‘ರೋಸ್ಟೆಡ್ ಅಡಿಕೆ’ ಆಮದು ವರ್ಗೀಕರಣಕ್ಕೆ ಮತ್ತೊಂದು ತಿರುವು – ಹೈಕೋರ್ಟ್ ತೀರ್ಪು ಉಲ್ಲೇಖಿಸಿ ಅರ್ಜಿ ತಿರಸ್ಕರಿಸಿದ ಮುಂಬೈ ಪ್ರಾಧಿಕಾರ

September 28, 2026
10:20 PM
‘ರೋಸ್ಟೆಡ್ ಅಡಿಕೆ’ಯನ್ನು ಯಾವ ಸುಂಕ ವರ್ಗದಡಿ ಪರಿಗಣಿಸಬೇಕು ಎಂಬ ವಿವಾದಕ್ಕೆ ಮುಂಬೈ CAAR ಮತ್ತೊಂದು ಅರ್ಜಿ ಸ್ವೀಕರಿಸದೆ, ಈಗಾಗಲೇ ಹೈಕೋರ್ಟ್ ತೀರ್ಪು ನೀಡಿದೆ ಎಂದು ಹೇಳಿದೆ. ಆದರೆ ಇದೇ ವರ್ಗೀಕರಣದ ಕುರಿತು ಬಾಂಬೆ ಹೈಕೋರ್ಟ್ 2026ರಲ್ಲಿ ಕಾನೂನು ಪ್ರಶ್ನೆಗಳನ್ನು ವಿಚಾರಣೆಗೆ ಸ್ವೀಕರಿಸಿರುವುದರಿಂದ, ಆಮದು ಅಡಿಕೆಯ ಸುಂಕ ಮತ್ತು ದೇಶೀಯ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಬೆಳವಣಿಗೆಗಳು ಮುಂದುವರಿದಿವೆ

ವಿದೇಶದಿಂದ ಆಮದು ಮಾಡಿಕೊಳ್ಳುವ “ರೋಸ್ಟೆಡ್ ಅಡಿಕೆ”ಗೆ ಯಾವ ಸುಂಕ ವರ್ಗೀಕರಣ ಅನ್ವಯಿಸಬೇಕು ಎಂಬ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ರೋಸ್ಟೆಡ್ ಅಡಿಕೆಯನ್ನು ಅಧ್ಯಾಯ 20ರಡಿ ವರ್ಗೀಕರಿಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಮುಂಬೈನ ಕಸ್ಟಮ್ಸ್ ಅಡ್ವಾನ್ಸ್ ರೂಲಿಂಗ್ ಪ್ರಾಧಿಕಾರ (CAAR) ಇತ್ತೀಚೆಗೆ ವಿಚಾರಣೆಗೆ ಸ್ವೀಕರಿಸದೆ ತಿರಸ್ಕರಿಸಿದೆ. ಇದೇ ಪ್ರಶ್ನೆಯ ಕುರಿತು ಹೈಕೋರ್ಟ್ ಈಗಾಗಲೇ ತೀರ್ಪು ನೀಡಿರುವುದೇ ಇದಕ್ಕೆ ಕಾರಣ ಎಂದು ಪ್ರಾಧಿಕಾರ ಹೇಳಿದೆ.

ಮ್ಯಾನ್ಮಾರ್, ಇಂಡೋನೇಷ್ಯಾ ಹಾಗೂ ಶ್ರೀಲಂಕಾದಿಂದ “ರೋಸ್ಟೆಡ್ ಅಡಿಕೆ” ಆಮದು ಮಾಡಿಕೊಳ್ಳಲು ಉದ್ದೇಶಿಸಿದ್ದ ಅರ್ಜಿದಾರರು, ಅಡಿಕೆಯನ್ನು ಸುಮಾರು 130–150 ಡಿಗ್ರಿ ಸೆಲ್ಸಿಯಸ್‌ನಲ್ಲಿ ಹಲವು ಬಾರಿ ಬಿಸಿ ಮಾಡಿ, ತಣ್ಣಗಾಗಿಸಿ ಮತ್ತೆ ಹುರಿಯುವ ಪ್ರಕ್ರಿಯೆ ನಡೆಸಲಾಗುತ್ತದೆ. ಈ ಪ್ರಕ್ರಿಯೆಯಿಂದ ಅಡಿಕೆಯ ಭೌತಿಕ ಮತ್ತು ರಾಸಾಯನಿಕ ಗುಣಗಳಲ್ಲಿ ಬದಲಾವಣೆ ಉಂಟಾಗುವುದರಿಂದ ಅದು ಸಾಮಾನ್ಯ ಒಣ ಅಡಿಕೆಯಾಗಿ ಉಳಿಯುವುದಿಲ್ಲ ಎಂದು ವಾದಿಸಿದ್ದರು. ಹೀಗಾಗಿ ನಿಯಮದಂತೆಯೇ ಇತರೆ ಹುರಿದ ಕಾಯಿ ಮತ್ತು ಬೀಜಗಳು ಅಡಿಯಲ್ಲಿ ವರ್ಗೀಕರಿಸಬೇಕು ಎಂದು ಕೋರಿದ್ದರು.

ಆದರೆ ಕಸ್ಟಮ್ಸ್ ಪ್ರಾಧಿಕಾರವು, ಈಗಾಗಲೇ ನ್ಯಾಯಾಲಯ ನಿರ್ಧರಿಸಿರುವ ಪ್ರಶ್ನೆಯ ಕುರಿತು ಮತ್ತೆ ಅಡ್ವಾನ್ಸ್ ರೂಲಿಂಗ್ ನೀಡಲು ಅವಕಾಶ ನೀಡುವುದಿಲ್ಲ ಎಂದು ಪ್ರಾಧಿಕಾರ ಹೇಳಿದೆ. ಹೀಗಾಗಿ ಮತ್ತೆ ಈ ಪ್ರಕರಣವು ಸಂಪೂರ್ಣವಾಗು ಮುಕ್ತಾಯವಾಗಿಲ್ಲ.

The classification of imported “roasted areca nuts” under India’s Customs Tariff has entered another legal phase. The Customs Authority for Advance Rulings (CAAR), Mumbai, recently declined to entertain an application seeking classification under Chapter 20, stating that the same issue had already been decided by the Madras High Court. Earlier litigation had held that roasted areca nuts could fall under the heading for other roasted nuts and seeds. However, the Bombay High Court in June 2026 admitted an appeal raising questions on whether roasted areca nuts should instead be classified under Chapter 8. The issue is significant because tariff classification can affect customs duty and the competitive position of imported areca nut in the Indian market.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬರಕ್ಕೆ ರಾಗಿ ಕೂಡ ಸೋಲುತ್ತಿದೆ – ‘ಬರ ನಿರೋಧಕ’ ಎಂದರೆ ಮಳೆ ಇಲ್ಲದಿದ್ದರೂ ಬೆಳೆಯುತ್ತದೆ ಎಂದಲ್ಲ!
September 28, 2026
9:05 PM
by: ದ ರೂರಲ್ ಮಿರರ್.ಕಾಂ
₹2,000ಕ್ಕಿಂತ ಹೆಚ್ಚಿನ UPI ವಹಿವಾಟಿನ MDRಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ
September 28, 2026
2:31 PM
by: ದ ರೂರಲ್ ಮಿರರ್.ಕಾಂ
ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತಕ್ಕೆ ಎರಡು ಪದಕ: ಪುರುಷರಿಗೆ ಬೆಳ್ಳಿ, ಮಹಿಳೆಯರಿಗೆ ಕಂಚು – ಪ್ರಧಾನಿ ಮೋದಿ ಅಭಿನಂದನೆ
September 28, 2026
1:43 PM
by: ಮಿರರ್‌ ಡೆಸ್ಕ್‌
ಮಳೆ ಬದಲಾಗಿದೆಯೇ? ಪ್ರಕೃತಿ ಬದಲಾಗಿದೆಯೇ? ಅಥವಾ ನಾವೇ ಬದಲಾಗಿದ್ದೇವೆಯೇ?
September 28, 2026
1:03 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror