ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ಕಾಂತುಕುಮೇರಿ ರಸ್ತೆಯಲ್ಲಿ ಬಾವಿಯ ರೀತಿಯ ಹೊಂಡ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ರಸ್ತೆಯಲ್ಲಿ ನಿಂತು ನೋಡಿದಾಗ ಆಳವಾಗಿರುವ ಈ ಗುಂಡಿ ಬಾವಿಯಂತೆ ಕಾಣುತ್ತಿದೆ. ಹೀಗಾಗಿ ಜನರಿಗೆ ಆತಂಕವಾಗಿದೆ. ಸ್ಥಳಕ್ಕೆ ಕಲ್ಮಡ್ಕ ಗ್ರಾ.ಪಂ. ಉಪಾಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ಪಿ.ಡಿ.ಓ. ಪ್ರವೀಣ್, ಸದಸ್ಯೆ ಪವಿತ್ರ ಕುದ್ವ ಸೇರಿದಂತೆ ಹಲವು ಮಂದಿ ಆಗಮಿಸಿದ್ದಾರೆ.
ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ಗ್ರಾಮೀಣ ರಸ್ತೆಯಲ್ಲಿ ದಿಢೀರನೆ ಪ್ರತ್ಯಕ್ಷವಾದ ಬೃಹತ್ ಗುಂಡಿ| ಜನರಿಗೆ ಸಂಚಾರಕ್ಕೆ ಆತಂಕ | #ruralmirror @ZP_DaksnKannada @gokRDPR #sullia pic.twitter.com/F5WEKMmVju
Advertisement— theruralmirror (@ruralmirror) July 31, 2022
ಪಂಬೆತ್ತಾಡಿಯಿಂದ ಕಾಂತುಕುಮೇರಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಜಿ.ಪಂ.ಗೆ ಒಳಪಟ್ಟ ಪ್ರಮುಖ ರಸ್ತಯಾಗಿದ್ದು, ಈ ರಸ್ತಯನ್ನು ಅಭಿವೃದ್ಧಿ ಪಡಿಸುವಂತೆ ಈ ಮೊದಲು ಎರಡು ಬಾರಿ ಇಲಾಖೆಗೆ ಮನವಿ ಮಾಡಿದ್ದರೂ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಈಗ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಈ ರಸ್ತೆಯಲ್ಲಿ ಸಂಚರಿಸುವವರು ಜಾಗ್ರತೆವಹಿಸಬೇಕು. ಈ ಘಟನೆಯನ್ನು ಕೂಡಲೆ ಜಿಲ್ಲಾಡಳಿತದ ಗಮನಕ್ಕೆ ತರಲಾಗುವುದೆಂದು ಮಹೇಶ್ ಕುಮಾರ್ ಕರಿಕ್ಕಳ ತಿಳಿಸಿದ್ದಾರೆ.