ನಮ್ಮ ಶ್ರಮ ಗ್ರಾಮೀಣ ಭಾರತಕ್ಕಾಗಿ, ಗ್ರಾಮೀಣ ಅಭಿವೃದ್ಧಿಯ ಉದ್ದೀಪನಕ್ಕಾಗಿ ಎಂಬ ಧ್ಯೇಯದೊಂದಿಗೆ ಗುತ್ತಿಗಾರು ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಶ್ರಮದಾನದ ಮೂಲಕ ನಡೆಯಿತು.
ಗುತ್ತಿಗಾರು ಗ್ರಾಮದ ಮೊಗ್ರ-ಏರಣಗುಡ್ಡೆ -ಎಡೋಣಿ-ಕಮಿಲ ರಸ್ತೆ ಅಭಿವೃದ್ಧಿಗಾಗಿ 50 ಕ್ಕೂ ಅಧಿಕ ಮಂದಿ ತೊಡಗಿಸಿಕೊಂಡರು. ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ರಸ್ತೆಯನ್ನು ತಾತ್ಕಾಲಿಕ ಅಭಿವೃದ್ಧಿಗೆ ಶ್ರಮಿಸಿದರು. ಗ್ರಾಮೀಣ ಭಾಗದ ಮೂಲಭೂತ ಅವಶ್ಯಕತೆಗಳಾದ ರಸ್ತೆ, ನೀರು, ಸೇತುವೆ,ನೆಟ್ವರ್ಕ್ ಇದಿಷ್ಟು ವ್ಯವಸ್ಥೆ ಇಂದು ಅಗತ್ಯ ಇದೆ. ಗ್ರಾಮೀಣ ಭಾರತ ಗಟ್ಟಿಯಾದರೆ ಮಾತ್ರವೇ ಭಾರತ ಗಟ್ಟಿಯಾಗಲು ಸಾಧ್ಯ ಎಂಬ ಉದ್ದೇಶದಿಂದ ಶ್ರಮಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel