ಕುಸಿತದ ಹಾದಿಯಲ್ಲಿ ದೇಶೀಯ ರಬ್ಬರ್‌ ಮಾರುಕಟ್ಟೆ | ರಬ್ಬರ್‌ ಮಾರುಕಟ್ಟೆ ವೇದಿಕೆಯಾದ mRube | ಇ ಮಾರುಕಟ್ಟೆ ಮೂಲಕ ರಬ್ಬರ್‌ ಮಾರುಕಟ್ಟೆಗೆ ಬಲ ತುಂಬುವ ಪ್ರಯತ್ನ | ಧಾರಣೆ ಸ್ಥಿರತೆ ಹಾಗೂ ಏರಿಕೆಗೆ ಪ್ರಯತ್ನ – ಮುಳಿಯ ಕೇಶವ ಭಟ್‌ |

Advertisement
Advertisement

ಭಾರತೀಯ ರಬ್ಬರ್ ಮಂಡಳಿಯು ನೈಸರ್ಗಿಕ ರಬ್ಬರ್‌ಗಾಗಿ ಎಲೆಕ್ಟ್ರಾನಿಕ್ ಮಾರುಕಟ್ಟೆ ವೇದಿಕೆಯಾದ mRube ಪ್ರಾರಂಭಿಸಿದೆ.  ಇ ಟ್ರೇಡಿಂಗ್‌ ಮೂಲಕ ಮಾರುಕಟ್ಟೆಯನ್ನು ತೆರೆಯುವುದು  ಹಾಗೂ ರಬ್ಬರ್ ವ್ಯಾಪಾರ ವ್ಯವಸ್ಥೆಯನ್ನು ಬಲಪಡಿಸುವುದು  ಇದರ ಉದ್ದೇಶವಾಗಿದೆ. ದೇಶೀಯ ರಬ್ಬರ್‌ ಪೂರೈಕೆಯ ಕಡೆಗೂ ಇಲ್ಲಿ ಗಮನಹರಿಸಲು ಸಾಧ್ಯವಿದೆ.

Advertisement

ಈ ನಡುವೆ ಭಾರತದಲ್ಲಿ ರಬ್ಬರ್‌ ಧಾರಣೆ ಕುಸಿತದ ಹಾದಿಯಲ್ಲಿದೆ. ಕಳೆದ ಒಂದು ತಿಂಗಳಲ್ಲಿ ಸುಮಾರು 20 ರೂಪಾಯಿ ಕುಸಿತ ಕಂಡಿದೆ. ಸದ್ಯ 130 ರಿಂದ 140 ರೂಪಾಯಿ ಆಸುಪಾಸಿನಲ್ಲಿದೆ. ಹೀಗಾಗಿ ರಬ್ಬರ್‌ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ರಬ್ಬರ್‌ ಧಾರಣೆ ಕನಿಷ್ಟ 150 ರೂಪಾಯಿ ಧಾರಣೆ ಲಭ್ಯವಾಗಬೇಕು, ಆದರೆ ಈಗ ಪ್ರತೀ ಕೆಜಿ ರಬ್ಬರ್‌ ಉತ್ಪಾದನಾ ವೆಚ್ಚ 250 ರೂಪಾಯಿ ಇದೆ ಎನ್ನುವುದು  ಲೆಕ್ಕಾಚಾರ. ಹೀಗಾಗಿ ಸರ್ಕಾರಗಳು ಗಮನಹರಿಸಬೇಕು ಎನ್ನುವುದು  ಬೆಳೆಗಾರರ ಒತ್ತಾಯ.

Advertisement
Advertisement

ದೇಶದಲ್ಲಿ ರಬ್ಬರ್‌ ಬೆಳೆ ವಿಸ್ತರಣೆಗೆ ಸರ್ಕಾರಗಳು ವಿವಿಧ ಪ್ರಯತ್ನ ಮಾಡಿದೆ. ರಬ್ಬರ್‌ ಮಂಡಳಿ ಕೂಡಾ ರಬ್ಬರ್‌ ಧಾರಣೆ ಏರಿಕೆ, ಬೆಳೆ ವಿಸ್ತರಣೆ ಕಡೆಗೆ ಗಮನಹರಿಸಿದೆ.  ಆಟೋಮೋಟಿವ್ ಟೈರ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ​​(ATMA) ಪ್ರತಿನಿಧಿಸುವ ಪ್ರಮುಖ ಟೈರ್ ಕಂಪನಿಗಳಿಂದ 1,000 ಕೋಟಿ ರೂಪಾಯಿಗಳ ಕೊಡುಗೆಯೊಂದಿಗೆ 5 ವರ್ಷಗಳಲ್ಲಿ ಈಶಾನ್ಯ ರಾಜ್ಯದಲ್ಲಿ 2,00,000 ಹೆಕ್ಟೇರ್‌ನಲ್ಲಿ ಹೊಸ ರಬ್ಬರ್ ತೋಟಗಳ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. NEMITRA ಯೋಜನೆಯಡಿಯಲ್ಲಿ, 2021 ರಲ್ಲಿ 3861 ಹೆಕ್ಟೇರ್‌ನಲ್ಲಿ ರಬ್ಬರ್ ಪ್ಲಾಂಟೇಶನ್ ಪೂರ್ಣಗೊಂಡಿದೆ. 2022 ರಲ್ಲಿ, ಈವರೆಗೆ 22,868 ಹೆಕ್ಟೇರ್‌ನಲ್ಲಿ ನಾಟಿ  ಪೂರ್ಣಗೊಂಡಿದೆ.

Advertisement
Advertisement
ದೇಶೀಯ ರಬ್ಬರ್‌ ಬೆಳೆಗಾರರಿಗೆ ಉತ್ತಮ ಧಾರಣೆ ನೀಡಲು ರಬ್ಬರ್‌ ಮಂಡಳಿ ಅಧಿಕಾರಿಗಳು ಪ್ರಯತ್ನ ಮಾಡುತ್ತಿದ್ದಾರೆ. ರಬ್ಬರ್‌ ಬೆಳೆಗೆ ಸಹಾಯ ಹಾಗೂ ವಿವಿಧ ಯೋಜನೆಗಳನ್ನೂ ಬೆಳೆಗಾರರಿಗೆ ತರಲು ಪ್ರಯತ್ನ ನಡೆದಿದೆ. ಮುಂದಿನ ದಿನಗಳಲ್ಲಿ ಉತ್ತಮ ರಬ್ಬರ್‌ ಧಾರಣೆ ಲಭ್ಯವಾಗಬಹುದು ಎನ್ನುವ ಭರವಸೆ ಇದೆ
ಮುಳಿಯ ಕೇಶವ ಭಟ್‌, ಸದಸ್ಯರು, ಭಾರತೀಯ ರಬ್ಬರ್‌ ಮಂಡಳಿ

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಕುಸಿತದ ಹಾದಿಯಲ್ಲಿ ದೇಶೀಯ ರಬ್ಬರ್‌ ಮಾರುಕಟ್ಟೆ | ರಬ್ಬರ್‌ ಮಾರುಕಟ್ಟೆ ವೇದಿಕೆಯಾದ mRube | ಇ ಮಾರುಕಟ್ಟೆ ಮೂಲಕ ರಬ್ಬರ್‌ ಮಾರುಕಟ್ಟೆಗೆ ಬಲ ತುಂಬುವ ಪ್ರಯತ್ನ | ಧಾರಣೆ ಸ್ಥಿರತೆ ಹಾಗೂ ಏರಿಕೆಗೆ ಪ್ರಯತ್ನ – ಮುಳಿಯ ಕೇಶವ ಭಟ್‌ |"

Leave a comment

Your email address will not be published.


*