MIRROR FOCUS

ಗ್ರಾಮೀಣ ಭಾಗದ ದುರವಸ್ಥೆ ನೋಡಿ…! ನೀರಿನ ಪೈಪಿನ ಸಂಕಷ್ಟ ಜನತೆಗೆ..! ಇಲಾಖೆಗಳು ಎಲ್ಲಿದ್ದಾವೆ..?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಗ್ರಾಮೀಣ ಭಾಗಕ್ಕೆ ಶುದ್ಧ ಕುಡಿಯುವ ನೀರು…! ಅದು ಎಲ್ಲಿಂದಲೋ ಬರುವ ನೀರು.ಅದಕ್ಕೆ ಕೋಟಿ ಕೋಟಿ  ಅನುದಾನ..!. ಈ ಯೋಜನೆ ಪೂರ್ತಿಯಾಗುವುದು ಯಾವಾಗ ಎಂದು ಯಾರಿಗೂ ಗೊತ್ತಿಲ್ಲ. ಆದರೆ ಈಗ ಜನರು ದಿನವೂ ಸಂಕಷ್ಟ ಅನುಭವಿಸಬೇಕಾದ ಸ್ಥಿತಿ ಬಂದಿದೆ. ಇಲ್ಲಿರುವ ಚಿತ್ರವೇ ಅದಕ್ಕೆ ಸಾಕ್ಷಿ..…… ಮುಂದೆ ಓದಿ……

Advertisement
ಬಳ್ಪದಲ್ಲಿ ಅನ್ನಭಾಗ್ಯದ ಲಾರಿ ಹೂತಿರುವುದು
ಬಳ್ಪದಲ್ಲಿ ಗೊಬ್ಬರ ತುಂಬಿದ ಲಾರಿ ಹೂತಿರುವುದು

ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆ “ಜಲವೀವನ್‌ ಮಿಶನ್‌” ಆರಂಭವಾಗಿದೆ. ದೊಡ್ಡ ದೊಡ್ಡ ಪೈಪ್‌ ಕಾಡಿನ ನಡುವೆ ಇರುವ ಪರಿಶುದ್ಧವಾದ ಹಳ್ಳಿಗೂ ನೀರು ಸರಬರಾಜು. ಅಲ್ಲಿ ಯಾರಿಗೆ ನೀರು, ಯಾಕಾಗಿ ನೀರು.. ಯಾರಿಗೆ ಗೊತ್ತು..? ಹೇಳುವವರು ಇಲ್ಲ, ಕೇಳುವವರು ಮೊದಲೇ ಇಲ್ಲ. ಮಾತನಾಡುವವರು ಇಲ್ಲವೇ ಇಲ್ಲ..!. ಇಂತಹದೊಂದು ಯೋಜನೆ ಇದು. ಮಳೆಗಾಲ ಆರಂಭವಾಗಿ ಎರಡು ತಿಂಗಳಾಗಿದೆ, ಉತ್ತಮವಾಗಿದ್ದ ರಸ್ತೆಗಳ ಬದಿಗಳೆಲ್ಲಾ ಕೆಸರಾಗಿದೆ. ವಾಹನಗಳು ಗುಂಡಿಗೆ ಬೀಳುತ್ತಿವೆ. ಇಂತದೊಂದು ಸಂಕಷ್ಟವನ್ನು ಕಡಬ ತಾಲೂಕಿನ ಬಳ್ಪದಲ್ಲಿ ಜನರು ಅನುಭವಿಸುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಆದರ್ಶ ಗ್ರಾಮ ಎಂದು ಬಳ್ಪವನ್ನು ಕರೆಯಲಾಗಿತ್ತು. ಹಲವು ಕಾಮಗಾರಿಗಳು ಇಲ್ಲಿ ನಡೆದಿದೆ. ಕಾಂಕ್ರೀಟ್‌ ರಸ್ತೆಯೂ ಆಗಿತ್ತು. ಜಲಜೀವನ ಮಿಶನ್‌ ಯೋಜನೆಯ ಮೂಲಕ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಯ ಪೈಪ್‌ಗಾಗಿ ರಸ್ತೆಯ ಬದಿಯನ್ನು ಅಗೆಯಲಾಗಿದೆ. ಇದರಿಂದ ಈಚೆಗಷ್ಟೇ ಆದ ರಸ್ತೆಯೂ ಹಾಳಾಗುತ್ತಿದೆ. ಬಳ್ಪ ಪೇಟೆಯಲ್ಲಿ ಸಹಕಾರಿ ಸಂಘ ಕಚೇರಿ ಇದೆ. ಇಲ್ಲಿ ಗೊಬ್ಬರ ಸೇರಿದಂತೆ ರೇಶನ್‌ ಪಡೆಯಲು ಕೃಷಿಕರು ಬರುತ್ತಾರೆ. ಆದರೆ ಪರದಾಟ ನಡೆಸಬೇಕಾದ ಸ್ಥಿತಿ ಇದೆ. ರಸ್ತೆಯಲ್ಲಿ ಅಗೆದಿರುವ ಕಾರಣ ಲಾರಿ ಸಹಿತ ಇತರ ವಾಹನಗಳು ಗುಂಡಿಗೆ ಬೀಳುತ್ತವೆ. ಜನರು ಪರದಾಡುತ್ತಾರೆ…!.…… ಮುಂದೆ ಓದಿ……

ಬಳ್ಪದಲ್ಲಿ ಲಾರಿ ಹೂತಿರುವುದು
ಮೊಗ್ರದಲ್ಲಿ ಕುಸಿತವಾಗಿರುವುದು
ಮೊಗ್ರದಲ್ಲಿ ಕುಸಿತವಾಗಿರುವುದು

ಗ್ರಾಮೀಣ ಭಾಗದ ಹಲವು ರಸ್ತೆಗಳು ಇದೇ ಸ್ಥಿತಿಗೆ ಒಳಗಾಗಿವೆ. ಬೇಸಿಗೆಯಲ್ಲಿ ರಸ್ತೆ, ಚರಂಡಿ ಎಲ್ಲವೂ ಸರಿಯಾಗಿತ್ತು. ಇದೀಗ ರಸ್ತೆಯ ಬದಿಗಳಲ್ಲಿ ಕೆಸರು, ಚರಂಡಿಗಳು ಮಣ್ಣಿನಿಂದ ಮುಚ್ಚಿದೆ. ಈಚೆಗಷ್ಟೆ ಸುಳ್ಯ ತಾಲೂಕಿನ ಗ್ರಾಮೀಣ ಭಾಗವಾದ ಗುತ್ತಿಗಾರು-ಬಳ್ಳಕ್ಕ-ಪಂಜ ರಸ್ತೆ ಮೊಗ್ರ ಎಂಬಲ್ಲಿ ಇದೇ ಪೈಪ್‌ ಲೈನ್‌ ನ ಗುಂಡಿಗೆ ನೀರು ಇಳಿದು ರಸ್ತೆಯ ಬದಿ ಮಾತ್ರವಲ್ಲ ಗುಡ್ಡವೇ ಕುಸಿತದ ಭೀತಿಯಲ್ಲಿದೆ. ಇಂತಹ ಹಲವು ಪ್ರಕರಣಗಳು ಇಂದು ಗ್ರಾಮೀಣ ಭಾಗದಲ್ಲಿ ನಡೆಯುತ್ತಿದೆ.

Advertisement

ಈಚೆಗಷ್ಟೆ ಗುತ್ತಿಗಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪೈಕ ಎಂಬಲ್ಲಿಯೂ ಮಳೆಗಾಲದಲ್ಲಿ ರಸ್ತೆಯ ಬದಿಯಲ್ಲಿ ಪೈಪ್‌ ಲೈನ್‌ ಅಳವಡಿಕೆಗೆ ಯಂತ್ರದ ಮೂಲಕ ಅಗೆಯಲಾಗಿತ್ತು, ಪೈಕ ಸರ್ಕಾರಿ ಶಾಲೆಯ ಆವರಣ ಗೋಡೆಗೂ ಸಮಸ್ಯೆಯಾಗಿತ್ತು.  ಮಳೆಗಾಲದಲ್ಲಿ ಅದೂ ಗ್ರಾಮೀಣ ಭಾಗದಲ್ಲಿ ಯಂತ್ರದ ಮೂಲಕ ಕೆಲಸ ಮಾಡಿದರೆ ರಸ್ತೆಗಳ ಪರಿಸ್ಥಿತಿ ಹೇಗಿರಬೇಡ, ಜನರು ಓಡಾಟ ಮಾಡುವುದಾದರೂ ಹೇಗೆ ಎಂಬ ಕನಿಷ್ಟ ಜ್ಞಾನವೂ ಅಧಿಕಾರಿಗಳಿಗೆ ಇಲ್ಲವೇ ಎಂದು ಜನರು ಪ್ರಶ್ನಿಸಿದ್ದರು.

ಹೀಗಾಗಿ ಗ್ರಾಮೀಣ ಭಾಗದಲ್ಲಿ ಈ ಯೋಜನೆಯ ಮೂಲಕ ಆಗಿರುವ ಅನಾಹುತಗಳಿಗೆ ತಕ್ಷಣವೇ ಕ್ರಮ ಅಗತ್ಯ ಇದೆ. ಅದರಲ್ಲೂ ಬಳ್ಪದಲ್ಲಿ ಸಹಕಾರಿ ಸಂಘದ ಕಟ್ಟಡದ ಮುಂದೆ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ತಕ್ಷಣವೇ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದಾರೆ.…… ಮುಂದೆ ಓದಿ……

Advertisement

The removal of the pipeline intended for the drinking water initiative under the Jaljeevan Mission project is currently posing significant challenges for the local populace. The negligence exhibited by the relevant departments has resulted in considerable difficulties for residents in rural areas. It is imperative that these departments address this issue with immediate attention.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ದೇಶದ ವಾಯುವ್ಯ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ

ಮುಂದಿನ ಎರಡು ಮೂರು ದಿನಗಳಲ್ಲಿ ದೇಶದ ವಾಯುವ್ಯ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ…

2 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ವಿಧಾತ್ರಿ ಎಂ, ಮೈಸೂರು

ವಿಧಾತ್ರಿ ಎಂ, 6 ನೇ ತರಗತಿ, ರೋಟರಿ ಮಿಡ್‌ಟೌನ್ ಶಾಲೆ, ಮೈಸೂರು | …

2 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ನೈನಿಕಾ ಬಿ ಸಿ

ನೈನಿಕಾ.ಬಿ.ಸಿ , 4ನೇ ತರಗತಿ , ಸೈಂಟ್ ಆನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆ,…

3 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ನಯೋನಿಕಾ.ಬಿ.ಸಿ.

ನಯೋನಿಕಾ.ಬಿ.ಸಿ., 4 ನೇ ತರಗತಿ, ಸೈಂಟ್‌ ಆನ್ಸ್‌ ಶಾಲೆ ಕಡಬ | -…

3 hours ago

ಕೇರಳದಲ್ಲಿ ನಿಫಾ ಎಚ್ಚರಿಕೆ | ತಡೆಗಟ್ಟುವ ಕ್ರಮಗಳ ಬಗ್ಗೆ ನಿಗಾ

ನಿಪಾ ವೈರಸ್ ಹರಡುವಿಕೆಯ ವಿರುದ್ಧ ರಾಜ್ಯವು ತನ್ನ ತಡೆಗಟ್ಟುವ ಕ್ರಮಗಳನ್ನು ತೀವ್ರಗೊಳಿಸಿದೆ ಎಂದು…

4 hours ago

ಶಕ್ತಿ ವಸತಿ ಶಾಲೆಯಲ್ಲಿ ಗುರು ಪೂರ್ಣಿಮೆ | ದೇವರು ಹಾಗೂ ಗುರು ಇಬ್ಬರೂ ಪೂಜೆಗೆ ಯೋಗ್ಯ

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ದೇವರು ಹಾಗೂ ಗುರು…

5 hours ago