ಈ ಆರ್ಥಿಕ ವರ್ಷದಲ್ಲಿ ರಬ್ಬರ್ ಧಾರಣೆ ಏರಿಕೆಯಾಗಿದೆ. ಸರಾಸರಿ ಕನಿಷ್ಟ 200 ರೂಪಾಯಿ ದರ ತಲಪಿದೆ. ದೇಶದಲ್ಲಿ ನೈಸರ್ಗಿಕ ರಬ್ಬರ್ ಬಳಕೆಯ ಶೇಕಡಾ 80 ರಷ್ಟನ್ನು ಟೈಯರ್ ಉದ್ಯಮವು ಬಳಕೆ ಮಾಡುತ್ತದೆ. ಕಳೆದ ಕೆಲವು ವರ್ಷಗಳಿಂದ ರಬ್ಬರ್ ಧಾರಣೆ ಇಳಿಕೆಯಾಗಿತ್ತು. ಇದೀಗ ಧಾರಣೆ ಏರಿಕೆಯಾಗಿ ಈ ವರ್ಷ ಸರಾಸರಿ ಕನಿಷ್ಟ 200 ರೂಪಾಯಿಗೆ ತಲಪಿತ್ತು. ಈಗ ರಬ್ಬರ್ ಪೂರೈಕೆಯಲ್ಲೂ ಕೊರತೆ ಇದೆ. ಹೀಗಾಗಿ ಟಯರ್ ಕಂಪನಿಗಳು ಒತ್ತಡದಲ್ಲಿದೆ ಎಂದು ಕ್ರೆಸಿಲ್ ವರದಿ ಮಾಡಿದೆ.
ಕ್ರೆಸಿಲ್ ಹಲವು ಮಾರುಕಟ್ಟೆಯ ಮಾಹಿತಿ, ಏರಿಳಿತಗಳ ವಿಶ್ಲೇಷಣೆಯನ್ನು ಒದಗಿಸುತ್ತದೆ. ರಬ್ಬರ್ ಉದ್ಯಮಕ್ಕೆ ಸಂಬಂಧಿಸಿದಂತೆ ಈ ಬಾರಿ ಟಯರ್ ಕಂಪನಿಗಳ ಒತ್ತಡವನ್ನು ಕ್ರೆಸಿಲ್ ಹೇಳಿದೆ. ಟಯರ್ ತಯಾರಕರು ಗಗನಕ್ಕೇರುತ್ತಿರುವ ನೈಸರ್ಗಿಕ ರಬ್ಬರ್ ಬೆಲೆಗಳ ನಡುವೆ ಉತ್ಪಾದನೆ ಮಾಡಬೇಕಾಗಿದೆ ಎಂದು ಸಂಕ್ಷಿಪ್ತವಾಗಿ ಹೇಳಿದೆ. ಈ ವರ್ಷದ ಕಳೆದ ಐದು ತಿಂಗಳಲ್ಲಿ ಶೇಕಡಾ 33 ರಷ್ಟು ರಬ್ಬರ್ ಬೆಲೆ ಏರಿಕೆಯಾಗಿದೆ ಎಂದು ಕ್ರಿಸಿಲ್ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ. ನೈಸರ್ಗಿಕ ರಬ್ಬರ್‌ನ ಪೂರೈಕೆ ಮತ್ತು ಹೆಚ್ಚುತ್ತಿರುವ ವೆಚ್ಚಗಳು ಟಯರ್ ತಯಾರಕರಿಗೆ ಸವಾಲಿನ ವಾತಾವರಣವನ್ನು ಸೃಷ್ಟಿಸಿವೆ ಎಂದು ಅದು ಹೇಳಿದೆ.
ದೇಶದಲ್ಲಿ ನೈಸರ್ಗಿಕ ರಬ್ಬರ್ ಬಳಕೆಯ ಶೇಕಡಾ 80 ರಷ್ಟನ್ನು ಟಯರ್ ಉದ್ಯಮವು ಹೊಂದಿದೆ. ನೈಸರ್ಗಿಕ ರಬ್ಬರ್ ಬೆಲೆಗಳು, ಕಳೆದ ಒಂದು ದಶಕದಿಂದ ಕೆಳಗಿಳಿದಿದ್ದು, ಈಗ ಪ್ರತಿ ಕಿಲೋಗ್ರಾಂಗೆ ಸರಾಸರಿ ರೂ 200 ರ ಗಡಿಯನ್ನು ಮೀರಿದೆ. ಹೀಗಾಗಿ ಈಗ ಬೆಲೆ ಏರಿಕೆಯ ಸಮಸ್ಯೆ ಕಂಪನಿಗಳಿಗೆ ಕಾಡಿದೆ. ಈ ನಡುವೆ ರಬ್ಬರ್ ಪೂರೈಕೆಯಲ್ಲೂ ವ್ಯತ್ಯಾಸವಾಗಿದೆ. ಸರಿಯಾದ ಪ್ರಮಾಣದಲ್ಲಿ ಪೂರೈಕೆಯೂ ಆಗುತ್ತಿಲ್ಲ.
ವರದಿಯ ಪ್ರಕಾರ, ನೈಸರ್ಗಿಕ ರಬ್ಬರ್ ಬೆಲೆಗಳಲ್ಲಿನ ಪ್ರಸ್ತುತ ಏರಿಕೆಯು ರಬ್ಬರ್ ಬೇಡಿಕೆಯ ಕಾರಣದಿಂದ ಉಂಟಾಗಿದೆ. 2011 ಮತ್ತು 2023 ರ ನಡುವೆ, ಜಾಗತಿಕ ನೈಸರ್ಗಿಕ ರಬ್ಬರ್ ಉತ್ಪಾದನೆಯು ಶೇಕಡಾ 35 ರಷ್ಟು ಬೆಳೆದಿದೆ, ಆದರೆ ಬೇಡಿಕೆಯು ಶೇಕಡಾ 40 ರಷ್ಟು ಏರಿಕೆಯಾಗಿದೆ. ಈ ಅಂತರವು ಹೆಚ್ಚಾಗುತ್ತಿರುವ ಕಾರಣ ಟಯರ್ ಕಂಪನಿಗಳು ಮಾರುಕಟ್ಟೆ ಅಗತ್ಯಗಳನ್ನು ಪೂರೈಸಲು ಸಂಕಷ್ಟ ಪಡುತ್ತಿದ್ದಾರೆ.
ಕಾರ್ಮಿಕರ ಕೊರತೆ ಹಾಗೂ ಇತರ ಕೆಲವು ಕಾರಣಗಳಿಂದ ರಬ್ಬರ್ ಉತ್ಪಾದನೆಯ ಮೇಲೆ ಪರಿಣಾಮ ಬೀರಿತ್ತು.ಹೀಗಾಗಿ ಇಂದಿಗೂ ಬೇಡಿಕೆಗೆ ತಕ್ಕಂತೆ ರಬ್ಬರ್ ಪೂರೈಕೆ ಸಾಧ್ಯವಾಗುತ್ತಿಲ್ಲ. ಇದು ರಬ್ಬರ್ ಕಂಪನಿಗಳ ಮೇಲೆ ಪರಿಣಾಮ ಬೀರುತ್ತಿದೆ. ಆಮದು ಕೂಡಾ ಅನಿವಾರ್ಯವಾಗಿ ಮಾಡಬೇಕಾದ ಸ್ಥಿತಿ ಬರುತ್ತಿದೆ.
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…