ಪಾಸಿಟಿವ್ ಬರಹಗಳ ಕಡೆಗೆ ಗಮನ ಸೆಳೆಯುತ್ತಾ, ರಚನಾತ್ಮಕ ಸುದ್ದಿಗಳ ಕಡೆಗೆ ಆದ್ಯತೆ ನೀಡುತ್ತಾ ಬಂದಿದ್ದ ರೂರಲ್ ಮಿರರ್ ಇದೀಗ ಕೊರೋನಾ ಸಮಯದ ಪಾಸಿಟಿವ್ ಬೆಳವಣಿಗೆಗಳ ಬರಹಗಳುಳ್ಳ ಕೃತಿಯನ್ನು ಪ್ರಕಾಶನ ಮಾಡುತ್ತಿದೆ. ಕೊರೋನಾ ಸಮಯದಲ್ಲಿ ಸಾಕಷ್ಟು ನೆಗೆಟಿವ್ ಸುದ್ದಿಗಳೇ ಬಂದವು. ಆದರೆ ಕೊರೋನಾ ನೆಗೆಟಿವ್ ಆಗಿದ್ದರೆ ಸಂತಸ ಪಟ್ಟರೆ ಬದುಕಿನಲ್ಲಿ ಈ ಸಂದರ್ಭ ಅನೇಕ ಪಾಸಿಟಿವ್ ಸಂಗತಿಗಳು ನಡೆದಿದ್ದವು.ಇಡೀ ವರ್ಷ ಈ ಭಯಾನಕ ದಿನಗಳು ಮರೆತು ಹೋಗುವ ಈ ಸಂದರ್ಭ ಅದರ ದಾಖಲಾತಿ ಇಲ್ಲಿ ನಡೆದಿದೆ.
ಈ ಕೃತಿಯ ಮುಸ್ಸಂಜೆಯ ಹೊಂಗಿರಣ ವು ಜ.26 ರಂದು ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಎಂಬ ಗ್ರಾಮೀಣ ಭಾಗದಲ್ಲಿ ಬಿಡುಗಡೆಗೊಳ್ಳಲಿದೆ. ಸಾಹಿತಿ, ಚಿಂತಕ ಅರವಿಂದ ಚೊಕ್ಕಾಡಿ ಬಿಡುಗಡೆಗೊಳಿಸುವರು. ಈ ಸಂದರ್ಭ ವಿಧಾನಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ, ಬರಹಗಾರ ನಾ.ಕಾರಂತ ಪೆರಾಜೆ ಮೊದಲಾದವರು ಭಾಗವಹಿಸುವರು.
ಈ ಕಾರ್ಯಕ್ರಮದ ಬಳಿಕ ಗಾಂಧೀಜಿಯವರ ಮೌಲ್ಯಗಳ ಪ್ರಸ್ತುತತೆಯ ಬಗ್ಗೆ ಸಂವಾದ ಕಾರ್ಯಕ್ರಮ ನಡೆಯಲಿದೆ.ಸಾಹಿತಿ, ಚಿಂತಕ ಅರವಿಂದ ಚೊಕ್ಕಾಡಿ ಸಂವಾದ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ರಾಜ್ಯದ ಗ್ರಾಮ ಪಂಚಾಯತ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಿವು ಕೇಂದ್ರಗಳು ಜ್ಞಾನದ ಕೇಂದ್ರಗಳಾಗಿದ್ದು, ಸ್ಪರ್ಧಾತ್ಮಕ…
ಜಲಾನಯನ ಯಾತ್ರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸಲಿದ್ದು, ನೀರು ನಿರ್ವಹಣೆ ಬಗ್ಗೆ…
15 ರಾಜ್ಯಗಳಲ್ಲಿ 2 ಸಾವಿರದ 590 ಮೊಬೈಲ್ ಸಂಪರ್ಕರಹಿತ ಗ್ರಾಮಗಳನ್ನು ಗುರುತಿಸಲಾಗಿದೆ. ಈ…
ಗದಗ ಜಿಲ್ಲೆಯ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನ ಸುಮಾರು 33 ಸಾವಿರ ಹೆಕ್ಟೇರ್…
ಅಡಿಕೆಯಲ್ಲೂ ಟಿಶ್ಯೂ ಕಲ್ಚರ್ ತಂತ್ರಜ್ಞಾನದ ಅಳವಡಿಕೆ ಸಾಧ್ಯವೇ ಎಂಬ ಪ್ರಯತ್ನ ಸಾಕಷ್ಟು ಹಿಂದೆಯೇ…
ಅಡಿಕೆ ಆಮದು ಆಗುತ್ತಿರುವ ಹಿನ್ನಲೆ ನಮ್ಮ ಸ್ಥಳೀಯ ಅಡಿಕೆ ಬೆಳೆಗಾರರು ನ್ಯಾಯಸಮ್ಮತವಲ್ಲದ ದರ…