ವಿದ್ಯುತ್‌ ಲೈನ್‌ ಕ್ಲಿಯರ್‌ಗೆ ಟೊಂಗೆಯ ಬದಲಿಗೆ ಮರವೇ ಢಮಾರ್….!‌ | ಹಸಿರು ಬೇಡುವ ದೇಶದ ಬೇಡಿಕೆ ನಡುವೆ ಇಲಾಖೆಗಳೇ ಹೀಗೆ ಮಾಡಿದರೆ…?

June 24, 2024
12:26 PM
ಗ್ರಾಮೀಣ ಭಾಗದ ವಿದ್ಯುತ್‌ ಸಮಸ್ಯೆ ಪರಿಹಾರ ಹಾಗೂ ಅರಣ್ಯ ಉಳಿಸುವಿಕೆ ಇದೆರಡೂ ಸವಾಲಿನ ಕೆಲಸ. ಈ ಕೆಲಸದಲ್ಲಿ ಅರಣ್ಯವೂ ಉಳಿಸಬೇಕಿದೆ. ಸುಳ್ಯದ ಚೊಕ್ಕಾಡಿ ಬಳಿ ವಿದ್ಯುತ್‌ ಲೈನ್‌ ಹೆಸರಿನಲ್ಲಿ ಇಡೀ ಮರವನ್ನೇ ಕಡಿದು ಹಾಕಿರುವುದು ಈಗ ಚರ್ಚೆಗೆ ಕಾರಣವಾಗಿದೆ.

ವಿಶ್ವದೆಲ್ಲೆಡೆ ಮರ ಉಳಿಸಿ-ಗಿಡ ಬೆಳೆಸಿ , ಹಸಿರು ರಕ್ಷಿಸಿ ಎಂದು ಕರೆ ನೀಡುತ್ತಿದೆ. ತಾಪಮಾನ ವಿಪರೀತವಾಗಿ ದೇಶದ ಹಲವು ಕಡೆ ಜನರು ಸಾಯುತ್ತಿದ್ದಾರೆ. ಈ ತಾಪಮಾನ ಇಳಿಕೆಗೆ ಹಲವು ಪ್ರಯತ್ನಗಳು ನಡೆಯಬೇಕಿದೆ. ಇದರ ಒಂದು ಭಾಗವೇ ಗಿಡ-ಮರಗಳನ್ನು ಉಳಿಸುವುದು ಹಾಗೂ ಬೆಳೆಸುವುದು. ಹೀಗಾಗಿ ಈಗ ಗ್ರಾಮೀಣ ಭಾಗದಲ್ಲಿ ಸವಾಲಿನ ಕೆಲಸ ವಿದ್ಯುತ್‌ ಸರಬರಾಜು ಹಾಗೂ ಗಿಡ-ಮರಗಳ ಉಳಿಸುವುದು…!…….ಮುಂದೆ ಓದಿ…..

Advertisement
Advertisement
Advertisement

ಸುಳ್ಯ ತಾಲೂಕಿನ ಅಮರಮುಡ್ನೂರು, ಅಮರ ಪಡ್ನೂರು,  ಚೊಕ್ಕಾಡಿ-ಪೈಲಾರು-ಕುಕ್ಕುಜಡ್ಕ ಮೊದಲಾದ ಕಡೆಗಳಲ್ಲಿ ವಿದ್ಯುತ್‌ ಲೈನ್‌ ಕಾಡಿನ ನಡುವೆ ಹೋಗುತ್ತಿದೆ. ಗಾಳಿ ಬಂದಾಗ ಮರದ ಗೆಲ್ಲುಗಳು ತಂತಿಗೆ ತಾಗುತ್ತವೆ. ವಿದ್ಯುತ್‌ ಸರಬರಾಜಿಗೆ ತೊಂದರೆಯಾಗುತ್ತದೆ. ಹೀಗಾಗಿ ಪ್ರತೀ ಬಾರಿ ವಿದ್ಯುತ್‌ ಲೈನ್‌ ದುರಸ್ತಿ ಕಾರ್ಯ, ತಂತಿಗೆ ತಾಗುವ ಮರದ ಗೆಲ್ಲು, ಹಸಿರು ಸೊಪ್ಪು ಇತ್ಯಾದಿಗಳನ್ನು ತೆರವು ಮಾಡುವ ಕೆಲಸ ನಡೆಯುತ್ತದೆ. ಈ ಬಾರಿ ವಿದ್ಯುತ್‌ ತಂತಿ ಪಕ್ಕದಲ್ಲಿರುವ ಮರಗಳನ್ನು ಸಣ್ಣ ಗಿಡಗಳನ್ನು ಬುಡದಿಂದಲೇ ಕಡಿದು ಹಾಕಲಾಗಿದೆ. ಈ ಕೃತ್ಯದ ಬಗ್ಗೆ ಈಗ ಚರ್ಚೆ ಆರಂಭವಾಗಿದೆ. ಮರದ, ಗಿಡದ ಗೆಲ್ಲುಗಳನ್ನು ಮಾತ್ರವೇ ಕಡಿಯುವ ಬದಲಾಗಿ ಇಡೀ ಮರವನ್ನು ಕಡಿದು ಹಾಕಿರುವ ಬಗ್ಗೆ ಪರಿಸರ ಪ್ರೇಮಿಗಳು ವಿಷಾದ ವ್ಯಕ್ತಪಡಿಸಿದ್ದಾರೆ. ಇಡೀ ದೇಶವೇ ಹಸಿರು ಉಳಿಸುವ ಬಗ್ಗೆ ಹೆಜ್ಜೆ ಇರಿಸಿದರೆ ಇಲ್ಲಿ ಬುಡದಿಂದಲೇ ಗಿಡ-ಮರಗಳನ್ನು ಕಡಿಯುವ ಅಗತ್ಯ ಇರಲಿಲ್ಲ ಎಂದು ವಿಷಾದಿಸಿದ್ದಾರೆ.…….ಮುಂದೆ ಓದಿ…..

Advertisement

Advertisement

ಗ್ರಾಮೀಣ ಭಾಗಗಳ ಮೂಲಭೂತ ಸೌಕರ್ಯಗಳಲ್ಲಿ ವಿದ್ಯುತ್‌ ಕೂಡಾ ಒಂದು. ವಿದ್ಯುತ್‌ ಸರಬರಾಜಿಗೆ ಹಲವು ಸಮಸ್ಯೆಗಳು ಇವೆ. ಹಲವು ಕಡೆಗಳಲ್ಲಿ ಅರಣ್ಯದ ನಡುವೆಯೇ ವಿದ್ಯುತ್‌ ತಂತಿ ಹಾದುಹೋಗುತ್ತದೆ. ಹೀಗಾಗಿ ಪ್ರತೀ ಬಾರಿ ಮಳೆಗಾಲ ಆರಂಭದ ಹೊತ್ತಿಗೆ ವಿದ್ಯುತ್‌ ತಂತಿ ಕ್ಲಿಯರ್‌ ಮಾಡುವ ಕೆಲಸ ನಡೆಯುತ್ತಿತ್ತು. ಈ ಸಮಯದಲ್ಲಿ ತಂತಿಗೆ ತಾಗುವ ಮರದ ಟೊಂಗೆ, ಹಸಿರು ಬಳ್ಳಿ, ಸಣ್ಣ ಗೆಲ್ಲುಗಳನ್ನು ಸವರುವ ಕೆಲಸ ನಡೆಯುತ್ತಿತ್ತು. ಆದರೆ ಈ ಬಾರಿ ಚೊಕ್ಕಾಡಿಯ ಈ ಪ್ರದೇಶದಲ್ಲಿ ರಸ್ತೆ ಬದಿಯೇ ಮರಗಳನ್ನು ಕಡಿಯಲಾಗಿದೆ. ಇದು ವಿಷಾದಕ್ಕೆ ಕಾರಣವಾಗಿದೆ.…….ಮುಂದೆ ಓದಿ…..

Advertisement

ಒಂದು ಕಡೆ ಅರಣ್ಯ ಇಲಾಖೆ ಹಾಗೂ ಸಾಮಾಜಿಕ ಅರಣ್ಯವು ರಸ್ತೆ ಬದಿ ಗಿಡಗಳನ್ನು ನೆಡುವುದು, ಕೆಲವು ಕಡೆ ವಿದ್ಯುತ್‌ ತಂತಿಯ ಕೆಳಭಾಗವೇ ಸಾಲು ಸಾಲು ಗಿಡಗಳನ್ನು ನೆಡುವುದು, ಇನ್ನೊಂದು ಕಡೆ ಮರದ ಗೆಲ್ಲುಗಳು ತಾಗುತ್ತವೆ ಎಂದು ಮರವನ್ನೇ ಕಡಿಯುವುದು..!. ಈ ವೈರುಧ್ಯದ ಬಗ್ಗೆಯೇ ಈಗ ಹೆಚ್ಚು ಚರ್ಚೆಯಾಗಬೇಕಿದೆ ಎಂಬುದು ಪರಿಸರ ಪ್ರಿಯರ ಅಭಿಪ್ರಾಯ.

Advertisement

ಈಚೆಗೆ ಕೇರಳ ಹೈಕೋರ್ಟ್‌ ಕೂಡಾ ತೀರ್ಪೊಂದನ್ನು ನೀಡಿದೆ. ಅಭಿವೃದ್ಧಿ ಅಥವಾ ವಾಣಿಜ್ಯ ಉದ್ದೇಶದ ಸಂದರ್ಭ ಇಡೀ ಮರವನ್ನೇ ಉರುಳಿಸಬಾರದು, ತೊಂದರೆಯಾಗುವ ಮರದ ಟೊಂಗೆಯನ್ನು ಕತ್ತರಿಸಿ ಅಥವಾ ಸಮಸ್ಯೆಯಾಗುವ ಭಾಗದಿಂದ ಮರವನ್ನು ಕತ್ತರಿಸಿ, ಇಡೀ ಮರವನ್ನು ತುಂಡರಿಸಬಾರದು ಎಂದು ತೀರ್ಪು ನೀಡಿದೆ. ಇದರ ಅರ್ಥ ಇಡೀ ದೇಶಕ್ಕೆ ಇಂದು ಹಸಿರಿನ ಅವಶ್ಯಕತೆ ಇದೆ. ಅಗತ್ಯಕ್ಕೆ ತಕ್ಕಷ್ಟು ಮಾತ್ರವೇ ಗೆಲ್ಲುಗಳನ್ನು ತುಂಡರಿಸಿ, ಇಡೀ ಮರವನ್ನು ಕಡಿಯುವುದು ಕಡಿಮೆಯಾಗಲಿ ಎನ್ನುವುದು ಆಶಯವಾಗಿದೆ. ಹವಾಮಾನ ವೈಪರೀತ್ಯ ನಿಯಂತ್ರಣಕ್ಕೆ ಪರಿಸರದ ಉಳಿವಿನಿಂದ ಮಾತ್ರಾ ಸಾಧ್ಯವಿದೆ. ಇಲಾಖೆಗಳು ಈ ನೆಲೆಯಲ್ಲಿ ಯೋಚನೆ ಮಾಡಬೇಕಿದೆ. ಇನ್ನು ಮುಂದೆ ಅನಗತ್ಯವಾಗಿ ಸಾರ್ವಜನಿಕ ಉದ್ದೇಶಗಳಲ್ಲಿ ಬೇಕಾಬಿಟ್ಟಿ ಮರ ತುಂಡರಿಸಿದಂತೆ ಎಚ್ಚರಿಕೆ ವಹಿಸಬೇಕಿದೆ. ಅದೂ ಇಲಾಖೆಗಳು ಈ ದೃಷ್ಟಿಯಿಂದ ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ.

 

Advertisement

Electricity supply is disrupted, it can have serious consequences for the residents of these rural areas. Not only does the cutting of trees for the installation of electricity lines harm the environment, but it also puts wildlife habitats at risk. Finding a balance between providing electricity to rural communities and preserving the forests is crucial. Sustainable solutions such as underground cabling or utilizing renewable energy sources can help mitigate the impact on forests while ensuring reliable electricity supply. It is essential for policymakers and stakeholders to work together to address this issue in a responsible and sustainable manner.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |
January 15, 2025
1:00 PM
by: ಸಾಯಿಶೇಖರ್ ಕರಿಕಳ
ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ
ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ
January 15, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror