿ ಮಾಡುವ  ಮೂಲಕ ರಸ್ತೆ ದುರಸ್ತಿ ಕಾರ್ಯ  ಮಾಡಿಸಿದ್ದಾರೆ. ಪ್ರತಿಯೊಂದಕ್ಕೂ ಸುಳ್ಯವನ್ನು ಅವಲಂಬಿಸುವ ಈ ಭಾಗದ ಜನತೆಗೆ ಈ ರಸ್ತೆಯು ಅತೀ ಹತ್ತಿರದ ರಸ್ತೆ ಮಾತ್ರವಲ್ಲದೆ ಅಜ್ಜಾವರ ದಿಂದ ಸುಳ್ಯದವರೆಗೆ ಉತ್ತಮ ರಸ್ತೆಯಿರುವ ಕಾರಣ ಈ ರಸ್ತೆಯನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಈ ರಸ್ತೆಗೆ ಸರಕಾರದಿಂದ ಯಾವುದೇ ರೀತಿಯ ಅನುದಾನ ಸಿಗದ ಕಾರಣ ಅಭಿವೃದ್ಧಿ ಕಾಣದೆ ಬಾಕಿ ಉಳಿದಿದೆ ಎಂದು ಸ್ಥಳೀಯರು ಹೇಳುತ್ತಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 28-03-2026 | ಎಪ್ರಿಲ್ 4 ರವರೆಗೆ ಕರಾವಳಿ–ಮಲೆನಾಡು ಪ್ರದೇಶಗಳಿಗೆ ಭಾರಿ ಮಳೆ ಸೂಚನೆ..!
March 28, 2026
2:03 PM
by: ಸಾಯಿಶೇಖರ್ ಕರಿಕಳ
ಬೀದಿ ನಾಯಿಗಳ ಸಮಸ್ಯೆ | 27,481 ನಾಯಿ ಕಡಿತ ಪ್ರಕರಣಗಳು ವರದಿ..!
March 28, 2026
11:07 AM
by: ಮಿರರ್‌ ಡೆಸ್ಕ್
ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು! ಮಂಗಳೂರಿನಲ್ಲಿ ಕಠಿಣ ಎಚ್ಚರಿಕೆ
March 28, 2026
7:38 AM
by: ಮಿರರ್‌ ಡೆಸ್ಕ್
ಹವಾಮಾನ ವರದಿ | 27-03-2026 | ಮಾರ್ಚ್ 28 ರಿಂದ ಮಳೆ ಹೆಚ್ಚಳ ಸೂಚನೆ | ರಾಜ್ಯಾದ್ಯಂತ ಗುಡುಗು ಸಹಿತ ಮಳೆಯ ಮುನ್ಸೂಚನೆ
March 27, 2026
1:12 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror