ರಸ್ತೆ ಬದಿ ತ್ಯಾಜ್ಯ ಎಸೆತಕ್ಕೆ ಎಫ್‌ಐಆರ್ | ʼನಾನು ಎಸೆದಿಲ್ಲ’ ಎಂದರೂ ಸಿಕ್ಕ ಸಾಕ್ಷಿ…!

April 8, 2026
9:59 PM
ರಸ್ತೆ ಬದಿ ತ್ಯಾಜ್ಯ ಎಸೆದ ಪ್ರಕರಣದಲ್ಲಿ ಅಂಗಡಿ ಮಾಲಿಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಾರ್ವಜನಿಕ ಸ್ವಚ್ಛತೆ ಉಲ್ಲಂಘನೆಗೆ ಪಂಚಾಯತ್ ಕಠಿಣ ಕ್ರಮ ಕೈಗೊಂಡಿದೆ.

ಸಾರ್ವಜನಿಕ ಸ್ವಚ್ಛತೆಗೆ ವಿರುದ್ಧವಾಗಿ ರಸ್ತೆ ಬದಿ ತ್ಯಾಜ್ಯ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಸ್ಥಳೀಯ ಮಟ್ಟದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಬೆಳ್ಳಾರೆ–ಸುಳ್ಯ ರಸ್ತೆಯ ಬೇಂಗಮಲೆ ಪ್ರದೇಶದಲ್ಲಿ ಮೂರು ಕಡೆ ತ್ಯಾಜ್ಯದ ಚೀಲಗಳನ್ನು ಎಸೆದಿರುವುದು ಪತ್ತೆಯಾಗಿದೆ. ಪರಿಶೀಲನೆ ನಡೆಸಿದಾಗ, ಆ ಚೀಲಗಳಲ್ಲಿ ಸುಳ್ಯದ ಗಾಂಧಿನಗರದಲ್ಲಿರುವ ಅಯೋಧ್ಯಾ ಮೆನ್ಸ್ ಡ್ರೆಸ್ & ಸ್ಪೋರ್ಟ್ಸ್ ಜೆರ್ಸಿ ಶಾಪ್ ಗೆ ಸೇರಿದ ವಸ್ತುಗಳು ಪತ್ತೆಯಾಗಿವೆ.

ಚೀಲಗಳಲ್ಲಿ ಮಳಿಗೆಯ ಬಿಲ್ಲುಗಳು, ಜಾತ್ರೆಯ ಆಮಂತ್ರಣ ಪತ್ರಿಕೆಗಳು ಹಾಗೂ ಮೆಸ್ಕಾಂ ವಿದ್ಯುತ್ ಬಿಲ್ಲುಗಳು ದೊರೆತಿದ್ದು, ತ್ಯಾಜ್ಯವು ಮಳಿಗೆಯದ್ದೇ ಎಂಬುದು ದೃಢಪಟ್ಟಿದೆ.

ಗ್ರಾಮಪಂಚಾಯತ್ ವತಿಯಿಂದ ಅಂಗಡಿ ಮಾಲಿಕರಿಗೆ ಕರೆ ಮಾಡಿ, ಕಚೇರಿಗೆ ಬಂದು ದಂಡ ಪಾವತಿಸಲು ಸೂಚನೆ ನೀಡಲಾಗಿತ್ತು. ಆದರೆ ಅಂಗಡಿ ಮಾಲಿಕ ಅಕ್ಷಯ್ ರಜಪೂತ್ ಕಲ್ಲಡ್ಕ ಅವರು ತ್ಯಾಜ್ಯ ಎಸೆದಿಲ್ಲವೆಂದು ಹೇಳಿ ದಂಡ ಪಾವತಿಸಲು ನಿರಾಕರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಗ್ರಾಮಪಂಚಾಯತ್ ಆಡಳಿತ ಮಂಡಳಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸೂಚನೆಯಂತೆ ಪ್ರಕರಣ ದಾಖಲಿಸಲು ಮುಂದಾಗಿದೆ.

ಐವರ್ನಾಡು ಪಂಚಾಯತ್ ಪಿ.ಡಿ.ಒ ಶ್ಯಾಮಪ್ರಸಾದ್ ಅವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ಸಲ್ಲಿಸಿದ್ದು, ಇದೀಗ ಪ್ರಕರಣ ದಾಖಲಾಗಿ ತನಿಖೆ ಆರಂಭವಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

An FIR has been registered in Ivarnadu Gram Panchayat limits of Sullia taluk after garbage was found dumped roadside at Bengamale. Investigation revealed that the waste belonged to a garment shop in Sullia, based on bills and documents found in the bags. The shop owner denied the allegation and refused to pay the penalty, leading the Panchayat to file a formal police complaint. Authorities have initiated legal action, sending a strong message on public sanitation enforcement.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಆಟೋ ಗ್ಯಾಸ್ ಕೊರತೆ ವದಂತಿ- ರಾಜ್ಯ ಸರ್ಕಾರದಿಂದ ಸ್ಪಷ್ಟನೆ..!
April 8, 2026
10:24 PM
by: ಮಿರರ್‌ ಡೆಸ್ಕ್
2026ರಲ್ಲಿ ಮಳೆ ಕಡಿಮೆ…? ಎಲ್‌ನಿನೊ ಪರಿಣಾಮದಿಂದ ಭಾರತಕ್ಕೆ ಸಾಮಾನ್ಯಕ್ಕಿಂತ ಕಡಿಮೆ ಮಳೆ…!
April 8, 2026
7:47 AM
by: ದ ರೂರಲ್ ಮಿರರ್.ಕಾಂ
ಭಾರತದ ಬಂದರುಗಳು ಚೇತರಿಕೆ..! 915 ಮಿಲಿಯನ್ ಟನ್ ಸರಕು ಸಾಗಣೆ – ಶೇ.7 ಹೆಚ್ಚಳ ದಾಖಲೆ
April 8, 2026
7:30 AM
by: ಮಿರರ್‌ ಡೆಸ್ಕ್
ಅಡಿಕೆ ಎಲೆಚುಕ್ಕೆ ರೋಗ | ತಕ್ಷಣದ ಪರಿಹಾರಕ್ಕಿಂತ ವೈಜ್ಞಾನಿಕ ನಿರ್ವಹಣೆ ಮುಖ್ಯ | 3 ವರ್ಷದ ಅಧ್ಯಯನದ ಬಳಿಕವೇ ಅಂತಿಮ ಪರಿಹಾರ
April 7, 2026
11:25 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror