ಡಾಲರ್ ನ ಜಾಗತಿಕ ಪ್ರಾಬಲ್ಯ ಅಂತ್ಯ ಸಮೀಪ | ದೊಡ್ಡಣ್ಣನ ಅಸ್ತಿತ್ವಕ್ಕೆ ಪೆಟ್ಟು ಕೊಟ್ಟ ಭಾರತ | ಬೆಳೆಯುತ್ತಿದೆ ರೂಪಾಯಿ ಕೈಹಿಡಿಯುತ್ತಿರುವ ದೇಶಗಳ ಪಟ್ಟಿ

March 16, 2023
11:38 AM

ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿತ ಸುದ್ದಿ ಕೇಳಿ ಕೇಳಿ ಬೇಜಾರಾದ ಭಾರತೀಯರಿಗೆ ಇಲ್ಲೊಂದು ಸಿಹಿ ಸುದ್ದಿ ಸಿಕ್ಕಿದೆ. ಇನ್ನು ಮುಂದೆ ನಾವು ಡಾಲರ್ ಎದುರು ತೀರ ಕುಸಿದಿದ್ದೇವೆ ನಮ್ಮ ಜೀವನ ಹೆಂಗಪ್ಪ ಅಂತ ಯೋಚನೆ ಮಾಡುವ ಕಾಲ ಮುಗಿಯಿತು. ರಷ್ಯಾ, ಇಸ್ರೇಲ್, ಶ್ರೀಲಂಕಾ, ಜರ್ಮನಿ ಸೇರಿದಂತೆ 18 ದೇಶಗಳು ಭಾರತದೊಂದಿಗೆ ರುಪಾಯಿ ಕರೆನ್ಸಿಯಲ್ಲಿ ವ್ಯಾಪಾರ ನಡೆಸಲು ಆರ್​ಬಿಐ ವಿಶೇಷ ವೋಸ್ಟ್ರೋ ಖಾತೆಗಳಿಗೆ ಅನುಮತಿ ಕೊಟ್ಟಿದೆ. ಇದರಿಂದ ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಡಾಲರ್ ಅವಲಂಬಿಕೆ ಕಡಿಮೆಯಾಗಿ ರುಪಾಯಿಗೆ ಮನ್ನಣೆ ಹೆಚ್ಚಾಗಲಿದೆ.

Advertisement
Advertisement
Advertisement

ಭಾರತದ ರುಪಾಯಿ ಅಂತರರಾಷ್ಟ್ರೀಯ ಕರೆನ್ಸಿಯಾಗುವ (International Currency) ಹಾದಿಯಲ್ಲಿ ವೇಗವಾಗಿ ಸಾಗುತ್ತಿದೆ. ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಡಾಲರ್ ಬದಲು ರುಪಾಯಿ ಕರೆನ್ಸಿಯನ್ನು ಬಳಸಲು ಮುಂದಾಗುತ್ತಿರುವ ದೇಶಗಳ ಪಟ್ಟಿ ಬೆಳೆಯುತ್ತಾ ಹೋಗುತ್ತಿದೆ. ಇದಕ್ಕೆ ಪೂರಕವಾಗಿ ರುಪಾಯಿಯಲ್ಲಿ ವ್ಯಾಪಾರ ಮಾಡುವ ದೇಶಗಳಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಮತ್ತು ಈ ಪ್ರಕ್ರಿಯೆ ಸುಗಮವಾಗಿ ಸಾಗುವ ರೀತಿಯಲ್ಲಿ ವೋಸ್ತ್ರೋ ವ್ಯವಸ್ಥೆಯನ್ನು ಭಾರತ ಮಾಡಿದೆ. ಇದೀಗ ಇಸ್ರೇಲ್, ರಷ್ಯಾ ಇತ್ಯಾದಿ 18 ದೇಶಗಳಲ್ಲಿ 60 ವಿಶೇಷ ರುಪಾಯಿ ವೋಸ್ಟ್ರೋ ಖಾತೆ (SRVA- Special Rupee Vostro Account) ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಅನುಮತಿಸಿದೆ.

Advertisement

ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಬಹುತೇಕ ದೇಶಗಳು ಡಾಲರ್ ಕರೆನ್ಸಿಯಲ್ಲೇ ವ್ಯವಹಾರ ನಡೆಸುತ್ತವೆ. ಒಂದು ವೇಳೆ ಅಮೆರಿಕವೇನಾದರೂ ಒಂದು ದೇಶದ ಮೇಲೆ ಆರ್ಥಿಕ ದಿಗ್ಬಂಧನ ಹೇರಿದರೆ ಅದರ ಪರಿಣಾಮ ಭೀಕರವಾದುದು. ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ರಷ್ಯಾವನ್ನು ಇದೇ ರೀತಿ ಉಸಿರುಗಟ್ಟಿಸಿ ಇಕ್ಕಟ್ಟಿಗೆ ಸಿಲುಕಿಸಲು ಅಮೆರಿಕ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಡಾಲರ್ ಕರೆನ್ಸಿಯ ಮೇಲೆ ಅವಲಂಬಿತವಾಗುವುದನ್ನು ತಪ್ಪಿಸುವ ಪ್ರಯತ್ನಗಳು ನಡೆದಿವೆ. ಈ ನಿಟ್ಟಿನಲ್ಲಿ ಭಾರತದ ರುಪಾಯಿ ಬಹಳ ಜನಪ್ರಿಯವಾಗತೊಡಗಿದೆ. ಅತಿಯಾದ ರುಪಾಯಿ ಆಮದಿನಿಂದ ಅದರ ಕರೆನ್ಸಿ ಮೌಲ್ಯ ಕಡಿಮೆ ಆಗುವುದನ್ನು ತಪ್ಪಿಸಲು ಮತ್ತು ವ್ಯಾಪಾರ ಪ್ರಕ್ರಿಯೆ ಸುಲಭವಾಗಿ ಸಾಗಲು ವೋಸ್ಟ್ರೋ ಖಾತೆ ವ್ಯವಸ್ಥೆ ಸಹಾಯಕ್ಕೆ ಬರುತ್ತದೆ.

ರುಪಾಯಿ ಕರೆನ್ಸಿಯಲ್ಲಿ ವ್ಯಾಪಾರ ಮಾಡಲು ಆರ್ಬಿಐ ಅನುಮತಿಸಿದ 18 ದೇಶಗಳು

ಭಾರತೀಯ ರುಪಾಯಿಯಲ್ಲಿ ವ್ಯಾಪಾರ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ 18 ದೇಶಗಳಿಗೆ ಅನುಮತಿ ನೀಡಿದೆ. ಈ 18 ದೇಶಗಳಿಗೆ 60 ವಿಶೇಷ ವೋಸ್ಟ್ರೋ ಅಕೌಂಟ್​ಗಳನ್ನು ತೆರೆಯಲಾಗುತ್ತದೆ. ಈ 18 ದೇಶಗಳು ಪಟ್ಟಿ ಮುಂದಿದೆ:

Advertisement
  1. ರಷ್ಯಾ
  2. ಸಿಂಗಾಪುರ
  3. ಶ್ರೀಲಂಕಾ
  4. ಬೋಟ್ಸವಾನ
  5. ಫಿಜಿ
  6. ಜರ್ಮನಿ
  7. ಗಯಾನ
  8. ಇಸ್ರೇಲ್
  9. ಕೀನ್ಯಾ
  10. ಮಲೇಷ್ಯಾ
  11. ಮಾರಿಷಸ್
  12. ಮಯನ್ಮಾರ್
  13. ನ್ಯೂಜಿಲೆಂಡ್
  14. ಓಮನ್
  15. ಸೇಶೆಲೆಸ್
  16. ತಾಂಜಾನಿಯಾ
  17. ಉಗಾಂಡ
  18. ಬ್ರಿಟನ್(ಯುಕೆ)

ಏನಿದು ಆರ್ಬಿಐನ ಸ್ಪೆಷಲ್ ರುಪೀ ವೋಸ್ಟ್ರೋ ಅಕೌಂಟ್?

ವಿಶೇಷ ರುಪಾಯಿ ವೋಸ್ಟ್ರೋ ಖಾತೆಯ ಆಲೋಚನೆ ಆರ್​ಬಿಐಗೆ ಹೊಳೆದದ್ದು ಈಗಲ್ಲ. ಕಳೆದ ವರ್ಷ ಜುಲೈನಲ್ಲೇ ಇದರ ಪ್ರಕ್ರಿಯೆ ಆರಂಭವಾಗಿತ್ತು. ಭಾರತೀಯ ರುಪಾಯಿಯಲ್ಲಿ ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟು ನಡೆಸಲು ಆರ್​ಬಿಐ ಮಾರ್ಗಸೂಚಿಗಳನ್ನು ತಿಳಿಸಿತ್ತು.

ಅದರ ಪ್ರಕಾರ, ಭಾರತದ ಜೊತೆ ವ್ಯಾಪಾರ ಮಾಡುವ ದೇಶವು ರುಪಾಯಿ ಕರೆನ್ಸಿಯನ್ನ ಬಳಸಲು ಅನುವು ಮಾಡಿಕೊಡುತ್ತದೆ ವೋಸ್ಟ್ರೋ ಖಾತೆ. ವ್ಯಾಪಾರ ಮಾಡುವ ದೇಶದ ಪಾರ್ಟ್ನರ್ ಬ್ಯಾಂಕುಗಳಿಗೆ ವೋಸ್ಟ್ರೋ ಖಾತೆ ಬೇಕಾಗುತ್ತದೆ. ಈ ಖಾತೆಯನ್ನು ಭಾರತೀಯ ಬ್ಯಾಂಕೊಂದು ತೆರೆದು ನಿರ್ವಹಣೆ ಮಾಡುತ್ತದೆ. ಈ ವಿದೇಶೀ ವ್ಯಾಪಾರಿಯಿಂದ ಭಾರತ ಆಮದು ಮಾಡಿಕೊಂಡಾಗ ರುಪಾಯಿಯಲ್ಲಿ ವಹಿವಾಟು ಮಾಡಲಾಗುತ್ತದೆ. ವಿದೇಶೀ ವ್ಯಾಪಾರಿಗೆ ರುಪಾಯಿಯಲ್ಲೇ ಹಣ ಸಂದಾಯವಾಗುತ್ತದೆ. ಈ ಹಣವು ನಿಗದಿತ ವೋಸ್ಟ್ರೋ ಖಾತೆಗೆ ಜಮೆಯಾಗುತ್ತದೆ.

Advertisement

ಹಾಗೆಯೇ, ಭಾರತದಿಂದ ವಿದೇಶಕ್ಕೆ ಏನಾದರೂ ರಫ್ತು ಆದಾಗ, ಆ ವಿದೇಶೀ ಆಮದುದಾರ ಸಂಸ್ಥೆಯ ವೋಸ್ಟ್ರೋ ಖಾತೆಯಿಂದ ರುಪಾಯಿ ಲೆಕ್ಕದಲ್ಲಿ ಮೊತ್ತವನ್ನು ಕಳೆಯಲಾಗುತ್ತದೆ. ಈ ರೀತಿಯಾಗಿ ವೋಸ್ಟ್ರೋ ವ್ಯವಸ್ಥೆ ಮೂಲಕ ಭಾರತೀಯ ರುಪಾಯಿಯಲ್ಲೇ ಅಂತಾರಾಷ್ಟ್ರೀಯ ವ್ಯಾಪಾರ ವ್ಯವಹಾರ ಸುಗಮವಾಗಿ ಸಾಗಲು ಸಾಧ್ಯವಾಗುತ್ತದೆ.

ವಿಶೇಷ ವೋಸ್ಟ್ರೋ ಖಾತೆ ಹೊಂದಿರುವವರು ಭಾರತ ಸರ್ಕಾರದ ಷೇರು, ಬಾಂಡು ಇತ್ಯಾದಿಗಳಲ್ಲಿ ಹೂಡಿಕೆ ರೂಪದಲ್ಲಿ ಹಣ ಇಟ್ಟುಕೊಳ್ಳುವ ವ್ಯವಸ್ಥೆಯೂ ಇದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ದೇಶಗಳು ಭಾರತದೊಂದಿಗೆ ಡಾಲರ್ ಬದಲು ರುಪಾಯಿಯಲ್ಲೇ ವ್ಯಾಪಾರ ಮಾಡಲು ಮುಂದಾಗಬಹುದೆಂದು ನಿರೀಕ್ಷಿಸಬಹುದು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಕ್ಯಾನ್ಸರ್‌ಕಾರಕವಲ್ಲ | WHO ವರದಿ ಸತ್ಯಕ್ಕೆ ದೂರವಾದುದು | ಅಧ್ಯಯನದ ನೆರವಿಗೆ ಕೇಂದ್ರ ಸರ್ಕಾರಕ್ಕೆ ಮನವಿ | ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿಕೆ |
November 22, 2024
4:02 PM
by: ದ ರೂರಲ್ ಮಿರರ್.ಕಾಂ
ನ.23 | ಗುತ್ತಿಗಾರು ಸಹಕಾರಿ ಸಂಘದ ಶತಮಾನೋತ್ಸವ | ಕೃಷಿ ವಿಚಾರಗೋಷ್ಠಿ | ಅಡಿಕೆ ರೋಗಗಳ ಬಗ್ಗೆ ಮಾಹಿತಿ ವಿನಿಮಯ |
November 22, 2024
2:32 PM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror