ರಸ್ತೆ ಗುಂಡಿ ಮುಚ್ಚದೆ ಅನಾಹುತವಾದರೆ ಅಧಿಕಾರಿಗಳೇ ಹೊಣೆ – ಹೈಕೋರ್ಟ್‌ ವಾರ್ನಿಂಗ್

November 12, 2021
10:11 PM

ರಸ್ತೆ ಗುಂಡಿಗಳಿಂದ ಅಪಘಾತವಾದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಹೈಕೋರ್ಟ್‌ ಎಚ್ಚರಿಸಿದೆ. ಬೀದರ್‌ ಜಿಲ್ಲೆಯ ರಸ್ತೆ ಅವ್ಯವಸ್ಥೆಗೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತ ಗುರುನಾಥ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತ್ತು.

Advertisement
Advertisement

ಬೀದರ್‌ ಜಿಲ್ಲೆಯ ಹಲವು ರಸ್ತೆಗಳು ಅವ್ಯವಸ್ಥೆಯಿಂದ ಕೂಡಿತ್ತು. ಹೀಗಿದ್ದರೂ ಇಲಾಖೆಗಳ, ಅಧಿಕಾರಿಗಳ,  ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಬೇಸತ್ತು ಸಾಮಾಜಿಕ ಕಾರ್ಯಕರ್ತ ಗುರುನಾಥ ಅವರು 2019  ರಲ್ಲಿ  ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ, ಸಮಗ್ರ ಮಾಹಿತಿ ಕೇಳಿದ್ದರು, ಇದಕ್ಕೆ ಮಳೆಯಿಂದಾಗಿ ರಸ್ತೆ ದುರಸ್ತಿ ಸಾಧ್ಯವಾಗಿಲ್ಲ ಎಂಬ ಸರಕಾರಿ ವಕೀಲರ ವಾದವನ್ನು ಹಾಗೂ  ಸಮಜಾಯಿಷಿಕೆಗೆ ಅಸಮಾಧಾನದ ವ್ಯಕ್ತ ಪಡಿಸಿದ ನ್ಯಾಯಪೀಠವು,  2019  ರಲ್ಲಿ ಈ ಅರ್ಜಿ ಸಲ್ಲಿಸಿದ್ದಾಗಿತ್ತು, ಈಗಲೂ ರಸ್ತೆ ದುರಸ್ತಿಯಾಗದೇ ಇರಲು ಏನು ಕಾರಣ ಎಂದು ಪ್ರಶ್ನಿಸಿ 2021 ರಲ್ಲಿ  ಕೂಡಾ 4 ವಾರಗಳ ಕಾಲಾವಕಾಶ ಕೇಳಿ  ರಸ್ತೆ ದುರಸ್ತಿ ಮಾಡುವ ಭರವಸೆ ನೀಡಲಾಗಿತ್ತು. ಈಗ ಮತ್ತೆ ಕಾಲಾವಕಾಶ ಹಾಗೂ ಸಮಜಾಯಿಷಿಕೆಗೆ ಏಕೆ ಎಂದು ನ್ಯಾಯಪೀಠವು ಪ್ರಶ್ನಿಸಿತ್ತು. ಇದು ನಿಜಕ್ಕೂ ಬೇಸರದ ಸಂಗತಿ ಎಂದು ನ್ಯಾಯಪೀಠ ಗರಂಗೊಂಡಿತ್ತು.

ಅಧಿಕಾರಿಗಳು ಸರಕಾರದ ಮಾತು ಕೇಳುತ್ತಿಲ್ಲ ಎಂದೆನಿಸುತ್ತದೆ, ಮಳೆಯು ನೆಪ ಮಾತ್ರಾ.  ನೆಪಗಳ ಬದಲಾಗಿ ಕೆಲಸ ಆಗಬೇಕಾಗಿದೆ, ರಸ್ತೆ ಇಂದಿನ ಅವಶ್ಯಕತೆಗಳಲ್ಲಿ ಒಂದಾಗಿದೆ. ಹೀಗಾಗಿ ನ್ಯಾಯಾಲಯಕ್ಕೆ ಹೇಗೆ ಕೆಲಸ ಮಾಡಿಸಬೇಕು ಎಂದು ಗೊತ್ತಿದೆ, ಸಂಬಂಧಪಟ್ಟವರ ವೇತನ ತಡೆಹಿಡಿದರೆ ತಿಳಿಯುತ್ತದೆ ಎಂದು ಖಾರವಾಗಿ ಹೇಳಿದ ನ್ಯಾಯಪೀಠ, ಮುಂದೆ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ಸಂಭವಿಸಿದರೆ ಅದಕ್ಕೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು , ಹೀಗಾಗಿ ಜಿಲ್ಲೆಯ ರಸ್ತೆಗಳನ್ನು ಗುಂಡಿಗಳನ್ನು ತಕ್ಷಣವೇ ದುರಸ್ತಿ ಮಾಡದೇ ಇದ್ದರೆ ಕ್ರಮ ಖಚಿತ. ಮುಂದಿನ ವಿಚಾರಣೆ  ವೇಳೆ ಕೆಲಸ ಮಾಡದೇ ಇದ್ದರೆ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ,  ಮುಖ್ಯ ಇಂಜಿನಿಯರ್ ಸೇರಿದಂತೆ ಎಲ್ಲಾ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ನಿರ್ದೇಶಿಸಿದ ನ್ಯಾಯಪೀಠ ಜನವರಿ 22 ಕ್ಕೆ ವಿಚಾರಣೆ ಮುಂದೂಡಿತು.

 

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಉದ್ಯೋಗ | ಐಟಿಐ-ಡಿಪ್ಲೊಮಾ ಅಭ್ಯರ್ಥಿಗಳಿಗೆ ಇಲ್ಲಿದೆ ಅವಕಾಶ |
July 22, 2025
10:37 PM
by: The Rural Mirror ಸುದ್ದಿಜಾಲ
ಬಿಹಾರ ಸೇರಿ ಹಲವು ರಾಜ್ಯಗಳಲ್ಲಿ 2 ದಿನ ಭಾರಿ ಮಳೆ
July 22, 2025
10:01 PM
by: The Rural Mirror ಸುದ್ದಿಜಾಲ
ಒಂದೇ ಕುಟುಂಬದ ಮೂವರ ಮೃತ್ಯು | ತರಕಾರಿಗೆ ಸಿಂಪಡಿಸಿದ್ದ ಕ್ರಿಮಿನಾಶಕ ಜೀವಕ್ಕೇ ಕುತ್ತಾಯಿತೇ ?
July 22, 2025
9:52 PM
by: The Rural Mirror ಸುದ್ದಿಜಾಲ
 ಇಂದು ವಿಶ್ವ ಮಾವು ದಿನಾಚರಣೆ | ರಾಜ್ಯದ ಮಾವಿಗೆ ಜಗತ್ತಿನಾದ್ಯಂತ ಬೇಡಿಕೆ |
July 22, 2025
9:34 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group