Advertisement
The Rural Mirror ಕಾಳಜಿ

ಗ್ರಾಮೀಣಾಭಿವೃದ್ಧಿ ಕಡೆಗೆ ಹೆಜ್ಜೆ | ರೂರಲ್‌ ಮಿರರ್‌ ಕಾಳಜಿ | ನಿಮ್ಮೂರಲ್ಲಿ ಸಮಸ್ಯೆ ಇದೆಯೇ ತಡಮಾಡಬೇಡಿ – ಮಾತಾಡೋಣ |

Share

ದಕ್ಷಿಣ ಕನ್ನಡ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆ. ವಿವಿಧ ತಾಲೂಕುಗಳು ವೇಗದಿಂದ ಅಭಿವೃದ್ಧಿಯಾಗುತ್ತದೆ. ರಸ್ತೆ, ನೆಟ್ವರ್ಕ್‌, ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಕಡೆಗೆ ಹೆಜ್ಜೆ ಇಡುತ್ತಿದೆ. ಅಭಿವೃದ್ಧಿಯ ಕಲ್ಪನೆ ಬಂದಾಗ ಬೌದ್ಧಿಕವಾಗಿ ಹಾಗೂ ಬೌತಿಕವಾಗಿ ಎರಡೂ ಅಭಿವೃದ್ದಿಯಾದರೆ ಮಾತ್ರವೇ  ಊರು ಇನ್ನಷ್ಟು ಸುಂದರವಾಗಲಿದೆ. ರಸ್ತೆ, ನೆಟ್ವರ್ಕ್‌ , ಸೇತುವೆ, ವಿದ್ಯುತ್‌ ಈಗಿನ ಪ್ರಮುಖ ಬೇಡಿಕೆಯ ವಿಷಯವಾಗಿದೆ. ಅನೇಕ ವರ್ಷಗಳಿಂದ ವಿವಿಧ ಕಾರಣಗಳಿಂದ ಈ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಅದಕ್ಕಾಗಿ ಯಾರನ್ನೂ ದೂರಿಯೂ, ಟೀಕೆ ಮಾಡಿಯೂ ಪ್ರಯೋಜನ ಇಲ್ಲ. ನಮ್ಮ ಸಮಸ್ಯೆಗೆ ನಾವೇ ಕಾರಣರು. ನಾವು ಸಂಬಂಧಿತರಲ್ಲಿ ಹೇಳದೇ ಇದ್ದುದು, ಕೇಳದೇ ಇದ್ದುದೇ ಕಾರಣ. ಈಗ ನಾವು ಹೇಳಿಕೊಂಡರೆ ಮಾತ್ರವೇ ಪರಿಹಾರವೂ ಸಾಧ್ಯವಿದೆ. ಈಗಾಗಲೇ ಸಾಕಷ್ಟು ಮಂದಿ ರೂರಲ್‌ ಮಿರರ್‌ ಗೆ ತಮ್ಮೂರಿನ ಮೂಲಭೂತ ಸಮಸ್ಯೆಗಳ ಬಗ್ಗೆ ಫೋಟೊಗಳನ್ನು ಕಳುಹಿಸುತ್ತಿದ್ದಾರೆ, ತಮ್ಮ ಹೆಸರು ಪ್ರಕಟಿಸದಂತೆಯೂ ಮನವಿ ಮಾಡುತ್ತಾರೆ. ಹೀಗಾಗಿ ಎಲ್ಲವನ್ನೂ ಪ್ರಕಟಿಸಲು ಆಗುತ್ತಿಲ್ಲ. ಈಗ ಅಭಿಯಾನದ ರೂಪದಲ್ಲಿ ಇಂತಹ ವರದಿಗಳನ್ನು  ಮಾಡಬಹುದಾಗಿದೆ. ತನ್ನೂರಿನ ಮೂಲಭೂತ ಸಮಸ್ಯೆ ಪರಿಹಾರಕ್ಕೆ ಪ್ರಶ್ನೆ ಮಾಡುವುದೇ  ಗ್ರಾಮೀಣಾಭಿವೃದ್ಧಿಯ ಮೊದಲ ಹೆಜ್ಜೆ. ಇದಕ್ಕೆ ನಾವು ವೇದಿಕೆಯಾಗುತ್ತೇವೆ ಅಷ್ಟೇ.

ಮಹಾತ್ಮಾಗಾಂಧೀಜಿ ಅವರು ಹೇಳುವ ಕಲ್ಪನೆಯೂ ಅಭಿವೃದ್ಧಿಯ ಕಲ್ಪನೆಯೂ ಇದೇ  ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಯ ಕಲ್ಪನೆಗಳೂ ಸುಂದರವಾಗಿದೆ. ಇದಕ್ಕಾಗಿ ನಾವು ಗ್ರಾಮೀಣ ಭಾರತವನ್ನು ಇನ್ನಷ್ಟು ಗಟ್ಟಿ ಮಾಡುವ ಸಲುವಾಗಿ ಪುಟ್ಟದೊಂದು ಹೆಜ್ಜೆ ಇರಿಸೋಣ. ನಿಮ್ಮ ಊರಿನ ಗ್ರಾಮೀಣ ಸಮಸ್ಯೆಗಳು, ಎಷ್ಟೋ ವರ್ಷಗಳಿಂದ ಆಗದೇ ಇರುವ ರಸ್ತೆ, ಸೇತುವೆ, ನೆಟ್ವರ್ಕ್‌ ಸಮಸ್ಯೆಗಳ ಬಗ್ಗೆ ನಮಗೊಂದು ವಿಡಿಯೋ, ಫೋಟೋ ಸಹಿತ ವಿವರ ಕಳುಹಿಸಿಕೊಡಿ. ನಾವು ಬೆಳಕು ನೀಡುತ್ತಾ, ಎಲ್ಲೆಲ್ಲಿ ಏನಾಗಬೇಕಿದೆ ಎಂಬುದರ ಪಟ್ಟಿ ಮಾಡೋಣ, ಅದನ್ನು ಸಂಬಂಧಿತರ ಗಮನಕ್ಕೆ ತರೋಣ. ಹಾಗಿದ್ದರೆ ತಡವೇಕೆ ? ನಮ್ಮ ವಾಟ್ಸಪ್‌ ಸಂಖ್ಯೆಗೆ ಊರು, ಫೋಟೊ, ಪುಟ್ಟ ವಿಡಿಯೋ ಸಹಿತ ವಿವರ ಕನ್ನಡದಲ್ಲಿ ಬರೆದು ಕಳುಹಿಸಿ. ನಮ್ಮ ವಾಟ್ಸಪ್‌ ಸಂಖ್ಯೆ 9449125447 ಅಥವಾ 9880497447 ( ಯಾವುದೇ ಕಾರಣಕ್ಕೂ ಕರೆ ಮಾಡುವ ಅವಶ್ಯಕತೆ ಇಲ್ಲ )

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?

ಅಡಿಕೆ ದರ ಕುಸಿಯುತ್ತಿರುವ ಸಂದರ್ಭದಲ್ಲಿ ಕೃಷಿ ಕೂಲಿ ದರ ನಿರಂತರವಾಗಿ ಏರುತ್ತಿರುವುದು ಮಲೆನಾಡಿನ…

20 hours ago

ಕಸೂತಿ ಕಲಿತು ಸ್ವಾವಲಂಬನೆಯತ್ತ ಗ್ರಾಮೀಣ ಮಹಿಳೆಯರು

ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಗ್ರಾಮೀಣ ಮಹಿಳೆಯರಿಗೆ ಒಂದು ತಿಂಗಳ ಉಚಿತ ಮಗ್ಗಂ…

21 hours ago

ಕರ್ನಾಟಕದಲ್ಲಿ ಬರದ ಹೊಡೆತ – ಬೆಳೆ ನಷ್ಟ ₹60 ಸಾವಿರ ಕೋಟಿವರೆಗೆ ಸಾಧ್ಯತೆ

ಕರ್ನಾಟಕದ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟ ₹50 ಸಾವಿರ ಕೋಟಿಯಿಂದ ₹60…

21 hours ago

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿದ ಮಾತ್ರಕ್ಕೆ ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿರುವುದನ್ನು ಮಾತ್ರ ಆಧಾರವಾಗಿಟ್ಟುಕೊಂಡು ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ…

21 hours ago

ಹವಾಮಾನ ವರದಿ | 3-10-2026 | ಬಂಗಾಳಕೊಲ್ಲಿಯಿಂದ ತೇವಾಂಶದ ಗಾಳಿ – ಕರ್ನಾಟಕದಲ್ಲಿ ಮತ್ತೆ ಮಳೆ?

ಬಂಗಾಳಕೊಲ್ಲಿಯಿಂದ ತಮಿಳುನಾಡು ಮೂಲಕ ತೇವಾಂಶದ ಗಾಳಿ ರಾಜ್ಯದ ದಕ್ಷಿಣ ಒಳನಾಡಿನತ್ತ ಬೀಸುವ ಸಾಧ್ಯತೆಯಿಂದ…

2 days ago

ಮಳೆ ಕೈಕೊಟ್ಟಿದೆ… ಜಾನುವಾರುಗಳಿಗೆ ಮೇವು ಎಲ್ಲಿಂದ..?

ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…

2 days ago