ಭಾರತವು ಸಾಕಷ್ಟು ದೇಶೀಯ ಟಯರ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಮುಕ್ತ ವ್ಯಾಪಾರ ಒಪ್ಪಂದಗಳ ಮೂಲಕ ಟಯರ್ ಹಾಗೂ ರಬ್ಬರ್ ಆಮದು ಮಾಡಬಾರದು ಎಂದು ಅಟೋಮೋಟಿವ್ ಟಯರ್ ತಯಾರಕರ ಸಂಘ (ATMA) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
Advertisement
ದೇಶದ 10 ಲಕ್ಷಕ್ಕೂ ಹೆಚ್ಚು ರಬ್ಬರ್ ಬೆಳೆಗಾರರು ರಬ್ಬರ್ ನಂಬಿ ಬದುಕು ಸಾಗಿಸುತ್ತಿದ್ದಾರೆ. ದೇಶೀಯ ರಬ್ಬರ್‌ನ ಉತ್ಪಾದನೆಯ ಶೇಕಡಾ 70 ಕ್ಕಿಂತ ಹೆಚ್ಚು ಟಯರ್ ಉದ್ಯಮದಲ್ಲಿ ಬಳಸಲಾಗುತ್ತಿದೆ. ಹೀಗಾಗಿ ಟಯರ್ ಉದ್ಯಮವನ್ನು ಕೂಡಾ ರಕ್ಷಣೆ ಮಾಡಬೇಕಿದೆ, ರಬ್ಬರ್ ಆಮದು ತಡೆಯಬೇಕಿದೆ ಎಂದು ಟಯರ್ ತಯಾರಕರ ಸಂಘ ಹೇಳಿದೆ.
Advertisement
ದೇಶೀಯ ರಬ್ಬರ್ ಹಾಗೂ ಟಯರ್ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಮತ್ತು ತಾಂತ್ರಿಕ ಪ್ರಗತಿಯನ್ನು ಹೆಚ್ಚಿಸುವ ಮೂಲಕ, ಉದ್ಯೋಗವನ್ನು ಸೃಷ್ಟಿಸುವ, ಸುಸ್ಥಿರತೆಯನ್ನು ಉತ್ತೇಜಿಸುವ ಮತ್ತು ಆರ್ಥಿಕ ಬೆಳವಣಿಗೆಯನ್ನು ವೃದ್ಧಿ ಮಾಡಬಹುದು ಹಾಗೂ ಭಾರತವು ಟಯರ್ ಉದ್ಯಮದಲ್ಲಿ ಪ್ರಮುಖ ಸ್ಥಾನ ಪಡೆಯಲು ಸಾಧ್ಯವಿದೆ ಎಂದು ATMA ಹೇಳಿದೆ.
ಭಾರತದಲ್ಲಿ ದೇಶೀಯ ಟಯರ್ ಉತ್ಪಾದನೆಯ ಹೊರತಾಗಿಯೂ ಕಳೆದ ವರ್ಷ2,000 ಕೋಟಿ ಮೌಲ್ಯದ ಟಯರ್ ಆಮದು ಮಾಡಿಕೊಳ್ಳಲಾಗಿದೆ. ಭಾರತವು ಸಾಕಷ್ಟು ಟಯರ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಆಮದು ಸುಂಕದ ರಿಯಾಯಿತಿಗಳ ಮೂಲಕ ಮುಕ್ತ ಒಪ್ಪಂದದ ಆಧಾರದ ಮೂಲಕ ರಬ್ಬರ್ ಹಾಗೂ ಟಯರ್ ಗೆ ಆಮದುಗಳಿಗೆ ಅವಕಾಶ ನೀಡಬಾರದುಎಂದು ಉದ್ಯಮ ಸಂಸ್ಥೆಗಳು ಹೇಳಿವೆ. ದೇಶೀಯ ಟಯರ್ ಉದ್ಯಮವು 5 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ ಮತ್ತು 10 ಲಕ್ಷ ರಬ್ಬರ್ ಬೆಳೆಗಾರರನ್ನು ಬೆಂಬಲಿಸುತ್ತದೆ, ಈ ಕಾರಣಕ್ಕಾಗಿ ದೇಶದ ರಬ್ಬರ್ ಉದ್ಯಮವನ್ನು ಬೆಂಬಲಿಸಬೇಕು ಎಂದೂ ATMA ಹೇಳಿದೆ.
Source :IRJournal
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement