ಗ್ರಾಮೀಣ ಕೃಷಿ ಕಾರ್ಯ ಅನುಭವ | ವಿದ್ಯಾರ್ಥಿಗಳಿಂದ ಹೊಸ ಪ್ರಯೋಗ |

October 23, 2024
6:43 AM
ಪದವಿಯಲ್ಲಿ ಕಲಿತ ಕೃಷಿ ಆಧಾರಿತ ತಂತ್ರಜ್ಞಾನ ಹಾಗೂ ಮಾಹಿತಿಯನ್ನು ರೈತರಿಗೆ ತಿಳಿಸಿ, ಅವರಿಂದ ಹಿಮ್ಮಾಹಿತಿ ಪಡೆಯುವುದು ಕೂಡಾ ಈಗ ಬಹುಮುಖ್ಯವಾಗಿದೆ.

ಕೃಷಿ ವಿಶ್ವವಿದ್ಯಾನಿಲಯಗಳಿಂದ ಹೊರಬರುವ ವಿದ್ಯಾರ್ಥಿಗಳು ರೈತರಿಗೆ ಅನುಕೂಲಕರವಾದ ಕೆಲಸ ಮಾಡಬೇಕು ಎನ್ನುವುದು ಎಲ್ಲರ ನಿರೀಕ್ಷೆ. ಆದರೆ ರೈತರು ಪ್ರಸಕ್ತ ಕಾಲಘಟ್ಟದಲ್ಲಿ ಅನುಭವಿಸುವ ಸಮಸ್ಯೆಗಳ ಬಗ್ಗೆ ಅರಿವು ಕೂಡಾ ಅಷ್ಟೇ ಅಗತ್ಯ ಇದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳೇ ಗ್ರಾಮೀಣ ಭಾಗಕ್ಕೆ ಆಗಮಿಸಿ ಸವಾಲುಗಳನ್ನು ಕಂಡುಕೊಂಡು ಅದಕ್ಕೆ ಪರಿಹಾರ ಹೇಳುವ ವಿನೂತನ ಕಾರ್ಯಕ್ರಮವನ್ನು ಹಾಸನದಲ್ಲಿ ವಿದ್ಯಾರ್ಥಿಗಳು ಆಯೋಜಿಸಿದ್ದರು.

Advertisement

ಹಾಸನದ ಕೃಷಿ ಮಹಾ ವಿಶ್ವವಿದ್ಯಾಲಯದ – ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಮೂರು ವರ್ಷದ ಕೃಷಿ ಪದವಿ ಮುಗಿಸಿದ ವಿದ್ಯಾರ್ಥಿಗಳು ಪಠ್ಯಕ್ರಮದ ಅನುಸಾರ ರೈತರೊಂದಿಗೆ ಬೆರೆತು ಕೃಷಿ ಸಂಬಂಧಿತ ಪ್ರಾಯೋಗಿಕ ಜ್ಞಾನ, ಅನುಭವ ಪಡೆದುಕೊಂಡರು.

ಮೂರು ವರ್ಷದ ಕೃಷಿ ಪದವಿ ಬಳಿಕ ಶೈಕ್ಷಣಿಕ ಕಲಿಕೆಯ ಭಾಗವಾಗಿ ಮೂರು ತಿಂಗಳ ಅವಧಿಗೆ ಈ ಶಿಬಿರದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.ಪದವಿಯಲ್ಲಿ ಕಲಿತ ಕೃಷಿ ಆಧಾರಿತ ತಂತ್ರಜ್ಞಾನ ಹಾಗೂ ಮಾಹಿತಿಯನ್ನು ರೈತರಿಗೆ ತಿಳಿಸಿ, ಅವರಿಂದ ಹಿಮ್ಮಾಹಿತಿ ಪಡೆಯುವುದು ಕೂಡಾ ಇಲ್ಲಿ ಬಹುಮುಖ್ಯವಾಗಿದೆ. ಶಿಬಿರದಲ್ಲಿ ಕೃಷಿ ಕುರಿತ ಹಲವಾರು ಕಾರ್ಯಕ್ರಮಗಳನ್ನು ನಿತ್ಯವೂ ನಡೆಸಲಾಗಿತ್ತು. ಕೃಷಿ ಮಾಹಿತಿ ಕೇಂದ್ರ ತೆರೆದು ರೈತರಿಗೆ ಬಿತ್ತನೆ ಬೀಜ, ಕೀಟ ಬಾಧೆ, ವಿವಿಧ ತಳಿಗಳು, ಮಣ್ಣಿನ ಫಲವತ್ತತೆ ಸೇರಿ ಹಲವಾರು ಉಪಯುಕ್ತ ಮಾಹಿತಿಗಳನ್ನು ನೀಡಲಾಗಿತ್ತು.

ರೈತರೊಂದಿಗೆ ಕಾಲ ಕಳೆದು ಕೃಷಿ ಸಂಬಂಧಿತ ಸವಾಲುಗಳನ್ನು ಸ್ವತಃ ಮನಗಂಡು ಅವುಗಳಿಗೆ ಸಂಭಾವ್ಯ ಪರಿಹಾರ ಕ್ರಮಗಳ ಬಗ್ಗೆ ಚಿಂತಿಸಲು ಶಿಬಿರ ನೆರವಾಗುತ್ತಿದೆ ಎಂದುವಿದ್ಯಾರ್ಥಿ ಪವನ್ ಕುಮಾರ್‌ ಹೇಳುತ್ತಾರೆ.

ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಅವಧಿಯಲ್ಲಿ ಕಲಿತ ವಿಷಯಗಳನ್ನು ಶಿಬಿರದಲ್ಲಿ ಪ್ರಾಯೋಗಿಕವಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ. ಕೃಷಿ ಸಂಬಂಧಿತ ಪ್ರಾಯೋಗಿಕ ಅನುಭವದ ಜೊತೆಜೊತೆಗೆ ತಾವು ಕಲಿತ ತಾಂತ್ರಿಕ ವಿಷಯಗಳನ್ನು ರೈತರಿಗೆ ತಿಳಿಸುತ್ತಿದ್ದಾರೆ ಎಂದು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮುನಿಸ್ವಾಮಿ ಗೌಡ ಹೇಳುತ್ತಾರೆ.

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 06-04-2025 | ಕೆಲವು ಕಡೆ ಸಾಮಾನ್ಯ ಮಳೆ ನಿರೀಕ್ಷೆ | ಎ.7 ರಿಂದ ಮಳೆಯ ಪ್ರಮಾಣ ಕಡಿಮೆ |
April 6, 2025
6:08 PM
by: ಸಾಯಿಶೇಖರ್ ಕರಿಕಳ
ಒಂದೆಡೆ ಮಳೆ-ಇನ್ನೊಂದೆಡೆ ಹೀಟ್‌ವೇವ್‌ | ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
April 6, 2025
11:00 AM
by: ದ ರೂರಲ್ ಮಿರರ್.ಕಾಂ
ಮ್ಯಾನ್ಮಾರ್‌ನ ಭೂಕಂಪ | ಭಾರತೀಯ ಸೇನಾ ಆಸ್ಪತ್ರೆಯಲ್ಲಿ 700 ಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ
April 6, 2025
10:00 AM
by: ದ ರೂರಲ್ ಮಿರರ್.ಕಾಂ
ಮಾನವ-ಆನೆ ಸಂಘರ್ಷ ತಡೆಗೆ ಕ್ರಮ | 200 ಕೋ. ರೂ. ವೆಚ್ಚದ ರೈಲ್ವೆ ಬ್ಯಾರಿಕೇಡ್ ಕಾಮಗಾರಿ
April 6, 2025
9:00 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group