ರೋಬೋಟ್‌ಗಳು ರೈತರನ್ನು ಬದಲಾಯಿಸುತ್ತಿಲ್ಲ. ಆದರೆ ಕೃಷಿಯಲ್ಲಿರುವ ದೊಡ್ಡ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಸಣ್ಣ-ಪ್ರಮಾಣದ ಕೃಷಿಯು ಇಂದು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಕಾರ್ಮಿಕರ ಕೊರತೆ, ವೆಚ್ಚಗಳ ಏರಿಕೆ, ಹಾಗೂ ಕಡಿಮೆ ಜಮೀನಿನಲ್ಲಿ ಹೆಚ್ಚಿನ ಉತ್ಪಾದನೆ ಸಾಧಿಸುವಲ್ಲಿ ರೈತರ ಮೇಲೆ ಒತ್ತಡ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ, ಹಿಂದೆ ದೊಡ್ಡ ಕೃಷಿಗಳಿಗೆ ಮಾತ್ರ ಸೀಮಿತವಾಗಿದ್ದ ರೋಬೋಟಿಕ್ ತಂತ್ರಜ್ಞಾನ ಈಗ ಸಣ್ಣ ರೈತರಿಗೂ ಸುಲಭವಾಗಿ ಲಭ್ಯವಾಗುತ್ತಿದೆ.
AI, ರೋಬೋಟಿಕ್ಸ್ ಮತ್ತು ಸ್ಮಾರ್ಟ್ ಸಾಧನಗಳು ಕೃಷಿಯನ್ನು ಹೆಚ್ಚು ದಕ್ಷ, ಸುಸ್ಥಿರ ಹಾಗೂ ಲಾಭದಾಯಕವಾಗಿಸುವತ್ತ ಸಾಗುತ್ತಿವೆ. ಸಣ್ಣ ಜಮೀನಿನಲ್ಲೂ ಉಪಯೋಗಿಸಬಹುದಾದ 5 ಪ್ರಮುಖ ರೋಬೋಟಿಕ್ ತಂತ್ರಜ್ಞಾನಗಳು ಈಗ ಪರಿಚಯಿಸಲಾಗುತ್ತಿದೆ.
ಸ್ವಯಂಚಾಲಿತ ನಿರ್ವಹಣಾ ಬಾಟ್‌ಗಳು : ಇಂದು ಕೀಟನಾಶಕ ಸಿಂಪಡಣೆ, ಹಣ್ಣು ಆರಿಸುವುದು ಮತ್ತು ಬೆಳೆಗಳ ಸ್ಕ್ಯಾನಿಂಗ್ ಕಾರ್ಯಗಳನ್ನು ಸ್ವಯಂಚಾಲಿತವಾಗಿ ಮಾಡುವ ನಿರ್ವಹಣಾ ಬಾಟ್‌ಗಳು ಅಭಿವೃದ್ಧಿಯಾಗಿವೆ. ಯಂತ್ರ ದೃಷ್ಟಿ ಹಾಗೂ ಅಲ್ಗಾರಿದಮ್ ಆಧಾರಿತ ನಿಯಂತ್ರಣಗಳಿಂದ, ಸಸ್ಯಕ್ಕೆ ಹಾನಿಯಾಗದಂತೆ ನಿಖರ ಸಮಯದಲ್ಲಿ ಕಾರ್ಯನಿರ್ವಹಿಸುತ್ತವೆ. ಈ ಬಾಟ್‌ಗಳು ಒಂದೊಂದು ಸಾಲು ಅಥವಾ ನಿರ್ದಿಷ್ಟ ಸಸ್ಯದ ಮೇಲೆ ಕೇಂದ್ರೀಕರಿಸುವುದರಿಂದ ರಾಸಾಯನಿಕ ಬಳಕೆ ಕಡಿಮೆಯಾಗಿ, ಇಳುವರಿ ಹೆಚ್ಚಾಗುತ್ತದೆ. ಪುನರಾವರ್ತಿತ ಕೆಲಸಗಳನ್ನು ಯಂತ್ರಗಳ ಮೂಲಕ ಮಾಡುವುದರಿಂದ ರೈತರ ಸಮಯ ಮತ್ತು ಶಕ್ತಿ ಉಳಿಯುತ್ತದೆ.
AI ಮತ್ತು ತಂತ್ರಜ್ಞಾನ ಚಾಲಿತ ಉಪಕರಣಗಳು : ರೋಬೋಟ್‌ಗಳು ಸಂಪೂರ್ಣವಾಗಿ ಕೃಷಿ ಸಾಧನಗಳನ್ನು ಬದಲಾಯಿಸುತ್ತಿಲ್ಲ, ಆದರೆ ಅವುಗಳನ್ನು ಹೆಚ್ಚು ಸ್ಮಾರ್ಟ್ ಆಗಿ ರೂಪಿಸುತ್ತಿವೆ. ಭೂಮಿ ತಯಾರಿ, ವಸ್ತು ಸಾಗಣೆ ಮತ್ತು ಮೂಲಸೌಕರ್ಯ ಕೆಲಸಗಳಿಗೆ GPS ಹಾಗೂ ನಿರ್ವಹಣಾ ವ್ಯವಸ್ಥೆಗಳನ್ನು ಒಳಗೊಂಡ ಯಂತ್ರಗಳನ್ನು ಬಳಸಬಹುದು. ಇದು ಗ್ರೇಡ್ ಮಾಡುವುದು, ಲೋಡ್ ಮಾಡುವುದು ಮುಂತಾದ ಕೆಲಸಗಳನ್ನು ಕಡಿಮೆ ವೆಚ್ಚದಲ್ಲಿ ಮಾಡಲು ಇದು ನೆರವಾಗುತ್ತದೆ. ಸಣ್ಣ ರೈತರಿಗೆ ಒಂದೇ ಯಂತ್ರದಿಂದ ಹಲವು ಕಾರ್ಯ ಸಾಧ್ಯವಾಗುವುದು ದೊಡ್ಡ ಪ್ರಯೋಜನವಾಗಿದೆ.
ಸ್ವಯಂಚಾಲಿತ ಟ್ರ್ಯಾಕ್ಟರ್‌ಗಳು : ಉಳುವೆ, ಬಿತ್ತನೆ ಅಥವಾ ಕೊಯ್ಲು ಮಾಡುವುದಕ್ಕೆ ರೈತರು ಗಂಟೆಗಳ ಕಾಲ ಟ್ರ್ಯಾಕ್ಟರ್ ಚಲಾಯಿಸಬೇಕಾಗುತ್ತದೆ. ಆದರೆ ಇದೀಗ GPS, ತಂತ್ರಜ್ಞಾನ ಹಾಗೂ ಕ್ಯಾಮೆರಾ ವ್ಯವಸ್ಥೆ ಹೊಂದಿರುವ ಸ್ವಾಯತ್ತ ಟ್ರ್ಯಾಕ್ಟರ್‌ಗಳು ಬಂದಿವೆ. ಈ ಟ್ರ್ಯಾಕ್ಟರ್‌ಗಳು ಕಡಿಮೆ ಮೇಲ್ವಿಚಾರಣೆಯಲ್ಲಿ ನಿಖರ ಸಾಲುಗಳನ್ನು ನಿರ್ವಹಿಸುತ್ತವೆ. ಇಂಧನ ಬಳಕೆ ಕಡಿಮೆಯಾಗಿ, ಉತ್ಪಾದನಾ ಸಮಯ ಕೂಡ ಇಳಿಯುತ್ತದೆ. ಕೆಲವೊಂದು ಕಾರ್ಯಗಳನ್ನು ರಾತ್ರಿ ಹೊತ್ತು ಮಾಡುವಂತೆ ಕೂಡ ಪ್ರೋಗ್ರಾಂ ಮಾಡಬಹುದಾಗಿದೆ.
AI-ಚಾಲಿತ ವೀಡರ್ ಮತ್ತು ಸ್ಕ್ಯಾನಿಂಗ್ ತಂತ್ರಜ್ಞಾನಗಳು : ಕಳೆ ನಿಯಂತ್ರಣ ಸಣ್ಣ ರೈತರಿಗೆ ಶ್ರಮದಾಯಕ ಹಾಗೂ ದುಬಾರಿ ಕೆಲಸವಾಗಿದೆ. ಈಗ ಸಾಲುಗಳ ಮಧ್ಯೆ ಕಾರ್ಯನಿರ್ವಹಿಸುವ AI-ಚಾಲಿತ ವೀಡರ್‌ಗಳು ಕಳೆಗಳನ್ನು ಗುರುತಿಸಿ, ಅಗತ್ಯವಿರುವಷ್ಟು ಮಾತ್ರ ಕಳೆನಾಶಕ ಸಿಂಪಡಿಸಬಹುದು ಅಥವಾ ಯಾಂತ್ರಿಕವಾಗಿ ಕಿತ್ತೊಗೆಯಬಹುದು. ಇಂತಹ ತಂತ್ರಜ್ಞಾನಗಳು ಹತ್ತಿ ಹೊಲಗಳಲ್ಲಿ 63%–72% ಯಶಸ್ಸಿನ ಪ್ರಮಾಣವನ್ನು ತಲುಪಿರುವ ವರದಿಗಳಿವೆ. ಹಸಿರುಮನೆಗಳಲ್ಲಿ ಕೂಡ ಸ್ಕ್ಯಾನಿಂಗ್ ಮೂಲಕ ಆರಂಭಿಕ ಹಂತದಲ್ಲೇ ಸಸ್ಯಗಳನ್ನು ಸರಿಯಾಗಿ ನಿರ್ವಹಿಸಿ ತ್ಯಾಜ್ಯ ಕಡಿಮೆಯಾಗುತ್ತದೆ.
ಸ್ಮಾರ್ಟ್ ಡ್ರೋನ್‌ಗಳು: ಸಣ್ಣ ಜಮೀನಿಗೆ ಅತಿ ಸುಲಭವಾಗಿ ಲಭ್ಯವಾಗಿರುವ ರೋಬೋಟಿಕ್ ಸಾಧನಗಳಲ್ಲಿ ಡ್ರೋನ್‌ಗಳು ಪ್ರಮುಖವಾಗಿವೆ. ಇವು ಮಲ್ಟಿಸ್ಪೆಕ್ಟ್ರಲ್ ಮತ್ತು ಇನ್ಫ್ರಾರೆಡ್ ಸೆನ್ಸರ್ ಮೂಲಕ ಸಸ್ಯದ ಒತ್ತಡ, ನೀರಾವರಿ ಸಮಸ್ಯೆ ಮತ್ತು ರೋಗ ಲಕ್ಷಣಗಳನ್ನು ಮುಂಚಿತವಾಗಿಯೇ ಪತ್ತೆ ಮಾಡುತ್ತವೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಸಣ್ಣ ಕೃಷಿಗೆ ಇನ್ನಷ್ಟು ಸುಧಾರಣೆಯ ಮಾರ್ಗಗಳು : ಇಂಧನವು ರೈತರಿಗೆ ದೊಡ್ಡ ವೆಚ್ಚ. ಬಯೋಮೀಥೇನ್ ಮತ್ತು ಬಯೋಡೀಸೆಲ್‌ನಂತಹ ಪರ್ಯಾಯ ಇಂಧನ ಬಳಕೆ ಯಂತ್ರೋಪಕರಣಗಳಿಗೆ ಶಕ್ತಿ ನೀಡುವ ಜೊತೆಗೆ ಪರಿಸರ ಸ್ನೇಹಿಯಾಗಿಯೂ ಉಳಿಯುತ್ತದೆ. ಸಾವಯವ ತ್ಯಾಜ್ಯ ಮತ್ತು ಪ್ರಾಣಿಗಳ ಗೊಬ್ಬರದಿಂದ ಬಯೋಮೀಥೇನ್ ಉತ್ಪಾದಿಸಿ ಸ್ವಂತ ಶಕ್ತಿ ಸಂಪನ್ಮೂಲ ರೂಪಿಸಬಹುದು. ಇದು ಕೃಷಿಯ ಯಂತ್ರೋಪಕರಣಗಳನ್ನು ಚಲಾಯಿಸಲು ಸಹಕಾರಿಯಾಗುತ್ತದೆ.




