#Rubber | ದೇಶದಲ್ಲಿ ನೈಸರ್ಗಿಕ ರಬ್ಬರ್ ಬಳಕೆ ಹೆಚ್ಚಳ | ಟಯರ್‌ ಉದ್ಯಮಕ್ಕೆ ಈ ಬಾರಿಯೂ ರಬ್ಬರ್‌ ಬೇಡಿಕೆ ನಿರೀಕ್ಷೆ | ರಬ್ಬರ್‌ ಉತ್ಪಾದನೆಯ ಕೊರತೆ |

September 22, 2023
1:51 PM
2023-24ಕ್ಕೆ ರಬ್ಬರ್ ಉತ್ಪಾದನೆ ಮತ್ತು ಬಳಕೆಯಲ್ಲಿ ತೀರಾ ವ್ಯತ್ಯಾಸ ಕಾಣುತ್ತಿದೆ. ಅಂದರೆ ಭಾರತದ ರಬ್ಬರ್‌ ಪ್ಲಾಂಟೇಶನ್‌ ವಲಯವು ಬೆಳೆಯುವ ಅವಕಾಶಗಳು ಇದೆ.

ಭಾರತದಲ್ಲಿ ನೈಸರ್ಗಿಕ ರಬ್ಬರ್‌ ವಲಯವು ಬೆಳೆಯುತ್ತಿದೆ. ದೇಶದಲ್ಲಿ ನೈಸರ್ಗಿಕ ರಬ್ಬರ್‌ನ ದೇಶೀಯ ಬಳಕೆಯು 2022-23ರಲ್ಲಿ 1,350,000 ಟನ್‌ಗಳಿಗೆ ತಲಪಿದೆ. 2021-22ರಲ್ಲಿ  1,238,000 ಟನ್‌ಗಳಿತ್ತು. ಹೀಗಾಗಿ ಶೇ.9 ರಷ್ಟು ರಬ್ಬರ್‌ ಬಳಕೆ ಹೆಚ್ಚಾಗಿದೆ. ಇದೇ ವೇಳೆ 2022-23ರಲ್ಲಿ ದೇಶದಲ್ಲಿ ನೈಸರ್ಗಿಕ ರಬ್ಬರ್  ಉತ್ಪಾದನೆಯು 839,000 ಟನ್‌ಗಳಾಗಿದ್ದು, ಶೇ 8.3 ಬೆಳವಣಿಗೆಯನ್ನು ದಾಖಲಿಸಿದೆ ಎಂದು ರಬ್ಬರ್ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಎಂ. ವಸಂತಗೇಸನ್ ಹೇಳಿದ್ದಾರೆ. 

Advertisement
Advertisement

ಅವರು ಕೊಟ್ಟಾಯಂನಲ್ಲಿ ರಬ್ಬರ್ ಮಂಡಳಿಯ 185 ನೇ ಸಭೆಯ ಅಧ್ಯಕ್ಷತೆ ವಹಿಸಿದ್ದರು. ದೇಶದಲ್ಲಿ ನೈಸರ್ಗಿಕ ರಬ್ಬರ್‌ನ ದೇಶೀಯ ಬಳಕೆಯು ಹೆಚ್ಚಾಗಿರುವುದು ಭಾರತದ ರಬ್ಬರ್‌ ಪ್ಲಾಟೇಂಶನ್‌ ಬೆಳೆಯಬೇಕಾದ ಸ್ಥಿತಿಯನ್ನು ಹೇಳುತ್ತದೆ. ಎಲ್ಲಾ ಸವಾಲುಗಳ ಹೊರತಾಗಿಯೂ ದೇಶೀಯ ನೈಸರ್ಗಿಕ ರಬ್ಬರ್ ವಲಯವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಉತ್ಪಾದನೆ ಮತ್ತು ಬಳಕೆಯಲ್ಲಿ ಧನಾತ್ಮಕ ಬೆಳವಣಿಗೆಯನ್ನು ಕಂಡಿದೆ ಎಂದು ಅವರು ಹೇಳಿದರು.

ರಬ್ಬರ್ ಮಂಡಳಿಯ ಪ್ರಯತ್ನಗಳು ರಬ್ಬರ್‌ ಬೆಳೆಗಾರರಿಗೆ ಹಾಗೂ ರಬ್ಬರ್‌ ಬೆಳೆಗೆ ಅಗತ್ಯ ಮಾಹಿತಿ ಹಾಗೂ ಕ್ರಮಗಳನ್ನು ಕೈಗೊಂಡಿದೆ. ರಬ್ಬರ್ ಬೆಲೆಯಲ್ಲಿನ ಏರಿಳಿತಗಳು, ಹವಾಮಾನ ಬದಲಾವಣೆ, ಮಾರುಕಟ್ಟೆ ಸಮಸ್ಯೆಗಳು, ಕಾರ್ಮಿಕರ ಕೊರತೆ ಇತ್ಯಾದಿ ಸೇರಿದಂತೆ ಹಲವು ಸವಾಲುಗಳು ರಬ್ಬರ್ ವಲಯದಲ್ಲಿ ಮುಂದುವರಿದಿದೆ. ಪ್ಲಾಂಟೇಶನ್ ಕ್ಷೇತ್ರವನ್ನು ಹೆಚ್ಚು ಸುಸ್ಥಿರ ಮತ್ತು ಲಾಭದಾಯಕವಾಗಿಸಲು ತಳಮಟ್ಟದಲ್ಲಿ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ, ರಬ್ಬರ್ ಉತ್ಪಾದಕರ ಸಂಘಗಳು(RPS)  ರಬ್ಬರ್ ಪ್ಲಾಂಟೇಶನ್ ವಲಯದಲ್ಲಿನ ವಿವಿಧ ಸವಾಲುಗಳನ್ನು ಎದುರಿಸಲು ತಮ್ಮ ಆಡಳಿತ ಮತ್ತು ಚಟುವಟಿಕೆಗಳಲ್ಲಿ ಮತ್ತಷ್ಟು ಸುಧಾರಣೆಯ ಅಗತ್ಯವಿದೆ ಎಂದು ರಬ್ಬರ್‌ ಮಂಡಳಿಯ ಡಾ. ಧನಾನಿಯಾ ಹೇಳಿದರು.

ರಬ್ಬರ್ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕರಾದ  ಎಂ.ವಸಂತಗೇಸನ್ ಅವರು ಭಾರತೀಯ ರಬ್ಬರ್‌ ವಲಯ ಪ್ರಸ್ತುತ ಸ್ಥಿತಿಯನ್ನು ವಿವರಿಸಿದರು. ಈ ವರ್ಷ ರಬ್ಬರ್‌  ಉತ್ಪಾದನಾ ಸಾಮರ್ಥ್ಯ 1,482 ಕೆಜಿ/ಹೆಕ್ಟೇರ್‌ಗೆ ಏರಿಕೆಯಾಗಿದೆ. ಕಳೆದ ಸಾಲಿನಲ್ಲಿ 1,472 ಕೆಜಿ/ಹೆಕ್ಟೇರ್‌ ಆಗಿತ್ತು. ರಬ್ಬರ್‌ ಬಳಕೆಯಲ್ಲೂ ಹೆಚ್ಚುವರಿಯಾಗಿದೆ.

Advertisement

2022-23ರಲ್ಲಿ ಆಟೋ ಟೈರ್ ವಲಯವು 4.8% ರಷ್ಟು  ಪ್ರಗತಿಯನ್ನು ದಾಖಲಿಸಿದೆ. 2022-23 ರ ಅವಧಿಯಲ್ಲಿ ದೇಶದಲ್ಲಿ  70.3% ರಷ್ಟು ಆಟೋ-ಟೈರ್ ಉತ್ಪಾದನಾ ವಲಯವು ರಬ್ಬರ್‌ ಬೇಡಿಕೆಯನ್ನು ಹೊಂದಿತ್ತು.  2023-24ಕ್ಕೆ ರಬ್ಬರ್ ಉತ್ಪಾದನೆ ಮತ್ತು ಬಳಕೆಯನ್ನು ಕ್ರಮವಾಗಿ 875,000 ಟನ್‌ಗಳು ಮತ್ತು 1400,000 ಟನ್‌ಗಳು ಎಂದು ಅಂದಾಜಿಸಲಾಗಿದೆ.‌ ಅಂದರೆ ರಬ್ಬರ್‌ ಬೇಡಿಕೆ ಹೆಚ್ಚಾಗಿದೆ ಎನ್ನುವ ಸೂಚನೆ ಲಭಿಸಿದೆ.

 

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಂಪಾಜೆಯಲ್ಲಿ ಮಹಿಳಾ ಗ್ರಾಮಸಭೆ | ವಿವಿಧ ಮಾಹಿತಿ -ತರಬೇತಿ
May 22, 2025
10:48 PM
by: The Rural Mirror ಸುದ್ದಿಜಾಲ
ಚಿಕ್ಕಮಗಳೂರು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭ್ಯ
May 22, 2025
10:27 PM
by: ದ ರೂರಲ್ ಮಿರರ್.ಕಾಂ
ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ 4,790 ಕೋಟಿ ಮೊತ್ತದಲ್ಲಿ 33 ಪ್ಯಾಕೇಜ್
May 22, 2025
9:50 PM
by: The Rural Mirror ಸುದ್ದಿಜಾಲ
ರಾಜ್ಯದ ಜೇನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ
May 22, 2025
9:45 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group