Advertisement
MIRROR FOCUS

ಕುಸಿದ ರಬ್ಬರ್‌ ಧಾರಣೆ | ಧಾರಣೆ ಕುಸಿತ ಬೆಳೆಗಾರರಿಗೆ ಹೊಸ ಸವಾಲು | ಭರವಸೆ ಮೂಡಿಸಿದ್ದ ರಬ್ಬರ್‌ ಧಾರಣೆ |

Share

ಕೃಷಿ ವಲಯದಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ರಬ್ಬರ್‌ ಧಾರಣೆಯೂ ಈಗ ಇಳಿಕೆಯಾಗುತ್ತಿದೆ. 245 ರೂಪಾಯಿ ಆಸುಪಾಸಿನಲ್ಲಿದ್ದ ಧಾರಣೆ ಇದೀಗ 183 ರೂಪಾಯಿ ಆಸುಪಾಸಿಗೆ ಬಂದಿದೆ. ಈ ಇಳಿಕೆಯು ಈಗ ರಬ್ಬರ್‌ ಬೆಳೆಗಾರರಿಗೆ ಮತ್ತೆ ಸಂಕಷ್ಟಕ್ಕೆ ಕಾರಣವಾಗಲಿದೆ.…..ಮುಂದೆ ಓದಿ….

Advertisement
Advertisement
Advertisement
Advertisement

ಅನೇಕ ಸಮಯಗಳಿಂದ ಕುಸಿದು ಹೋಗಿದ್ದ ರಬ್ಬರ್‌ ಮಾರುಕಟ್ಟೆಯು ಕಳೆದ ವರ್ಷದಿಂದ ಏರಿಕೆಯ ಹಾದಿಯಲ್ಲಿ ಸಾಗಿತ್ತು. ಈ ಧಾರಣೆಯು 245 ರೂಪಾಯಿವರೆಗೂ ತಲಪಿತ್ತು. ಹೀಗಾಗಿ ರಬ್ಬರ್‌ ಕೃಷಿಯಲ್ಲಿ ಹಲವು ಬದಲಾವಣೆಗಳೂ ಕಂಡವು. ಕೆಲವು ದಿನಗಳವರೆಗೆ ಸ್ಥಿರತೆಯಲ್ಲಿದ್ದ ಧಾರಣೆ ಬಳಿಕ ಇಳಿಕೆಯ ಹಾದಿಯಲ್ಲಿ ಸಾಗಿ ಈಗ 183  ರೂಪಾಯಿ ಆಸುಪಾಸಿಗೆ ಬಂದಿದೆ. ಹೀಗಾಗಿ ಬೆಳೆಗಾರರಿಗೆ ಮತ್ತೆ ಸಂಕಷ್ಟದ ಸ್ಥಿತಿ ಉಂಟಾಗಿದೆ. ಧಾರಣೆ ಇಳಿಕೆಗೆ ಪ್ರಮುಖವಾಗಿ ರಬ್ಬರ್‌ ಆಮದು ಹಾಗೂ ಟಯರ್‌ ಮಾರಾಟಗಳಲ್ಲಿನ ವ್ಯತ್ಯಾಸವು ದೇಶೀಯ ರಬ್ಬರ್‌ ಬೆಲೆಯ ಮೇಲೆ ತೀವ್ರ ಪರಿಣಾಮ ಬೀರಿದೆ.

Advertisement

ರಬ್ಬರ್‌ ಧಾರಣೆ ಏರಿಕೆಯಾಗುತ್ತಿದ್ದಂತೆಯೇ ಹಾಗೂ ದೇಶೀಯ ರಬ್ಬರ್‌ ಮತ್ತು ಅಂತರಾಷ್ಟ್ರೀಯ ರಬ್ಬರ್‌ ಮಾರುಕಟ್ಟೆಯಲ್ಲಿ ಕಡಿಮೆ ಪ್ರಮಾಣ ವ್ಯತ್ಯಾಸ ಇರುವ ಕಾರಣದಿಂದ ಉದ್ದಿಮೆದಾರರು ರಬ್ಬರ್‌ ಆಮದು ಪ್ರಕ್ರಿಯೆಗೆ ಮುಂದಾಗಿದ್ದರು. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಆಮದು ಆಗಿರುವ ಕಾರಣದಿಂದ ದೇಶೀಯ ರಬ್ಬರ್‌ ಉತ್ಪಾದಕರ ಮೇಲೆ ಪರಿಣಾಮ ಬೀರಿದೆ, ದೇಶೀಯ ರಬ್ಬರ್‌ ಧಾರಣೆ ಇಳಿಕೆಯಾಗಿದೆ. ಇದರ ಜೊತೆಗೆ ಉದ್ಯಮ ವಲಯದಲ್ಲಿನ ಒತ್ತಡಗಳ ಕಾರಣದಿಂದ ಟಯರ್‌ ಮಾರಾಟವೂ ಕುಸಿತ ಕಂಡಿದೆ ಎಂದು ಇಲ್ಲಿ ರಬ್ಬರ್ ಮಾರಾಟಗಾರರು ಹೇಳುತ್ತಾರೆ.

ಕೊಟ್ಟಾಯಂ ಮಾರುಕಟ್ಟೆಯಲ್ಲಿ ಆರ್‌ಎಸ್‌ಎಸ್ 4 ದರ್ಜೆಯ ರಬ್ಬರ್‌ ಧಾರಣೆಯು ಸೋಮವಾರ ಕೆಜಿಗೆ 183-185 ನಡುವೆ ಇತ್ತು. ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ರಬ್ಬರ್ ಸರಾಸರಿ ಬೆಲೆ 212 ರಿಂದ 215 ರೂಪಾಯಿವರೆಗೂ ಇತ್ತು. ಧಾರಣೆ ಏರಿಕೆಯಾಗುತ್ತಿದ್ದಂತೆಯೇ ವ್ಯಾಪಾರಿಗಳು ಆಮದು ಆಗಿರುವ ರಬ್ಬರ್‌ ದಾಸ್ತಾನು ಮಾಡಿದ್ದರು. ಹೀಗಾಗಿ ಈಗ ದೇಶೀಯ ರಬ್ಬರ್‌ ಬೇಡಿಕೆಯ ಕೊರತೆಯ ಕಾರಣದಿಂದ ಇಳಿಕೆಯಾಗುತ್ತಿದೆ.  ರಬ್ಬರ್‌ ಬೆಳೆಗಾರರಿಗೆ ಇಂದಿನ ಪರಿಸ್ಥಿತಿಯಲ್ಲಿ ಕನಿಷ್ಟ 200 ರೂಪಾಯಿ ಧಾರಣೆ ನಿಗದಿಯಾಗಬೇಕು ಎಂದು ಬೆಳೆಗಾರರು ಹೇಳುತ್ತಾರೆ.

Advertisement

ರಬ್ಬರ್ ಬೋರ್ಡ್ ಅಂಕಿಅಂಶಗಳ ಪ್ರಕಾರ, ರಬ್ಬರ್‌ ಧಾರಣೆಯು ಜೂನ್‌ನಲ್ಲಿ ಸರಾಸರಿ ಬೆಲೆ ₹200, ಜುಲೈನಲ್ಲಿ ₹210, ಆಗಸ್ಟ್‌ನಲ್ಲಿ ₹237 ಮತ್ತು ಸೆಪ್ಟೆಂಬರ್‌ನಲ್ಲಿ ₹229 ಇತ್ತು. ಈಗ ಇಳಿಕೆಯಾಗಿದೆ.

ಮೂಲಗಳ ಪ್ರಕಾರ ಆಗಸ್ಟ್‌ ತಿಂಗಳಲ್ಲಿ ಸುಮಾರು 75000 ಟನ್‌ಗಳಷ್ಟು ರಬ್ಬರ್‌ ಆಮದು ಆಗಿತ್ತು. ಸೆಪ್ಟಂಬರ್‌ ತಿಂಗಳಲ್ಲಿಯೂ ರಬ್ಬರ್‌ ಆಮದು ಪ್ರಕ್ರಿಯೆ ನಡೆದಿದೆ.  ಇದರ ಪರಿಣಾಮ ಈಗ ವ್ಯಕ್ತವಾಗುತ್ತಿದೆ. ಈಗ ರಬ್ಬರ್‌ ಉತ್ಪಾದನೆಯೂ ದೇಶದಲ್ಲಿ ಹೆಚ್ಚಾಗಿದೆ. ಧಾರಣೆ ಏರಿಕೆಯ ಲಕ್ಷಣ ಗೋಚರಿಸುತ್ತಿದ್ದಂತೆಯೇ ಅನೇಕರು ರಬ್ಬರ್‌ ಮರಕ್ಕೆ ಪ್ಲಾಸ್ಟಿಕ್‌ ಅಳವಡಿಕೆ ಮಾಡಿ ಟ್ಯಾಪಿಂಗ್‌ ಆರಂಭಿಸಿದ್ದರು. ಕೇರಳದ ಹೆಚ್ಚಿನ ಕಡೆಗಳಲ್ಲಿ ಈ ಬೆಳೆವಣಿಗೆ ನಡೆದಿದೆ ಎಂದು ರಬ್ಬರ್‌ ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಾರೆ. ಈಗ ಆ ರಬ್ಬರ್‌ ಮಾರುಕಟ್ಟೆ ಪ್ರವೇಶವಾಗುತ್ತಿದೆ. ಧಾರಣೆ ಇಳಿಕೆಯಾಗುತ್ತಿದೆ.

Advertisement

ರಬ್ಬರ್‌ ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಏಷ್ಯಾದಲ್ಲಿ ರಬ್ಬರ್ ಧಾರಣೆ ಹಾಗೂ ಮುಂದಿನ ಮಾರುಕಟ್ಟೆಯ ಬಗ್ಗೆ ಎಚ್ಚರಿಕೆ ಇರಬೇಕು, ಸವಾಲುಗಳೂ ಇದೆ, ಲಾಭದಾಯಕ ದಿನಗಳೂ ಇವೆ ಎಂದು ಎಚ್ಚರಿಸಿದ್ದಾರೆ.ಮುಂದೆ ಏಷ್ಯಾದ  ಥೈಲ್ಯಾಂಡ್ ಮತ್ತು ವಿಯೆಟ್ನಾಂನಲ್ಲಿ ರಬ್ಬರ್ ಇಳುವರಿಯು ಶೇ. 60 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.ಸದ್ಯ ಭಾರತದಲ್ಲಿ, ಬೆಲೆಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದರೂ, ವರ್ಷದ ಕೊನೆಯ ತಿಂಗಳುಗಳಲ್ಲಿ ಬೇಡಿಕೆಯಿಂದಾಗಿ ಮತ್ತೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ದೀರ್ಘಕಾಲದ ಮಳೆ ಹಾಗೂ ಹವಾಮಾನ ವೈಪರೀತ್ಯವು ರಬ್ಬರ್‌ ಬೆಳೆಯುವ ಎಲ್ಲಾ ಕಡೆಯೂ ಈಚೆಗೆ ಸಮಸ್ಯೆ ನೀಡುತ್ತಿದೆ. ರಬ್ಬರ್‌ ಟ್ಯಾಪಿಂಗ್‌ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ ರಬ್ಬರ್‌ ಕಚ್ಚಾ ವಸ್ತುಗಳ ಕೊರತೆ ಸಹಜವಾಗಿಯೇ ಮುಂದಿನ ದಿನಗಳಲ್ಲಿ ಉಂಟಾಗಬಹುದು. ಈ ಕಾರಣದಿಂದ ಧಾರಣೆ ಒಮ್ಮೆ ಇಳಿಕೆ ಕಂಡರೂ ಏರಿಕೆಯ ಬಗ್ಗೆ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಆದರೆ ರಬ್ಬರ್‌ ದಾಸ್ತಾನು ಇರಿಸುವುದು ಅಪಾಯಕಾರಿಯಾಗಿದೆ ಎಂದೂ ಎಚ್ಚರಿಸಿದ್ದಾರೆ.

Advertisement

ಶ್ರೀಲಂಕಾ ಸೇರಿದಂತೆ ಕೆಲವು ದೇಶಗಳಲ್ಲಿ ರಬ್ಬರ್‌ ತೋಟಗಳು ಎಲೆ ರೋಗದಿಂದ ನಾಶವಾಗುತ್ತಿದೆ. ಹೀಗಾಗಿ ಇಳುವರಿಯ ಕೊರತೆಯೂ ಇದೆ.  ರಬ್ಬರ್‌ ಎಲೆ ಬೀಳುವ ಶಿಲೀಂಧ್ರವು ಶ್ರೀಲಂಕಾದ ರಬ್ಬರ್ ತೋಟಗಳನ್ನು ನಾಶಮಾಡಲು ಪ್ರಾರಂಭಿಸಿದೆ ಮತ್ತು ಮಳೆ ಮುಂದುವರಿದರೆ ಈ ರೋಗ ಹೆಚ್ಚಾಗಿ ವ್ಯಾಪಿಸಿ ಇಳುವರಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಕೊಲಂಬೊ ರಬ್ಬರ್ ಟ್ರೇಡರ್ಸ್ ಅಸೋಸಿಯೇಷನ್ ​​ಈಗಾಗಲೇ ಎಚ್ಚರಿಸಿದೆ. 2019 ರಲ್ಲಿ ಶ್ರೀಲಂಕಾದಲ್ಲಿಈ ರೋಗ  ವರದಿಯಾಗಿತ್ತು. 2019 ರಲ್ಲಿ ವ್ಯಾಪಕವಾಗಿದ್ದ ಈ ರೋಗವು ಈ ಬಾರಿಯೂ ಕಾಣಿಸಿಕೊಂಡಿದೆ.

