ರಬ್ಬರ್‌ ಆಮದು | ರಬ್ಬರ್‌ ಬೆಳೆಗಾರರಿಗೆ ತರಲಿದೆ ಧಾರಣೆ ಸಂಕಷ್ಟ

June 24, 2025
9:02 PM

ದೇಶದಲ್ಲಿ ರಬ್ಬರ್‌ ಉತ್ಪಾದನೆ ಹೆಚ್ಚಳದ ನಡುವೆ ಇದೀಗ ರಬ್ಬರ್‌ ಆಮದು ನೀತಿಯು ರಬ್ಬರ್‌ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಲಿದೆ ಎಂದು ಕೇರಳದ ಮಾತೃಭೂಮಿ ವರದಿ ಮಾಡಿದೆ.

Advertisement

ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ರಬ್ಬರ್ ಉತ್ಪಾದನೆಯಲ್ಲಿ  ಹೆಚ್ಚಳವಾಗಿದೆ. ಅದೇ ಸಮಯದಲ್ಲಿ, ರಬ್ಬ‌ರ್ ಮತ್ತು ಸಂಯುಕ್ತ ರಬ್ಬರ್ ಆಮದಿನಲ್ಲಿ ಏರಿಕೆ ಕಂಡುಬಂದಿದೆ. 2024-25ರ ಹಣಕಾಸು ವರ್ಷದಲ್ಲಿ ಉತ್ಪಾದನೆಯು ಶೇ. 2.1 ರಷ್ಟು ಹೆಚ್ಚಾಗಿದ್ದರೂ, ಆಮದು ಶೇ. 11.8 ರಷ್ಟು ಹೆಚ್ಚಾಗಿದೆ. ಸಂಯುಕ್ತ ರಬ್ಬರ್ ಆಮದಿನಲ್ಲಿನ ಏರಿಕೆ ಕೃಷಿ ವಲಯಕ್ಕೆ ಕಳವಳಕಾರಿ ಸಂಗತಿಯಾಗಿದೆ. ಇದು ಶೇ. 44.5 ರಷ್ಟು ಹೆಚ್ಚಳವಾಗಿದೆ. ಸಂಯುಕ್ತ ರಬ್ಬರ್ ಆಮದು 2.45 ಲಕ್ಷ ಟನ್‌ಗಳಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದೇಶವು ವಾರ್ಷಿಕವಾಗಿ 7,000 ಕೋಟಿ ರೂ. ಮೌಲ್ಯದ ರಬ್ಬರ್  ಆಮದು ಮಾಡಿಕೊಳ್ಳುತ್ತದೆ. ಉತ್ಪಾದನೆ ಮತ್ತು ಬಳಕೆಯ ನಡುವೆ 5.35 ಲಕ್ಷ ಟನ್‌ಗಳ ಅಂತರವಿದೆ. ಈ ಅಂತರವನ್ನು ತುಂಬುವ ಗುರಿಯನ್ನು ಇರಿಸಿಕೊಂಡು ದೇಶದ ಈಶಾನ್ಯ ರಾಜ್ಯಗಳಿಗೆ ಕೃಷಿಯ ವಿಸ್ತರಣೆ ಹೊಂದಿದೆ. ಅಲ್ಲಿ ಕೃಷಿ ಚಟುವಟಿಕೆಗೆ ವೇಗ ನೀಡಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಗಳು ಏರುತ್ತಿರುವಾಗಲೂ ಟೈರ್ ಕಂಪನಿಗಳು  ಸ್ಥಳೀಯ ರಬ್ಬರ್‌  ಖರೀದಿಸದೆ ಆಮದು ಮಾಡಿಕೊಳ್ಳುತ್ತಿವೆ. ಆಸಿಯಾನ್ ದೇಶಗಳಾದ ಥೈಲ್ಯಾಂಡ್, ಮಲೇಷ್ಯಾ ಮತ್ತು ಇಂಡೋನೇಷ್ಯಾದಿಂದ ರಬ್ಬರ್‌ ಆಮದು ನಡೆಯುತ್ತಿದೆ. ಇಲ್ಲಿ ಆಮದು ಸುಂಕ ಅತೀ ಕಡಿಮೆ ಅಂದರೆ 0-5 ಶೇಕಡಾವರೆಗೆ ಆಮದು ಸುಂಕ ಇರುವುದರಿಂದ ಅಲ್ಲಿಂದ ಹೆಚ್ಚಿನ ಪ್ರಮಾಣದ ಸಂಯುಕ್ತ ರಬ್ಬರ್ ಬರುತ್ತಿದೆ. ಹೀಗಾಗಿ ರಬ್ಬರ್‌ ಧಾರಣೆಯು ಬೆಳೆಗಾರರಿಗೆ ಸಮಧಾನಕರವಾಗಿಲ್ಲ ಎಂದು ಮಾತೃಭೂಮಿ ವರದಿಯಲ್ಲಿ ತಿಳಿಸಿದೆ.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೇತುವಿನ ಕಾಟ: ಈ ರಾಶಿಗಳಿಗೆ ಆರೋಗ್ಯದಲ್ಲಿ ಎಚ್ಚರಿಕೆ ಬೇಕು..!
July 11, 2025
7:33 AM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆದರೆ ಕ್ರಿಮಿನಲ್‌ ಕೇಸು – ಎಚ್ಚರಿಕೆ
July 11, 2025
7:22 AM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ವರದಾ, ತುಂಗಭದ್ರಾ ನದಿ
July 11, 2025
7:14 AM
by: The Rural Mirror ಸುದ್ದಿಜಾಲ
ರಾಜ್ಯದ 10 ಜಿಲ್ಲೆಯಲ್ಲಿ ಶ್ರಮಿಕ, ತಾತ್ಕಾಲಿಕ ವಸತಿ ಸಮುಚ್ಛಯ ನಿರ್ಮಿಸಲು ನಿರ್ಧಾರ
July 11, 2025
7:11 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror