ಸಾಂಕೇತಿಕ ಚಿತ್ರ (ಚಿತ್ರಕೃಪೆ :ಸ್ಕಂದ ಪ್ರಸಾದ್)
ದಕ್ಷಿಣ ಕನ್ನಡ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆ. ವಿವಿಧ ತಾಲೂಕುಗಳು ವೇಗದಿಂದ ಅಭಿವೃದ್ಧಿಯಾಗುತ್ತದೆ. ರಸ್ತೆ, ನೆಟ್ವರ್ಕ್, ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಕಡೆಗೆ ಹೆಜ್ಜೆ ಇಡುತ್ತಿದೆ. ಅಭಿವೃದ್ಧಿಯ ಕಲ್ಪನೆ ಬಂದಾಗ ಬೌದ್ಧಿಕವಾಗಿ ಹಾಗೂ ಬೌತಿಕವಾಗಿ ಎರಡೂ ಅಭಿವೃದ್ದಿಯಾದರೆ ಮಾತ್ರವೇ ಊರು ಇನ್ನಷ್ಟು ಸುಂದರವಾಗಲಿದೆ. ರಸ್ತೆ, ನೆಟ್ವರ್ಕ್ , ಸೇತುವೆ, ವಿದ್ಯುತ್ ಈಗಿನ ಪ್ರಮುಖ ಬೇಡಿಕೆಯ ವಿಷಯವಾಗಿದೆ. ಅನೇಕ ವರ್ಷಗಳಿಂದ ವಿವಿಧ ಕಾರಣಗಳಿಂದ ಈ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಅದಕ್ಕಾಗಿ ಯಾರನ್ನೂ ದೂರಿಯೂ, ಟೀಕೆ ಮಾಡಿಯೂ ಪ್ರಯೋಜನ ಇಲ್ಲ. ನಮ್ಮ ಸಮಸ್ಯೆಗೆ ನಾವೇ ಕಾರಣರು. ನಾವು ಸಂಬಂಧಿತರಲ್ಲಿ ಹೇಳದೇ ಇದ್ದುದು, ಕೇಳದೇ ಇದ್ದುದೇ ಕಾರಣ. ಈಗ ನಾವು ಹೇಳಿಕೊಂಡರೆ ಮಾತ್ರವೇ ಪರಿಹಾರವೂ ಸಾಧ್ಯವಿದೆ. ಈಗಾಗಲೇ ಸಾಕಷ್ಟು ಮಂದಿ ರೂರಲ್ ಮಿರರ್ ಗೆ ತಮ್ಮೂರಿನ ಮೂಲಭೂತ ಸಮಸ್ಯೆಗಳ ಬಗ್ಗೆ ಫೋಟೊಗಳನ್ನು ಕಳುಹಿಸುತ್ತಿದ್ದಾರೆ, ತಮ್ಮ ಹೆಸರು ಪ್ರಕಟಿಸದಂತೆಯೂ ಮನವಿ ಮಾಡುತ್ತಾರೆ. ಹೀಗಾಗಿ ಎಲ್ಲವನ್ನೂ ಪ್ರಕಟಿಸಲು ಆಗುತ್ತಿಲ್ಲ. ಈಗ ಅಭಿಯಾನದ ರೂಪದಲ್ಲಿ ಇಂತಹ ವರದಿಗಳನ್ನು ಮಾಡಬಹುದಾಗಿದೆ. ತನ್ನೂರಿನ ಮೂಲಭೂತ ಸಮಸ್ಯೆ ಪರಿಹಾರಕ್ಕೆ ಪ್ರಶ್ನೆ ಮಾಡುವುದೇ ಗ್ರಾಮೀಣಾಭಿವೃದ್ಧಿಯ ಮೊದಲ ಹೆಜ್ಜೆ. ಇದಕ್ಕೆ ನಾವು ವೇದಿಕೆಯಾಗುತ್ತೇವೆ ಅಷ್ಟೇ.
ಮಹಾತ್ಮಾಗಾಂಧೀಜಿ ಅವರು ಹೇಳುವ ಕಲ್ಪನೆಯೂ ಅಭಿವೃದ್ಧಿಯ ಕಲ್ಪನೆಯೂ ಇದೇ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಯ ಕಲ್ಪನೆಗಳೂ ಸುಂದರವಾಗಿದೆ. ಇದಕ್ಕಾಗಿ ನಾವು ಗ್ರಾಮೀಣ ಭಾರತವನ್ನು ಇನ್ನಷ್ಟು ಗಟ್ಟಿ ಮಾಡುವ ಸಲುವಾಗಿ ಪುಟ್ಟದೊಂದು ಹೆಜ್ಜೆ ಇರಿಸೋಣ. ನಿಮ್ಮ ಊರಿನ ಗ್ರಾಮೀಣ ಸಮಸ್ಯೆಗಳು, ಎಷ್ಟೋ ವರ್ಷಗಳಿಂದ ಆಗದೇ ಇರುವ ರಸ್ತೆ, ಸೇತುವೆ, ನೆಟ್ವರ್ಕ್ ಸಮಸ್ಯೆಗಳ ಬಗ್ಗೆ ನಮಗೊಂದು ವಿಡಿಯೋ, ಫೋಟೋ ಸಹಿತ ವಿವರ ಕಳುಹಿಸಿಕೊಡಿ. ನಾವು ಬೆಳಕು ನೀಡುತ್ತಾ, ಎಲ್ಲೆಲ್ಲಿ ಏನಾಗಬೇಕಿದೆ ಎಂಬುದರ ಪಟ್ಟಿ ಮಾಡೋಣ, ಅದನ್ನು ಸಂಬಂಧಿತರ ಗಮನಕ್ಕೆ ತರೋಣ. ಹಾಗಿದ್ದರೆ ತಡವೇಕೆ ? ನಮ್ಮ ವಾಟ್ಸಪ್ ಸಂಖ್ಯೆಗೆ ಊರು, ಫೋಟೊ, ಪುಟ್ಟ ವಿಡಿಯೋ ಸಹಿತ ವಿವರ ಕನ್ನಡದಲ್ಲಿ ಬರೆದು ಕಳುಹಿಸಿ. ನಮ್ಮ ವಾಟ್ಸಪ್ ಸಂಖ್ಯೆ 9449125447 ಅಥವಾ 9880497447 ( ಯಾವುದೇ ಕಾರಣಕ್ಕೂ ಕರೆ ಮಾಡುವ ಅವಶ್ಯಕತೆ ಇಲ್ಲ )
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶ ಸೇರಿದಂತೆ ಅಲ್ಲಲ್ಲಿ…
ತುಳುನಾಡಿನ ವಿವಿದೆಡೆ ವಿಷ್ಣುಮೂರ್ತಿ ದೈವದ ನೇಮ, ಒತ್ತೆಕೋಲ ನಡೆಯುತ್ತದೆ. ಈ ಆಚರಣೆಯ ಹಿಂದಿರುವ…
ಪಟ್ಟೆ ವಿದ್ಯಾ ಸಮಿತಿ (ರಿ)ಯಿಂದ ನಡೆಸಲ್ಪಡುವ ಪ್ರತಿಭಾ ಪ್ರೌಢ ಶಾಲೆ ಪಟ್ಟೆ ಹಾಗೂ…
ಪುತ್ತೂರು ಮೂಲದ 81+ ವರ್ಷ ಪರಂಪರೆಯ ಮುಳಿಯ ಜ್ಯುವೆಲ್ಸ್ ಇನ್ನು ಮುಂದೆ ಹೊಸ…
ಗುಜ್ಜೆ ಶೇಂಗಾ ಮಸಾಲಾ ಪಲ್ಯಕ್ಕೆ ಬೇಕಾಗುವ ವಸ್ತುಗಳು ಹಾಗೂ ಮಾಡುವ ವಿಧಾನ :…
ಅಡಿಕೆ ಮರದ ಜೊತೆಗೂ ಕಾಫಿ ಬೆಳೆ ಅನುಕೂಲಕರವಾಗಿದೆ. ಹೀಗಾಗಿ ಅಡಿಕೆ ಬೆಳೆಗಾರರು ಉಪ…