ರಬ್ಬರ್ ಮಂಡಳಿ ವತಿಯಿಂದ ರಬ್ಬರ್ ಬೆಳೆಗಾರರ ಸಮಾವೇಶ ಡಿಸೆಂಬರ್ 19 ರಂದು ಬೆಳಿಗ್ಗೆ 10 ಗಂಟೆಯಿಂದ ಎಸ್.ಡಿ.ಎಂ ಕಲಾಭವನ ಸಂತೆಕಟ್ಟೆ ಬೆಳ್ತಂಗಡಿಯಲ್ಲಿ ನಡೆಯಲಿದೆ.
ರಬ್ಬರ್ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕರು, ಉತ್ಪನ್ನ ಆಯುಕ್ತ ಮತ್ತು ಹಿರಿಯ ಅಧಿಕಾರಿಗಳು ಈ ಸಮಾವೇಶದಲ್ಲಿ ಭಾಗವಹಿಸಿ ರಬ್ಬರ್ ಬೆಳೆಗಾರರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ರಬ್ಬರ್ ಮಂಡಳಿ ಮಂಗಳೂರು ಪ್ರಾದೇಶಿಕ ಕಚೇರಿ ಪ್ರಕಟಣೆ ತಿಳಿಸಿದೆ.
ರಬ್ಬರ್ ಕೃಷಿಗೆ ಆರ್ಥಿಕ ನೆರವು ನೀಡಲು ರಬ್ಬರ್ ಮಂಡಳಿಯಿಂದ 2023 ಮತ್ತು 2024ರಲ್ಲಿ ಮರುನಾಟಿ ಮಾಡಿದ ಅಥವಾ ಹೊಸದಾಗಿ ನಾಟಿ ಮಾಡಿದ ರಬ್ಬರ್ ಬೆಳೆಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಗರಿಷ್ಠ 5 ಹೆಕ್ಟೇರ್‍ಗಳ ವರೆಗೆ ರಬ್ಬರ್ ಪ್ರದೇಶವನ್ನು ಹೊಂದಿರುವವರು ಷರತ್ತುಗಳಿಗೆ ಒಳಪಟ್ಟು 5 ಹೆಕ್ಟೇರ್‍ಗೆ ಸಹಾಯಧನಕ್ಕೆ ಅರ್ಹರಾಗಿರುತ್ತಾರೆ. ಕೇಂದ್ರ ಸರ್ಕಾರದ “ಸರ್ವಿಸ್ ಪ್ಲಸ್” ಪೋರ್ಟಲ್ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನ.
ಜಮೀನಿನ ಮಾಲೀಕತ್ವವನ್ನು ಸಾಬೀತುಪಡಿಸಲು ಗ್ರಾಮಾಧಿಕಾರಿಗಳ ಅರ್ಜಿಯೊಂದಿಗೆ ಪ್ರಮಾಣಪತ್ರ ಅಥವಾ ಪಹಣಿ ಪತ್ರ (RTC), ಸಾಗುವಳಿ ಜಮೀನಿನ ಗಡಿ ತೋರಿಸುವ ಅಂದಾಜು ನಕ್ಷೆ, ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ರಬ್ಬರ್ ಸಸಿಗಳ ಖರೀದಿಸಿದ ಪುರಾವೆ/ರಶೀದಿ, ಜಂಟಿ ಮಾಲೀಕರು ಮತ್ತು ಅಪ್ರಾಪ್ತ ವಯಸ್ಕರಿದ್ದಲ್ಲಿ ನಾಮನಿರ್ದೇಶನ ಪ್ರತಿಗಳನ್ನು ಅಪ್‍ಲೋಡ್ ಮಾಡಬೇಕು.
ಸಾಂಪ್ರದಾಯಿಕವಲ್ಲದ ಪ್ರದೇಶದಲ್ಲಿ ಸಬ್ಸಿಡಿ ಮೊತ್ತ ರೂ. 50,000/ಹೆಕ್ಟೇರ್‍ನಂತೆ 5 ಹೆಕ್ಟೇರ್ ಗೆ ಸೀಮಿತವಾಗಿದೆ. ರೂಟ್ ಟ್ರೈನರ್ ಸಸಿಗಳು ಅಥವಾ ಪಾಲಿ ಬ್ಯಾಗ್ ಸಸಿಗಳನ್ನು ಬಳಸಿ ಹೊಸನಾಟಿ ಮತ್ತು ಮರುನಾಟಿ ಮಾಡಿರುವ ಬೆಳೆಗಾರರಿಗೆ ಮತ್ತು ಗುಂಪುಗಳಿಗೆ ಪರಿವೀಕ್ಷಣೆ ನಂತರ ಅರ್ಹ ಆರ್ಥಿಕ ಸಹಾಯವನ್ನು ಮೊದಲ ವರ್ಷದಲ್ಲಿ ಪ್ರತಿ ಹೆಕ್ಟೇರಿಗೆ ರೂ 40,000 ಮತ್ತು 10,000 ದಂತೆ ಕಂತುಗಳಲ್ಲಿ ಬೆಳೆಗಾರರ ಖಾತೆಗೆ ಜಮಾ ಮಾಡಲಾಗುತ್ತದೆ.
ತೀರಾ ಬಡವರಿಗೆ, ಆದಾಯ ತರುವ ವ್ಯಕ್ತಿಗಳಿಲ್ಲದ ಮನೆಯವರಿಗೆ, ತಾಯಿ ಮಕ್ಕಳು ಮಾತ್ರ ಇರುವ…
18.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದಾದ್ಯಂತ ಒಣ…
ಕೇಂದ್ರದ ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ ಅನುದಾನದ ಮೂಲಕ ಆರಂಭಿಸಿದ ಗಾರ್ಮೆಂಟ್…
ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಕಾಲೇಜಿನ ದೈಹಿಕ ಶಿಕ್ಷಣ…
17.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದಾದ್ಯಂತ ಒಣ…
ರಾಜ್ಯದಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಪೂರ್ವ ಮುಂಗಾರು, ಮುಂಗಾರು ಹಾಗೂ…