ಡಿ.19 ರಬ್ಬರ್ ಬೆಳೆಗಾರರ ಸಮಾವೇಶ | ರಬ್ಬರ್ ಕೃಷಿಗೆ ಆರ್ಥಿಕ ನೆರವು |

December 17, 2024
9:29 PM

ರಬ್ಬರ್ ಮಂಡಳಿ ವತಿಯಿಂದ ರಬ್ಬರ್ ಬೆಳೆಗಾರರ ಸಮಾವೇಶ ಡಿಸೆಂಬರ್ 19 ರಂದು ಬೆಳಿಗ್ಗೆ 10 ಗಂಟೆಯಿಂದ ಎಸ್.ಡಿ.ಎಂ ಕಲಾಭವನ ಸಂತೆಕಟ್ಟೆ ಬೆಳ್ತಂಗಡಿಯಲ್ಲಿ ನಡೆಯಲಿದೆ.

Advertisement
Advertisement

ರಬ್ಬರ್ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕರು, ಉತ್ಪನ್ನ ಆಯುಕ್ತ ಮತ್ತು ಹಿರಿಯ ಅಧಿಕಾರಿಗಳು ಈ ಸಮಾವೇಶದಲ್ಲಿ ಭಾಗವಹಿಸಿ ರಬ್ಬರ್ ಬೆಳೆಗಾರರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ರಬ್ಬರ್ ಮಂಡಳಿ ಮಂಗಳೂರು ಪ್ರಾದೇಶಿಕ ಕಚೇರಿ ಪ್ರಕಟಣೆ ತಿಳಿಸಿದೆ.

ರಬ್ಬರ್ ಕೃಷಿಗೆ ಆರ್ಥಿಕ ನೆರವು ನೀಡಲು ರಬ್ಬರ್ ಮಂಡಳಿಯಿಂದ 2023 ಮತ್ತು 2024ರಲ್ಲಿ ಮರುನಾಟಿ ಮಾಡಿದ ಅಥವಾ ಹೊಸದಾಗಿ ನಾಟಿ ಮಾಡಿದ ರಬ್ಬರ್ ಬೆಳೆಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

ಗರಿಷ್ಠ 5 ಹೆಕ್ಟೇರ್‍ಗಳ ವರೆಗೆ ರಬ್ಬರ್ ಪ್ರದೇಶವನ್ನು ಹೊಂದಿರುವವರು ಷರತ್ತುಗಳಿಗೆ ಒಳಪಟ್ಟು 5 ಹೆಕ್ಟೇರ್‍ಗೆ ಸಹಾಯಧನಕ್ಕೆ ಅರ್ಹರಾಗಿರುತ್ತಾರೆ. ಕೇಂದ್ರ ಸರ್ಕಾರದ “ಸರ್ವಿಸ್ ಪ್ಲಸ್” ಪೋರ್ಟಲ್ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನ.

ಜಮೀನಿನ ಮಾಲೀಕತ್ವವನ್ನು ಸಾಬೀತುಪಡಿಸಲು ಗ್ರಾಮಾಧಿಕಾರಿಗಳ ಅರ್ಜಿಯೊಂದಿಗೆ ಪ್ರಮಾಣಪತ್ರ ಅಥವಾ ಪಹಣಿ ಪತ್ರ (RTC), ಸಾಗುವಳಿ ಜಮೀನಿನ ಗಡಿ ತೋರಿಸುವ ಅಂದಾಜು ನಕ್ಷೆ, ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ರಬ್ಬರ್ ಸಸಿಗಳ ಖರೀದಿಸಿದ ಪುರಾವೆ/ರಶೀದಿ, ಜಂಟಿ ಮಾಲೀಕರು ಮತ್ತು ಅಪ್ರಾಪ್ತ ವಯಸ್ಕರಿದ್ದಲ್ಲಿ  ನಾಮನಿರ್ದೇಶನ ಪ್ರತಿಗಳನ್ನು ಅಪ್‍ಲೋಡ್ ಮಾಡಬೇಕು.

Advertisement

ಸಾಂಪ್ರದಾಯಿಕವಲ್ಲದ ಪ್ರದೇಶದಲ್ಲಿ ಸಬ್ಸಿಡಿ ಮೊತ್ತ ರೂ. 50,000/ಹೆಕ್ಟೇರ್‍ನಂತೆ 5 ಹೆಕ್ಟೇರ್‌ ಗೆ ಸೀಮಿತವಾಗಿದೆ. ರೂಟ್ ಟ್ರೈನರ್ ಸಸಿಗಳು ಅಥವಾ ಪಾಲಿ ಬ್ಯಾಗ್ ಸಸಿಗಳನ್ನು ಬಳಸಿ ಹೊಸನಾಟಿ ಮತ್ತು ಮರುನಾಟಿ ಮಾಡಿರುವ ಬೆಳೆಗಾರರಿಗೆ ಮತ್ತು ಗುಂಪುಗಳಿಗೆ ಪರಿವೀಕ್ಷಣೆ ನಂತರ ಅರ್ಹ ಆರ್ಥಿಕ ಸಹಾಯವನ್ನು ಮೊದಲ ವರ್ಷದಲ್ಲಿ ಪ್ರತಿ ಹೆಕ್ಟೇರಿಗೆ ರೂ 40,000 ಮತ್ತು 10,000 ದಂತೆ ಕಂತುಗಳಲ್ಲಿ ಬೆಳೆಗಾರರ ಖಾತೆಗೆ ಜಮಾ ಮಾಡಲಾಗುತ್ತದೆ.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರೈತರಿಗೆ ಆಶಾದಾಯಕ ಕೃಷಿಭಾಗ್ಯ ಯೋಜನೆ
May 23, 2025
10:32 PM
by: ದ ರೂರಲ್ ಮಿರರ್.ಕಾಂ
ಬೆಳೆ ವಿಮೆ | ದತ್ತಾಂಶ ತಾಳೆ ಹೊಂದಿಸಲು  ಮೇ 31 ಕೊನೆಯ ದಿನ
May 23, 2025
10:27 PM
by: The Rural Mirror ಸುದ್ದಿಜಾಲ
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ | ಕೊಡಗು ಜಿಲ್ಲೆಯ ಬಹುತೇಕ ಕಡೆ ಮಳೆ |
May 23, 2025
10:22 PM
by: The Rural Mirror ಸುದ್ದಿಜಾಲ
ಬೆಂಗಳೂರು-ಮೈಸೂರಿನಲ್ಲಿ ವಿವಿಧ  ತಳಿಗಳ ಮಾವು, ಹಲಸು ಪ್ರದರ್ಶನ ಮತ್ತು ಮಾರಾಟ
May 23, 2025
10:04 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group