ಕಂಬಳಿ ಮಾರುವ ಸೋಗಿನಲ್ಲಿ ಬಂದ ಇಬ್ಬರು ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆಯೊಂದು ಕಡಬದ ಕಾಣಿಯೂರು ಸಮೀಪದ ದೋಳ್ಪಾಡಿ ಎಂಬಲ್ಲಿ ನಡೆದಿದೆ. ಇದೀಗ ಗ್ರಾಮೀಣ ಭಾಗದಲ್ಲಿ ಇಂತಹ ಮಾರಾಟ ಜಾಲಗಳು ವಿಸ್ತಾರವಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆಯ ಕಡೆಗೆ ಗಮನಹರಿಸಲಾಗುತ್ತಿದೆ.
ದೋಳ್ಪಾಡಿಯಲ್ಲಿ ಈ ಘಟನೆ ನಡೆದ ತಕ್ಷಣವೇ ಮಹಿಳೆ ಕಿರುಚಾಡಿಕೊಂಡಾಗ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಳಲಿಯ ಅಡ್ಡೂರು ನಿವಾಸಿಗಳಾದ ರಫೀಕ್ ಹಾಗೂ ರಮಿಯಾಸುದ್ದಿನ್ ಅಪಘಾತದಲ್ಲಿ ಗಾಯಗೊಂಡವರು. ಇವರ ವಿರುದ್ಧ ಅತ್ಯಾಚಾರಕ್ಕೆ ಯತ್ನಿಸಿದ ಬಗ್ಗೆ ಮಹಿಳೆ ದೂರು ನೀಡಿದ್ದು, ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಗೊಂಡ ಆರೋಪಿಗಳನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮನೆ ಮನೆಗೆ ಬಟ್ಟೆ, ಕಂಬಳಿ ಸೇರಿದಂತೆ ಇನ್ನಿತರ ವಸ್ತುಗಳ ಮಾರಾಟ ಮಾಡುವ ತಂಡಗಳು ಒಂಟಿ ಮನೆ ಹಾಗೂ ಒಬ್ಬಂಟಿ ಮಹಿಳೆಯರು ಇರುವ ಮನೆಯನ್ನು ಗುರುತಿಸಿಕೊಂಡು ಆಗಾಗ ಭೇಟಿ ನೀಡುತ್ತಾರೆ. ಸ್ವಲ್ಪ ಪರಿಚಯವಾದ ಬಳಿಕ ಮನೆ ದರೋಡೆ, ಅತ್ಯಾಚಾರ ಸೇರಿದಂತೆ ಕಳ್ಳತನವೂ ನಡೆಸುತ್ತಾರೆ , ಹೀಗಾಗಿ ಎಚ್ಚರಿಕೆ ಇರಬೇಕುನ ಎಂದು ಆಗಾಗ ಪೊಲೀಸ್ ಇಲಾಖೆ ಎಚ್ಚರಿಸುತ್ತದೆ. ಕೆಲವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲೆಹೊರೆ ಮೂಲಕ ಮಾರಾಟ ಮಾಡುವ ವಸ್ತುಗಳಿದ್ದರೆ ಪಂಚಾಯತ್ ವ್ಯಾಪ್ತಿಯಲ್ಲಿ ಮೊದಲೇ ನೋಂದಣಿ ಮಾಡಿ ಅನುಮತಿ ಪಡೆದು ಮನೆ ಮನೆಗೆ ತೆರಳಬೇಕು ಎಂದು ಕಟ್ಟು ನಿಟ್ಟಾದ ನಿಯಮ ಜಾರಿ ಮಾಡಿದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…