Advertisement
MIRROR FOCUS

ಗ್ರಾಮ ವಾಸ್ತವ್ಯಕ್ಕೆ ಬಂದ ಅಧಿಕಾರಿಗಳಿಗೆ ಬ್ಯಾನರ್‌ ಸ್ವಾಗತ…! | ಸುಳ್ಯದ ಪಂಬೆತ್ತಾಡಿ ಗ್ರಾಮದಲ್ಲಿ ರಸ್ತೆಯ ಬೇಡಿಕೆಗೆ 30 ವರ್ಷ…! |

Share

ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದಲ್ಲಿ ಶನಿವಾರ ಗ್ರಾಮ ವಾಸ್ತವ್ಯ ಆಯೋಜನೆಯಾಗಿತ್ತು. ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಸುಮಾರು 20 ಬ್ಯಾನರ್‌ ಸ್ವಾಗತ ಕೋರಿತ್ತು. ಇದೆಲ್ಲಾ ಬ್ಯಾನರ್‌ ಊರಿನ ಅಭಿವೃದ್ಧಿ ವೈಫಲ್ಯದ ಆಕ್ರೋಶವಾಗಿತ್ತು. ಜನರನ್ನು ತರಾಟೆಗೆ ತೆಗೆದುಕೊಂಡ ಅಧಿಕಾರಿಗಳು ಗ್ರಾಮ ವಾಸ್ತವ್ಯದ ನಡುವೆ ಊರಿಡೀ ಸುತ್ತಾಡಿ ಹೇಳಿದ್ದು,”ನಿಮ್ಮ ಆಕ್ರೋಶ ಅರ್ಥವಾಯಿತು”.

Advertisement
Advertisement
Advertisement

ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಪಂ ವ್ಯಾಪ್ತಿಯ ಪಂಬೆತ್ತಾಡಿ ಗ್ರಾಮದಲ್ಲಿ ಶನಿವಾರ ಅಧಿಕಾರಿಗಳ ಗ್ರಾಮ ವಾಸ್ತವ್ಯ ಆಯೋಜನೆಯಾಗಿತ್ತು. ಗ್ರಾಮದ ಸಮಸ್ಯೆಗಳು ಹಾಗೂ ಅಭಿವೃದ್ಧಿ ಬೇಡಿಕೆಯ ಮನವಿ ಪಡೆಯಲು ಬಂದ ಅಧಿಕಾರಿಗಳನ್ನು  ಜನರು ತರಾಟೆಗೆ ತೆಗೆದುಕೊಂಡರು. ಕಳೆದ ಸುಮಾರು 30 ವರ್ಷಗಳಿಂದ ಕರಿಕಳ-ಪಂಬೆತ್ತಾಡಿ-ಕಾಂತುಕುಮೇರಿ ರಸ್ತೆ ಅಭಿವೃದ್ಧಿಗಾಗಿ ಮನವಿ ಸಲ್ಲಿಸುತ್ತಲೇ ಇದ್ದರು. ಸುಮಾರು 7 ಬಾರಿ ಶಾಸಕರನ್ನು ಭೇಟಿಯಾಗಿದ್ದರು, ಬೆಂಗಳೂರಿಗೂ ತೆರಳಿದ್ದರು. ಕೊನೆಗೆ ಅಧಿಕಾರಿಗಳು ನೀಡಿದ ಹೇಳಿಕೆಯಿಂದ ಬೇಸತ್ತು ವಾಪಾಸ್‌ ಆಗಿದ್ದರು. ಇದೀಗ ಮತ್ತೆ ಗ್ರಾಮ ವಾಸ್ತವ್ಯದ ನೆಪದಲ್ಲಿ  ಜನರನ್ನು ಮಂಗ ಮಾಡುವುದು ಬೇಡ, ತಕ್ಷಣವೇ ರಸ್ತೆ ದುರಸ್ತಿ ಮಾಡಿ ಎಂಬುದು ಜನರು ಆಕ್ರೋಶವಾಗಿತ್ತು.

Advertisement

ಗ್ರಾಮ ವಾಸ್ತವ್ಯ ಸ್ಥಳದಲ್ಲಿ  ರೋಸಿ ಹೋಗಿದ್ದ ಜನರು ಸಹಜವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಬ್ಯಾನರ್‌ ತೆರವು ಮಾಡಲು ಸೂಚಿಸಿದ್ದರು. ಆದರೆ ಬ್ಯಾನರ್‌ ತೆರವು ಮಾಡಲು ಒಪ್ಪದ ಜನರು, ಇದು ನಮ್ಮ ಹಕ್ಕೊತ್ತಾಯ, ಈ ಬೇಡಿಕೆ ಪೂರೈಸಿ, 30 ವರ್ಷದಿಂದ ರಸ್ತೆ ದುರಸ್ತಿಯಾಗದೇ ಇರುವುದು  ಆಡಳಿತ ವೈಫಲ್ಯ ಎಂದೇ ಟೀಕಿಸಿದರು. ಕೊನೆಗೆ ಬ್ಯಾನರ್‌ ನಡುವೆಯೇ ಅಹವಾಲು ಸ್ವೀಕರಿಸಿದ ಅಧಿಕಾರಿಗಳನ್ನು ಊರಿನ ರಸ್ತೆ ವೀಕ್ಷಣೆಗೆ ಕರೆದೊಯ್ದರು. ರಸ್ತೆ ವೀಕ್ಷಣೆ ಬಳಿಕ ಅಧಿಕಾರಿಗಳು ಹೇಳಿದ್ದು,”ನಿಮ್ಮ ಆಕ್ರೋಶ ಅರ್ಥವಾಯಿತು” ಎಂದು.

Advertisement

ಮುಂದಿನ 15 ದಿನದಲ್ಲಿ ನಮಗೆ ಈ ಗ್ರಾಮ ವಾಸ್ತವ್ಯದ ಹಾಗೂ ರಸ್ತೆ ಸಮಸ್ಯೆ ಬಗ್ಗೆ ಪರಿಹಾರದ ಉತ್ತರಗಳು ಬೇಕು, ಇಲ್ಲದೇ ಇದ್ದರೆ ರಸ್ತೆ ತಡೆ, ಹೋರಾಟ ಕೊನೆಗೆ ಮತ ಬಹಿಷ್ಕಾರಕ್ಕೂ ಸಿದ್ಧ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.

Advertisement

ಇದೇ ಸಭೆಯಯಲ್ಲಿ ಜನರು ಪಂಬೆತ್ತಾಡಿ-ಕಾಂತುಕುಮೇರಿ ರಸ್ತೆಗಾಗಿ ಭಿಕ್ಷೆ ಎಂದು ಹುಂಡಿಯನ್ನು ರಚನೆ ಮಾಡಿದ್ದರು. ಈ ಮೂಲಕ ಆಕ್ರೋಶ ಹೊರಹಾಕಿದ್ದರು.

Advertisement

ಪಂಬೆತ್ತಾಡಿ-ಕಾಂತುಕುಮೇರಿ ರಸ್ತೆ ಗ್ರಾಮೀಣ ರಸ್ತೆಯಾಗಿದ್ದು ಬ್ರಿಟಿಷ್‌ ಸರ್ಕಾರ ಇರುವಾಗಲೇ ರಚನೆಯಾಗಿದ್ದ ರಸ್ತೆ ಇದಾಗಿತ್ತು. ಸುಮಾರು 30 ವರ್ಷಗಳ ಹಿಂದೆ ಡಾಮರು ಕಂಡ ರಸ್ತೆ ನಂತರ ಡಾಮರು ಕಾಣಲೇ ಇಲ್ಲ ಎಂದು ಗ್ರಾಮಸ್ಥರು ವಿಷಾದ ವ್ಯಕ್ತಪಡಿಸುತ್ತಾರೆ. ರಸ್ತೆಯ ಅಲ್ಲಲ್ಲಿ ಗ್ರಾಮ ಪಂಚಾಯತ್‌ ಮೂಲಕ ಕಾಂಕ್ರೀಟ್‌ ರಸ್ತೆ ಮಾಡಲಾಗಿದೆ. ಆದರೆ ಇಲಾಖೆಗಳಿಂದ , ಶಾಸಕರ, ಸಂಸದರ ಅನುದಾನಗಳು ಇದುವರೆಗೂ ಲಭ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸುತ್ತಾರೆ. 6 ಕಿಮೀ ರಸ್ತೆಗೆ 40೦ ಮೀಟರ್‌ ಕಾಂಕ್ರೀಟೀಕರಣ ಮಾಡುವ ಬಗ್ಗೆ ಈಗ ಭರವಸೆ ವ್ಯಕ್ತವಾಗುತ್ತಿದೆ, ಉಳಿದ ಕಡೆ ಜನರು ಓಡಾಟ ನಡೆಸುವುದು ಹೇಗೆ ಎನ್ನುವುದು  ಜನರ ಪ್ರಶ್ನೆ.

Advertisement

ಈಗಾಗಲೇ ರಸ್ತೆ ದುರಸ್ತಿಗಾಗಿ ಪರದಾಟ ಮಾಡಿದ ಜನರು ತಾವೇ ಹಣ ಸಂಗ್ರಹಿಸಿ ಸುಮಾರು 70 ಸಾವಿರ ರೂಪಾಯಿ ವೆಚ್ಚದಲ್ಲಿ ರಸ್ತೆ ದುರಸ್ತಿ ಮಾಡಿದ್ದಾರೆ. ಇಲಾಖೆಗಳು, ಜನಪ್ರತಿನಿಧಿಗಳು ಆದರೂ ಗಮನಹರಿಸುತ್ತಿಲ್ಲ ಎನ್ನುವುದು ಮತ್ತಷ್ಟು  ಆಕ್ರೋಶಕ್ಕೆ ಕಾರಣವಾಗಿದೆ.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

25 ವರ್ಷಗಳ ಹಿಂದೆ ಹೋದ ದೃಷ್ಟಿ ವಾಪಸು ಬಂತು

ಚಿಕ್ಕ ವಯಸ್ಸಿನ ಕುಕನೂರಿನ ಶಿವಾನಂದ ಕ್ರಿಕೆಟ್ ಫೀಲ್ಡಿಂಗ್ ಮಾಡುತ್ತಿದ್ದ. ಚಂಡು ಕಳ್ಳಿಯ ಪೊದೆಯಲ್ಲಿ…

6 hours ago

ಗೇರುಹಣ್ಣಿನ ಮೌಲ್ಯವರ್ಧನೆ : ಕೇರಳ ಕೃಷಿ ವಿವಿ ಸಾಧನೆ

ಬಹುತೇಕ ಕೊಳೆತು ಮಣ್ಣುಪಾಲಾಗುವ ಗೇರುಹಣ್ಣಿಗೂ(Cashew fruit)  ಮೌಲ್ಯವಿದೆ. ಆದರೆ ಮೌಲ್ಯವರ್ಧನೆ(Value addition) ಮಾಡಿದಾಗ ಮಾತ್ರ!…

7 hours ago

ನಿಮಗೆ ಗೊತ್ತೇ ???? ಬಿದಿರಿನ ಬಗೆಗಿನ ಕೆಲವು ಆಸಕ್ತಿದಾಯಕ ಸಂಗತಿಗಳು

ಬಿದಿರು(Bamboo) ನಾನಾರಿಗಲ್ಲದವಳು ಎಂಬ ಸಂತ ಶಿಶುನಾಳ ಶರೀಪರ(Shishunala Sharifa) ಹಾಡನ್ನು ನೀವು ಕೇಳಿರುತ್ತೀರಿ.…

7 hours ago

ಮೊಬೈಲ್ ಫೋನ್ ಅನ್ನು ನಿಮ್ಮ ದಿಂಬಿನ ಪಕ್ಕದಲ್ಲಿ ಇಟ್ಟುಕೊಂಡು ಮಲಗತ್ತೀರಾ..? ಈ ಸಮಸ್ಯೆಗಳನ್ನು ಎದುರಿಸಲು ಸಿದ್ಧರಾಗಿ…..!

ಇಂದು ಮೊಬೈಲ್ ಫೋನ್(Mobile Phone) ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಫೋನ್ ಅನ್ನು…

8 hours ago

ರಾಜ್ಯಾದ್ಯಂತ ಬಿರು ಬಿಸಿಲಿನ ಪರಿಣಾಮ : ಗಗನಕ್ಕೇರಿದ ಹಸಿ ಮೆಣಸಿನಕಾಯಿ ದರ : ಗ್ರಾಹಕರಿಗೆ ಜೋರಾದ ಖಾರದ ಅನುಭವ

ಕಳೆದ ಬಾರಿ ಕೆಂಪು ಮೆಣಸಿನಕಾಯಿ(Red chilli) ಬೆಲೆ(Price hike) ಗಗನಕ್ಕೇರಿತ್ತು. ಈ ಬಾರಿ…

8 hours ago

Karnataka Weather |11-05-2024 | ಹಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ |

ಈಗಿನ ಪ್ರಕಾರ ಮುಂದಿನ 10 ದಿನಗಳವರೆಗೂ ರಾಜ್ಯದ ಅಲ್ಲಲ್ಲಿ ಮಳೆ ಮುಂದುವರಿಯುವ ಲಕ್ಷಣಗಳಿವೆ.

11 hours ago