ಇದೇ ವೇಳೆ ಇಂಡೋನೇಷ್ಯಾದಲ್ಲಿ ಕೂಡಾ ಈ ರೋಗ ಕಾಣಿಸಿಕೊಂಡಿತ್ತು.ಈಗ ಮಲೇಷ್ಯಾ, ಥೈಲ್ಯಾಂಡ್ ನಲ್ಲೂ ಅಪಾಯಕಾರಿ ಪ್ರಮಾಣದಲ್ಲಿ ಹರಡುತ್ತಿದ್ದು, ಗಣನೀಯ ಇಳುವರಿ ನಷ್ಟವನ್ನು ಉಂಟುಮಾಡುತ್ತದೆ ಎನ್ನುವುದು ವರದಿ.ಸದ್ಯ ಭಾರತದಲ್ಲಿ ಈ ರೋಗ ಕೆಲವು ಇದ್ದರೂ ಅಷ್ಟೊಂದು ಭಾರೀ ಪ್ರಮಾಣದ ಸಮಸ್ಯೆ ತಂದೊಡ್ಡದೇ ಇರುವುದು ಬೆಳೆಗಾರರಿಗೆ ಸದ್ಯ ನೆಮ್ಮದಿಯ ವಿಷಯ.

Advertisement

The rubber market, which was highly anticipated in the agriculture sector, is now experiencing a decline. The price of rubber, which was previously at Rs 245, has now dropped to around Rs 183. This decrease will pose challenges for rubber growers once again.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಚಿಕ್ಕಮಗಳೂರಿನಲ್ಲಿ ಭಾರೀ ಮಳೆ | ಪ್ರವಾಸ ಮುಂದೂಡಲು ಜಿಲ್ಲಾಡಳಿತ ಸೂಚನೆ |

ಚಿಕ್ಕಮಗಳೂರು  ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಚಿಕ್ಕಮಗಳೂರು ಪ್ರವಾಸವನ್ನು…

20 hours ago

ಬೆಂಗಳೂರಿನಲ್ಲಿ ಮತ್ತೆ ಮಳೆಯ ಅಬ್ಬರ | ಸಿಲಿಕಾನ್‌ ಸಿಟಿಯ ಎಲ್ಲೆಲ್ಲೂ ನೀರು..! | ಇಂದು ಕೂಡಾ ಮಳೆ ಸಾಧ್ಯತೆ |

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಬೆಂಗಳೂರಿನಲ್ಲಿ ಇಂದು ಕೂಡಾ ಮೋಡ ಕವಿದ…

21 hours ago

ಕೋಲಾರದಲ್ಲಿ ಪಶು ಸಂಜೀವಿನಿ ಯೋಜನೆ ಅನುಷ್ಠಾನ | ಪಶು ಸಖಿಯರಿಗೆ ತರಬೇತಿ |

ಪಶು ಸಂಗೋಪನಾ ಇಲಾಖೆಯ ಸಂಜೀವಿನಿ ಯೋಜನೆಯಡಿ, ಕೋಲಾರದಲ್ಲಿ ಪಶು ಸಖಿ ತರಬೇತಿ ಕಾರ್ಯಕ್ರಮ…

21 hours ago

ರಾಜ್ಯ ಆರ್ಥಿಕ ಪ್ರಗತಿಯಲ್ಲಿ ದೇಶದಲ್ಲೇ ಉತ್ತಮ ಸಾಧನೆ…! | ಕೃಷಿ ವಲಯದ ಅಭಿವೃದ್ದಿಯಲ್ಲಿ ಹಿನ್ನಡೆ | ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದ ಅಂಕಿ ಅಂಶ |

ರಾಜ್ಯದಲ್ಲಿ ಬರಗಾಲ ಪರಿಸ್ಥಿತಿಯಿಂದಾಗಿ ಕೃಷಿ ವಲಯದ ಅಭಿವೃದ್ದಿ ಉದ್ದೇಶಿತ ಪ್ರಮಾಣದಲ್ಲಿ ಸಾಧ್ಯವಾಗಿರುವುದಿಲ್ಲ.

21 hours ago