ಗ್ರಾಮೀಣ ಭಾಗದಲ್ಲಿ ಅನೇಕ ಉದ್ಯಮಗಳು ಇವೆ. ಕೃಷಿ ವಸ್ತುಗಳ ಮೌಲ್ಯವರ್ಧನೆ, ಮಾರಾಟ, ಉದ್ಯಮಗಳು ಸಾಕಷ್ಟು ಗ್ರಾಮೀಣ ಭಾಗದಲ್ಲಿ ಇದೆ. ಇವುಗಳಿಗೆ ವೇದಿಕೆ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಮುಳ್ಳೇರಿಯಾದಲ್ಲಿ ಮೂರು ದಿನಗಳ ಮೇಳ ನಡೆಯಲಿದೆ. ಈ ಬಗ್ಗೆ ಪೂರ್ವ ತಯಾರಿ ನಡೆಯುತ್ತಿದೆ.
ಗ್ರಾಮೀಣ ಭಾಗದಲ್ಲಿ ಸಾಕಷ್ಟು ಸಣ್ಣಪುಟ್ಟ ಉದ್ಯಮಗಳು ಈಚೆಗೆ ಸೃಷ್ಟಿಯಾಗಿವೆ. ಕೊರೋನಾ ನಂತರ ಕೃಷಿ ಸೇರಿದಂತೆ ಹಲವು ವಸ್ತುಗಳ ತಯಾರಿಕೆ ನಡೆಯುತ್ತಿದೆ. ಇಂತಹ ಉದ್ಯಮಗಳಿಗೆ ವೇದಿಕೆ ಸೇಷ್ಟಿಸುವ ನೆಲೆಯಲ್ಲಿ ಮೂರು ದಿನಗಳ ಮೇಳವನ್ನು ಆಯೋಜನೆ ಮಾಡಲು ಮುಳ್ಳೇರಿಯಾದಲ್ಲಿ ಸಿದ್ಧತೆ ನಡೆಯುತ್ತಿದೆ. ಪರಿಸರದ ನಡುವೆಯೇ ನಡೆಯಲಿರುವ ಈ ಮೇಳಕ್ಕೆ ಪೂರ್ವ ತಯಾರಿ ನಡೆಯುತ್ತಿದೆ. ಯಾವುದೇ ಮರ ಗಿಡಗಳನ್ನು ಕತ್ತರಿಸದೆ ಅಲ್ಲೇ ವೇದಿಕೆಯನ್ನು ರಚಿಸಿ ಮೇಳವನ್ನು ನಡೆಸಲು ಉದ್ದೇಶಿಸಲಾಗಿದೆ.
ಗ್ರಾಮೀಣ ಉದ್ಯಮಗಳನ್ನು ಬೆಂಬಲಿಸಲು ಹಾಗೂ ಕೃಷಿ ಸಂಬಂಧಿತ ಗೃಹೋದ್ಯಮಗಳು ಹೆಚ್ಚು ಬೆಳವಣಿಗೆಗಳಾದಾಗ ಗ್ರಾಮೀಣ ಆರ್ಥಿಕತೆ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಈ ಮೇಳವನ್ನು ಆಯೋಜಿಸಿ ವೇದಿಕೆ ಸೃಷ್ಟಿಸಲಾಗುತ್ತಿದೆ ಎಂದು ಕ್ಯಾಂಪ್ಕೋ ನಿರ್ದೇಶಕ ಸತ್ಯನಾರಾಯಣ ಪ್ರಸಾದ್ ಹೇಳುತ್ತಾರೆ.