Advertisement
MIRROR FOCUS

ಸಹಕಾರಿ ಸಂಘದಿಂದ ಗ್ರಾಮೀಣ ಭಾಗದ ಪ್ರತಿಭೆಗಳಿಗೆ “ಉತ್ಕರ್ಷ ಸಹಕಾರ ಟ್ರೋಫಿ” | ಮಾದರಿಯಾದ ಪಂಜದ ಸಹಕಾರಿ ಸಂಘ |

Share

ಗ್ರಾಮೀಣ ಭಾಗದ ಪ್ರತಿಭೆಗಳು ಅವಕಾಶಗಳಿಂದ ವಂಚಿತರಾಗುವುದು ಹೆಚ್ಚು. ಅಂತಹದ್ದರಲ್ಲಿ ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟವನ್ನು ಏರ್ಪಡಿಸಿ ಮಾದರಿಯಾಗಿದೆ ಪಂಜದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ. ಜಿಲ್ಲಾ ಮಟ್ಟದ ಚೆಸ್‌ ಪಂದ್ಯಾಟ ಹಾಗೂ ಕೇರಂ ಪಂದ್ಯಾಟವನ್ನು ಏರ್ಪಡಿಸುವ ಮೂಲಕ “ಸಹಕಾರ” ತತ್ತ್ವದ ಜೊತೆಗೆ ಪ್ರತಿಭೆಗಳಿಗೂ ಪ್ರೋತ್ಸಾಹ ನೀಡಿದೆ.…..ಮುಂದೆ ಓದಿ….

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಸಿಬಂದಿ ವರ್ಗದವರ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕಿರಿಯ ಬಾಲಕ ಮತ್ತು ಬಾಲಕಿಯರ ಹಾಗೂ ಮುಕ್ತ ರಾಪಿಡ್‌ ಚೆಸ್‌ ಪಂದ್ಯಾಟ ಮತ್ತು ಮುಕ್ತ ಡಬಲ್ಸ್‌ ಕೇರಂ ಪಂದ್ಯಾಟ ಆಯೋಜನೆ ಮಾಡಿದೆ. ಈ ಸಹಕಾರಿ ಸಂಘದ ಸಿಬಂದಿ ವರ್ಗದವರ ಸಹಕಾರ ಹಾಗೂ ಜಂಟಿ ಆಶ್ರಯವೂ ಇದೆ. ಕಳೆದ 6 ವರ್ಷಗಳಿಂದ ಕ್ರೀಡಾಕೂಟವನ್ನು ಏರ್ಪಾಡು ಮಾಡುತ್ತಿದ್ದ ಈ ಸಹಕಾರ ಸಂಘ ಹಾಗೂ ಇದರ ಸಿಬಂದಿಗಳು ಇದುವರೆಗೂ ಶಟಲ್‌ ಪಂದ್ಯಾಟ ನಡೆಸುತ್ತಿದ್ದರು. ಈ ಬಾರಿ ಮೊದಲ ಬಾರಿಗೆ ಚೆಸ್‌ ಹಾಗೂ ಕೇರಂ ಪಂದ್ಯಾಟ ಆಯೋಜನೆ ಮಾಡಿದೆ. ಗ್ರಾಮೀಣ ಭಾಗದಲ್ಲಿ ಸಹಕಾರಿ ಸಂಘವೊಂದು ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜನೆ ಮಾಡಿರುವುದು ಸಣ್ಣ ಕೆಲಸವೇನೆಲ್ಲ. ಗ್ರಾಮೀಣ ಭಾಗದಲ್ಲಿ ಹಲವಾರು ಪ್ರತಿಭೆಗಳು ಇದ್ದಾರೆ. ಆದರೆ ಅವಕಾಶಗಳು ಲಭಿಸಿದರೆ ಮುಂದೆ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದವರೆಗೂ ಸಾಧನೆ ತೋರಲು ಸಾಧ್ಯವಿದೆ.  ಈ ನೆಲೆಯಲ್ಲಿ ಸಹಕಾರಿ ಸಂಘವೊಂದು ಕಳೆದ 6 ವರ್ಷಗಳಿಂದಲೂ ಹಮ್ಮಿಕೊಂಡು ಬರುತ್ತಿರುವ ಕಾರ್ಯವನ್ನು ಮೆಚ್ಚಬೇಕಿದೆ. ಸಹಕಾರಿ ಸಂಘ, ಸಂಘದ ಸದಸ್ಯರು,  ಸಿಬಂದಿಗಳು ಹಾಗೂ ಕ್ರೀಡಾಭಿಮಾನಿಗಳಿಂದ ಸಂಗ್ರಹ ಮಾಡುತ್ತಾರೆ.…..ಮುಂದೆ ಓದಿ….

ಹಲವು ಕಡೆ ಆಡಳಿತ ಮಂಡಳಿ ಹಾಗೂ ಸಂಸ್ಥೆಗಳ ಸಿಬಂದಿಗಳ ನಡುವೆ ಅಂತರ ಇರುವುದು ಕಾಣುತ್ತದೆ.ಆದರೆ ಪಂಜದ ಸಹಕಾರಿ ಸಂಘದಲ್ಲಿ ಆಡಳಿತ ಮಂಡಳಿ ಹಾಗೂ ಸಿಬಂದಿಗಳು ಜೊತೆಯಾಗಿ ಕಾರ್ಯಕ್ರಮ ಆಯೋಜನೆ ಮಾಡುತ್ತಿವೆ. ಅಂದರೆ ಕ್ರೀಡಾ ಕೂಟದ ಆಯೋಜನೆಯ ವೆಚ್ಚಗಳಲ್ಲಿ ಕೂಡಾ ಸಿಬಂದಿಗಳು ಕೂಡಾ ಭಾಗಿಯಾಗುವುದು ವಿಶೇಷ. ಸಿಬಂದಿಗಳಿಗೆ ಯಾವ ಲಾಭವೂ ಇಲ್ಲಿ ಇಲ್ಲದಿದ್ದರೂ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಅವಕಾಶ ನೀಡಲು ತಾವು ದುಡಿಯುವ ಸಹಕಾರಿ ಸಂಘದ ಹೆಸರಿನಲ್ಲಿ ಮಾಡುವ ಸೇವೆ ಇನ್ನೊಂದು ಮಾದರಿ ಕಾರ್ಯ.

ಒಂದು ಕಾಲದಲ್ಲಿ ಈ ಸಂಘವು ತೀರಾ ಸಂಕಷ್ಟದ ಸ್ಥಿತಿಯಲ್ಲಿತ್ತು. ಆ ಬಳಿಕ ಜನರನ್ನು ಒಂದಾಗಿಸಿಕೊಂಡು, ಪರಸ್ಪರ ಸಹಕಾರ ಚಿಂತನೆಯಲ್ಲಿ ಮುಂದುವರಿದು, ಎಲ್ಲಾ ರೀತಿಯ ಸೇವೆಯೂ ಸಂಸ್ಥೆಯಲ್ಲಿ ದೊರೆಯುವಂತೆ ಮಾಡಲಾಗಿತ್ತು. ಇದೀಗ ಉತ್ತಮ ಸಹಕಾರಿ ಸಂಘವಾಗಿ ಮುನ್ನಡೆಯುತ್ತಿದೆ.

ಚೆಸ್‌ನಂತಹ ಕ್ರೀಡೆಯಲ್ಲಿ ಗ್ರಾಮೀಣ ಭಾಗದಲ್ಲಿ ಅನೇಕ ಆಟಗಾರರು ಇದ್ದಾರೆ. ಅಂತಹವರಿಗೆ ಅವಕಾಶ ನೀಡಲು ಸಹಕಾರಿ ಸಂಘಗಳು ಹಾಗೂ ಇತರ ಸಂಘಗಗಳು ವೇದಿಕೆ ಸೃಷ್ಟಿ ಮಾಡುವುದು ಉತ್ತಮವಾದ ಕಾರ್ಯವಾಗಿದೆ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಚೆಸ್‌ ಎಸೋಸಿಯೇಶನ್‌ ಅಧ್ಯಕ್ಷ, ರಾಜ್ಯ ಉಪಾಧ್ಯಕ್ಷ ರಮೇಶ್‌ ಕೋಟೆ.

ಸಹಕಾರಿ ಸಂಘದಲ್ಲಿ ಆಡಳಿತ ಮಂಡಳಿ ಹಾಗೂ ಸಿಬಂದಿಗಳು ಎನ್ನುವ ಬದಲಾಗಿ ನಾವೊಂದು ಕುಟುಂಬದ ರೀತಿಯಲ್ಲಿ ಕೆಲಸ ಮಾಡುತ್ತೇವೆ. ಹೀಗಾಗಿಯೇ ಇಂತಹ ಕೆಲಸಗಳು ನಡೆಯಲು ಸಾಧ್ಯವಾಗಿದೆ. ಸಿಬಂದಿಗಳು ಈ ಕ್ರೀಡಾಕೂಟದ ಆಯೋಜನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ. ಸಂಘದ ಸದಸ್ಯರು ಇಂತಹ ಚಟುವಟಿಕಗೆ ಪ್ರೋತ್ಸಾಹ ನೀಡುತ್ತಾರೆ ಎಂದು ಹೇಳುತ್ತಾರೆ ಸಂಘದ ಅಧ್ಯಕ್ಷ ಗಣೇಶ್‌ ಪೈ ಹೇಳುತ್ತಾರೆ.
ಗಣೇಶ್‌ ಪೈ
ಕಳೆದ  6 ವರ್ಷಗಳಿಂದ ಸಹಕಾರಿ ಸಂಘದ ಸಹಕಾರದೊಂದಿಗೆ ಕ್ರೀಡಾ ಕೂಟ ನಡೆಯುತ್ತಿದೆ. ಈ ಬಾರಿ ಚೆಸ್‌ ಸ್ಫರ್ಧೆ ಆಯೋಜನೆ ಮಾಡಲಾಗಿದೆ. ನಮ್ಮೂರಿನ ಪ್ರತಿಭೆಗಳಿಗೂ ಅವಕಾಶ ಸಿಗಬೇಕು ಎನ್ನುವುದೇ ನಮ್ಮ ಉದ್ದೇಶ ಎನ್ನುತ್ತಾರೆ ಸಂಘದ ನಿರ್ದೇಶಕ ಚಂದ್ರಶೇಖರ ಶಾಸ್ತ್ರಿ.
ಚಂದ್ರಶೇಖರ ಶಾಸ್ತ್ರಿ
ಸಂಘದ ಕೆಲಸ, ಸಂಘದ ಬೆಳವಣಿಗೆ ಜೊತೆಗೆ ನಮ್ಮ ಆಸಕ್ತಿಗಳನ್ನು ಬೆಳೆಸುವುದು ಹಾಗೂ ನಮ್ಮೂರಿನ ಪ್ರತಿಭೆಗಳನ್ನು ಗುರುತಿಸಿ ಬೆಳೆಸಲು ಇಂತಹ ಕ್ರೀಡಾಕೂಟದ ಆಯೋಜನೆಯನ್ನು ಮಾಡಲಾಗುತ್ತದೆ ಎನ್ನುತ್ತಾರೆ ಸಂಘದ ಸಿಬಂದಿ, ಕ್ರೀಡಾಕೂಟದ ಆಯೋಜನೆಯ ನೇತೃತ್ವ ವಹಿಸಿದ ಕೇಶವ ಕೆರೆಮೂಲೆ ಹೇಳುತ್ತಾರೆ.
ಕೇಶವ ಕೆರೆಮೂಲೆ

Chess and carrom competitions are organized in rural areas as a model activity under the joint auspices of the Panja Primary Agricultural Cooperative Society and the Staff . This initiative provides an opportunity for showcasing rural talent.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಮೇಘಾಲಯದ ಅಡಿಕೆಗೆ ಜಿಐ ಟ್ಯಾಗ್‌ ಪ್ರಕ್ರಿಯೆ..! ಮಲೆನಾಡು ಅಡಿಕೆಗೂ ಏಕೆ ಪ್ರಯತ್ನಿಸಬಾರದು..?

ಮೇಘಾಲಯ ಅಡಿಕೆಗೆ ಜಿಐ ಟ್ಯಾಗ್‌ ಪಡೆಯಲು ಅರ್ಜಿ ಸಲ್ಲಿಸಿರುವ ಬೆಳವಣಿಗೆ ಅಡಿಕೆಯ ಭೌಗೋಳಿಕ…

2 hours ago

ಹವಾಮಾನ ವರದಿ | 27-09-2026 | ಕರ್ನಾಟಕದಲ್ಲಿ ಸದ್ಯ ಒಣಹವೆ ; ಸೆ.28ರಿಂದ ಮತ್ತೆ ಮಳೆ ಸಾಧ್ಯತೆ..!

ಕರ್ನಾಟಕದಾದ್ಯಂತ ಸೆ.28ರಂದು ಒಣಹವೆ ಆವರಿಸುವ ಸಾಧ್ಯತೆ ಇದ್ದರೂ ಕೊಡಗು ಹಾಗೂ ಚಿಕ್ಕಮಗಳೂರಿನ ಕೆಲವು…

9 hours ago

ಮಲೆನಾಡಿನಲ್ಲಿ ಅಡಿಕೆ ಕಷ್ಟ…!, ಬಯಲುಸೀಮೆಯಲ್ಲಿ ಅಡಿಕೆ ಇಷ್ಟು ಸುಲಭವೇ? ಕಾರಣ ತಿಳಿದರೆ ಅಚ್ಚರಿಯಾಗುತ್ತೆ!

ಬಯಲುಸೀಮೆಯಲ್ಲಿ ಅಡಿಕೆ ಬೆಳೆ ವಿಸ್ತರಣೆಗೆ ನೀರಾವರಿ, ಕಡಿಮೆ ನಿರ್ವಹಣಾ ವೆಚ್ಚ ಮತ್ತು ಉತ್ತಮ…

12 hours ago

ಹಾಲಿನ ದರ ಏರಿಕೆ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ – ಡಿ.ಕೆ.ಶಿವಕುಮಾರ್

ಹಾಲಿನ ದರವನ್ನು ₹12 ಹೆಚ್ಚಿಸುವಂತೆ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಮನವಿ ಮಾಡಿದ್ದಾರೆ.…

14 hours ago

ದೇಶಿ ಗೋವಿನ ಹಾಲು, ತುಪ್ಪದ ಮಹತ್ವದ ಪ್ರತಿಪಾದನೆ – ಪಾರಂಪರಿಕ ಆಹಾರ ಪದ್ಧತಿಗೆ ಒತ್ತು

ಗೋಕರ್ಣದಲ್ಲಿ ನಡೆದ ಅನ್ನಬ್ರಹ್ಮ ಚಾತುರ್ಮಾಸ್ಯದ ಸಮಾರೋಪದಲ್ಲಿ ದೇಶಿ ಗೋವಿನ ಹಾಲು, ತುಪ್ಪ ಹಾಗೂ…

1 day ago

ಕುಟುಂಬದ ಸೌಂದರ್ಯ ವೈಭವದಲ್ಲಲ್ಲ, ಸೌಹಾರ್ದತೆಯಲ್ಲಿ: ಸಂಬಂಧ ಉಳಿಸುವುದೇ ನಿಜವಾದ ಗೆಲುವು

ಕುಟುಂಬದ ನಿಜವಾದ ಶ್ರೀಮಂತಿಕೆ ಹಣ, ಸ್ಥಾನಮಾನ ಅಥವಾ ವೈಭವದಲ್ಲಿಲ್ಲ; ಪರಸ್ಪರ ಗೌರವ, ನಂಬಿಕೆ…

1 day ago