ಈಶಾನ್ಯ ಭಾರತದಲ್ಲಿ ರಬ್ಬರ್‌ ಬೆಳೆ ವಿಸ್ತರಣೆ | 1.25 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ರಬ್ಬರ್‌ ತೋಟ |

December 4, 2024
10:23 PM
ಭಾರತದ ಈಶಾನ್ಯ ರಾಜ್ಯಗಳಲ್ಲಿ ರಬ್ಬರ್‌ ಬೆಳೆ ವಿಸ್ತರಣೆಯಾಗುತ್ತಿದೆ. ಸುಮಾರು  2 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ರಬ್ಬರ್ ತೋಟಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲಾಗಿದೆ. ಟೈರ್ ಉದ್ಯಮವು ನೇರವಾಗಿ ತೋಟದ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುವ ಜಾಗತಿಕವಾಗಿ ಮೊದಲ ಪ್ರಯತ್ನ ಇದಾಗಿದೆ.   (Source: network | ಫೋಟೊ-ಸಾಂದರ್ಭಿಕ )

2024-25 ರ ಹೊತ್ತಿಗೆ ಈಶಾನ್ಯ ರಾಜ್ಯಗಳು ಮತ್ತು ಪಶ್ಚಿಮ ಬಂಗಾಳದ 94 ಜಿಲ್ಲೆಗಳಲ್ಲಿ 1.25 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಹೊಸ ರಬ್ಬರ್ ತೋಟಗಳನ್ನು ಸ್ಥಾಪಿಸಲಾಗಿದೆ. ಕೇವಲ ನಾಲ್ಕು ವರ್ಷಗಳಲ್ಲಿ ಭಾರತದ ಅತ್ಯಂತ ಮಹತ್ವದ ರಬ್ಬರ್ ತೋಟದ ವಿಸ್ತರಣೆಗಳಲ್ಲಿ ಇದು ಒಂದಾಗಿದೆ. …..ಮುಂದೆ ಓದಿ….

Advertisement
Advertisement
Advertisement

ರಬ್ಬರ್ ಬೋರ್ಡ್ ಆಫ್ ಇಂಡಿಯಾದ ನೇತೃತ್ವದಲ್ಲಿ ಮತ್ತು ಆಟೋಮೋಟಿವ್ ಟೈರ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ​​ಹಾಗೂ ಪ್ರಮುಖ ಟೈರ್ ತಯಾರಕರುಗಳಾದ ಅಪೊಲೊ, ಸಿಯೇಟ್ ಮೊದಲಾದ ಕಂಪನಿಗಳ ಬೆಂಬಲದೊಂದಿಗೆ, ರಬ್ಬರ್‌ ಬೆಳೆ ವಿಸ್ತರಣೆ ಮಾಡಲಾಗಿದೆ. ಸುಮಾರು  2 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ರಬ್ಬರ್ ತೋಟಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲಾಗಿದೆ. ಟೈರ್ ಉದ್ಯಮವು ನೇರವಾಗಿ ತೋಟದ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುವ ಜಾಗತಿಕವಾಗಿ ಮೊದಲ ಪ್ರಯತ್ನ ಇದಾಗಿದೆ.

Advertisement

ಇದುವರೆಗಿನ ಸವಾಲುಗಳ ನಡುವೆ  ನಾಲ್ಕು ವರ್ಷಗಳ ಪ್ಲಾಂಟೇಶನ್ ಗುರಿಯಲ್ಲಿ ಸುಮಾರು 90% ರಷ್ಟು ತಲುಪಲಾಗಿದೆ. ರಬ್ಬರ್‌  ಪ್ರದೇಶಗಳನ್ನು ವಿಸ್ತರಿಸುವುದರ ಜೊತೆಗೆ, ಯೋಜನೆಯು ಸ್ಥಳೀಯ ನರ್ಸರಿಗಳನ್ನು ಬಲಪಡಿಸಿದೆ . ಟೈರ್ ಕಂಪನಿಗಳು ಮತ್ತು ರಬ್ಬರ್ ಬೋರ್ಡ್ ಆಫ್ ಇಂಡಿಯಾ ಸಯಯೋಗದ ಪ್ರಯತ್ನ ಇದಾಗಿದೆ ಎಂದು ಯೋಜನೆಯ ನಾಲ್ಕನೇ ವಾರ್ಷಿಕೋತ್ಸವದಲ್ಲಿ ಯೋಜನೆ ನಿರ್ದೇಶಕ ರಾಜೀವ್ ಬುದಿರಾಜ ಹೇಳಿದರು.

ಕಳೆದ ನಾಲ್ಕು ವರ್ಷಗಳಲ್ಲಿ, ಈ ಯೋಜನೆಯು 5.3 ಕೋಟಿ ನಾಟಿ ಸಾಮಗ್ರಿಗಳನ್ನು ವಿತರಿಸಿದೆ. ಒಂದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರನ್ನು ಈ ಯೋಜನೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆ. ಯೋಜನೆ ಪೂರ್ಣಗೊಳ್ಳುವ ವೇಳೆ  2.5 ಲಕ್ಷ ಫಲಾನುಭವಿಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗಳನ್ನು ಉನ್ನತೀಕರಿಸುವ ನಿರೀಕ್ಷೆಯಿದೆ. ರಬ್ಬರ್ ತೋಟಗಳು ಬೆಳೆದಂತೆ, ಮಾದರಿ ಸ್ಮೋಕ್‌ಹೌಸ್‌ಗಳು ಮತ್ತು ರಬ್ಬರ್ ಬೆಳೆಗಾರರಲ್ಲಿ ಸುಧಾರಿತ ಕ್ರಮಗಳನ್ನು ಪ್ರಸಾರ ಮಾಡುವುದು ಸೇರಿದಂತೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಲಾಗುವುದು ಎಂದು ರಾಜೀವ್ ಬುದಿರಾಜ ಹೇಳಿದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |
January 15, 2025
1:00 PM
by: ಸಾಯಿಶೇಖರ್ ಕರಿಕಳ
ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ
ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ
January 15, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror