ಒಂದೇ ದಿನದಲ್ಲಿ ಶೀಟ್ ರಬ್ಬರ್ ಒಣಗಿಸುವ ಹೊಸ ವಿಧಾನ ಅಭಿವೃದ್ಧಿ |

December 22, 2021
10:56 PM
ರಬ್ಬರ್‌ ಶೀಟ್‌ ಒಣಗಿಸಲು ಇನ್ನು ದಿನಗಟ್ಟಲೆ ಕಾಯಬೇಕಾಗಿಲ್ಲ. ಕೇವಲ 24 ಗಂಟೆಯಲ್ಲಿ ಒಣಗಿಸುವ ವಿಧಾನವನ್ನು ಅಭಿವೃದ್ಧಿ ಪಡಿಸಲಾಗಿದೆ. ರಬ್ಬರ್ ಬೋರ್ಡ್ ಅಡಿಯಲ್ಲಿ ಬರುವ ರಬ್ಬರ್ ರಿಸರ್ಚ್ ಇನ್ಸಿಟ್ಯೂಟ್ ಆಫ್ ಇಂಡಿಯಾ ಈ ತಂತ್ರಜ್ಞಾನವನ್ನು ರಬ್ಬರ್‌ ಬೆಳೆಗಾರರಿಗಾಗಿ ನೀಡಿದೆ.
ರಬ್ಬರ್ ಬೋರ್ಡ್ ಅಡಿಯಲ್ಲಿ ರಬ್ಬರ್ ರಿಸರ್ಚ್ ಇನ್ಸಿಟ್ಯೂಟ್ ಆಫ್ ಇಂಡಿಯಾ 4 -5 ಐದು ದಿನಗಳನ್ನು ತೆಗೆದುಕೊಳ್ಳುವ ಸಾಂಪ್ರದಾಯಿಕ ರಬ್ಬರ್‌ ಒಣಗಿಸುವ ವಿಧಾನದ ಬದಲಿಗೆ 24 ಗಂಟೆಗಳಲ್ಲಿ ಶೀಟ್ ರಬ್ಬರ್ ಅನ್ನು ಒಣಗಿಸುವ ನೂತನ ವಿಧಾನವನ್ನು ಅಭಿವೃದ್ಧಿಪಡಿಸಿದೆ.

ಆಸಿಡ್ ಮತ್ತು ಆಲ್ಕೋಹಾಲ್ ಮಿಶ್ರಣ ಮತ್ತು ಸುಧಾರಿತ ಶೀಟಿಂಗ್ ಪ್ರಕ್ರಿಯೆಯೊಂದಿಗೆ ಈ ತಂತ್ರಜ್ಞಾನ ಇದೆ. ಸಾಂಪ್ರಾದಾಯಿಕವಾಗಿ ರಬ್ಬರ್ ಹೆಪ್ಪುಗಟ್ಟುವಿಕೆಯನ್ನು ದುರ್ಬಲಗೊಳಿಸಿದ ಫಾರ್ಮಿಕ್ ಆಸಿಡ್  ಬದಲಿಸುವ ಮೂಲಕ ಹೆಚ್ಚು ವೇಗವಾಗಿ ಒಣಗಿಸುವ ವಿಧಾನವನ್ನು ಮಾಡಲಾಗುತ್ತದೆ ಎಂದು ಸಂಸ್ಥೆಯ ವಿಜ್ಞಾನಿಯಾದ ಡಾ. ಥಾಮಸ್ ಹೇಳಿದ್ದಾರೆ.

Advertisement
Advertisement
ರಬ್ಬರ್ ತೋಟಗಳು ಹೆಚ್ಚಾಗಿ ಸಣ್ಣ ರೈತರ ಒಡೆತನದಲ್ಲಿರುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಗಳಿಸಲು ಈ ಶೀಟ್ ರಬ್ಬರ್ ಸಹಾಕಾರಿಯಾಗುತ್ತದೆ ಎಂದು ಸಂಸ್ಥೆಯ ವಿಜ್ಞಾನಿಗಳಾದ ವಿನೋತ್ ಥಾಮಸ್ ಮತ್ತು ಜಾಯ್ ಜೋಸೆಫ್ ಅಭಿಪ್ರಾಯಪಟ್ಟಿದ್ದಾರೆ. ಕಚ್ಚಾ ಲ್ಯಾಟೆಕ್ಸ್ ಅನ್ನು ಶೀಟ್ ರಬ್ಬರ್ ಆಗಿ ಪರಿವರ್ತಿಸುವುದರಿಂದ ಉತ್ಪನ್ನವನ್ನು ಸಂಗ್ರಹಿಸಲು ಮತ್ತು ಮಾರುಕಟ್ಟೆ ಪರಿಸ್ಥಿತಿಗೆ ಅನುಗುಣವಾಗಿ ಮಾರಾಟ ಮಾಡಲು ಸಹಾಯ ಮಾಡುತ್ತದೆ. ಮಾತ್ರವಲ್ಲದೆ, ಈ ಹೊಸ ವಿಧಾನವು  ರಬ್ಬರ್ ಹಾಳೆಗಳನ್ನು ಒಂದು ದಿನದೊಳಗೆ ಸಿದ್ದಗೊಳಿಸಲು ಸಹಾಯ ಮಾಡುತ್ತದೆ ಎಂದು ರಬ್ಬರ್ ರಿಸರ್ಚ್ ಇನ್ಸಿಟ್ಯೂಟ್ ಆಫ್ ಇಂಡಿಯಾ ತಿಳಿಸಿದೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಉದ್ಯೋಗ | ಐಟಿಐ-ಡಿಪ್ಲೊಮಾ ಅಭ್ಯರ್ಥಿಗಳಿಗೆ ಇಲ್ಲಿದೆ ಅವಕಾಶ |
July 22, 2025
10:37 PM
by: The Rural Mirror ಸುದ್ದಿಜಾಲ
ಬಿಹಾರ ಸೇರಿ ಹಲವು ರಾಜ್ಯಗಳಲ್ಲಿ 2 ದಿನ ಭಾರಿ ಮಳೆ
July 22, 2025
10:01 PM
by: The Rural Mirror ಸುದ್ದಿಜಾಲ
ಒಂದೇ ಕುಟುಂಬದ ಮೂವರ ಮೃತ್ಯು | ತರಕಾರಿಗೆ ಸಿಂಪಡಿಸಿದ್ದ ಕ್ರಿಮಿನಾಶಕ ಜೀವಕ್ಕೇ ಕುತ್ತಾಯಿತೇ ?
July 22, 2025
9:52 PM
by: The Rural Mirror ಸುದ್ದಿಜಾಲ
 ಇಂದು ವಿಶ್ವ ಮಾವು ದಿನಾಚರಣೆ | ರಾಜ್ಯದ ಮಾವಿಗೆ ಜಗತ್ತಿನಾದ್ಯಂತ ಬೇಡಿಕೆ |
July 22, 2025
9:34 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group