ಗ್ರಾಮೀಣ ಭಾಗದ ವಿದ್ಯಾರ್ಥಿನಿಯ ಸಾಧನೆ | ರಾಷ್ಟ್ರೀಯ ಮಟ್ಟದ ಗೇಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸವಿತಾ |

March 18, 2022
10:13 AM

 ಐಐಟಿ ಖರಗಪುರ ನಡೆಸಿದ 2022ರ ಸಾಲಿನ ರಾಷ್ಟ್ರೀಯ ಅರ್ಹತಾ ಪರೀಕ್ಷೆ -ಗೇಟ್ ನಲ್ಲಿ ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ಸ್ನಾತಕೋತ್ತರ ವಿಭಾಗದ ದ್ವಿತೀಯ ವರ್ಷದ ಗ್ರಾಮೀಣ ಭಾಗದ ವಿದ್ಯಾರ್ಥಿನಿ ಸವಿತಾ ಎಂ. ಎಸ್. ರಾಷ್ಟ್ರಮಟ್ಟದಲ್ಲಿ ಉತ್ತಮ ರಾಂಕ್‌ ನೊಂದಿಗೆ ಉತ್ತೀರ್ಣರಾಗಿದ್ದಾರೆ. ಈ ಮೂಲಕ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸಂಶೋಧನಾ ಸಂಸ್ಥೆಗಳಲ್ಲಿ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಫೆಲೋಶಿಪ್‍ನೊಂದಿಗೆ ಸಂಶೋಧನಾರ್ಥಿಯಾಗಿ ಸೇರಲು ಅರ್ಹತೆ ಪಡೆದಿದ್ದಾರೆ.

ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ಇವರು ಈಗಾಗಲೇ ಇಸ್ರೋ (ಐ.ಎ..ಎಸ್ ಬೆಂಗಳೂರು ಪ್ರಾಯೋಜಿತ), ಐ.ಐ.ಎಸ್.ಎಸ್‍ ತಿರುವನಂತಪುರಂ, ಐ.ಐ.ಎ ಬೆಂಗಳೂರು ಮೊದಲಾದೆಡೆ ಸಮ್ಮರ್  ರಿಸರ್ಚ್ ಫೆಲೋಶಿಪ್‍ಗೆ ಆಯ್ಕೆಗೊಂಡು ಕಿರು ಸಂಶೋಧನೆಗಳನ್ನು ಯಶಸ್ವಿಯಾಗಿ ಪೂರೈಸಿರುತ್ತಾರೆ.

ಇವರ ಈ ಸಾಧನೆಗೆ ಕಾಲೇಜಿನ ಸಂಚಾಲಕರಾದ  ಲಾರೆನ್ಸ್ ಮಸ್ಕರೇನ್ಹಸ್, ಪ್ರಾಂಶುಪಾಲರಾದ ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಹಾಗೂ ವಿಭಾಗದ ಸಂಯೋಜಕ ಡಾ.ಇ ದೀಪಕ್ ಡಿಸಿಲ್ವ ಅಭಿನಂದಿಸಿದ್ದಾರೆ.

ಕಾಸರಗೋಡು ಜಿಲ್ಲೆಯ ದೇಲಂಪಾಡಿಯ ಶಿವಪ್ಪ ಗೌಡ ಮತ್ತುಯಮುನಾ ದಂಪತಿಗಳ ಪುತ್ರಿಯಾಗಿರುವ ಇವರು, ಹೈಸ್ಕೂಲ್ ವಿದ್ಯಾಭ್ಯಾಸವನ್ನು ಸರಕಾರಿ ಪ್ರೌಢಶಾಲೆ ದೇಲಂಪಾಡಿ, ಪಿಯುಸಿಯನ್ನು ಸರಕಾರಿ ಪದವಿಪೂರ್ವ ಕಾಲೇಜು ಪುತ್ತೂರು ಹಾಗೂ ಬಿ.ಎಸ್ಸಿ. ಪದವಿಯನ್ನು ಸಂತ ಫಿಲೋಮಿನಾ ಕಾಲೇಜಿನಲ್ಲಿಉತ್ತಮ ಶ್ರೇಣಿಯಲ್ಲಿಪಡೆದಿರುತ್ತಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಳ್ಳಿಗಳನ್ನು ಪರಿವರ್ತಿಸಲು ಹಸುವಿನ ಸಗಣಿ – ಗೋಮಯದಿಂದ ಗ್ರಾಮಗಳ ಆರ್ಥಿಕ ಕ್ರಾಂತಿ..!
July 8, 2026
8:51 PM
by: ದ ರೂರಲ್ ಮಿರರ್.ಕಾಂ
ಕಾಫಿ ಬೆಲೆ ಗರಿಗೆದರಿಕೆ- ಬ್ರೆಜಿಲ್‌ನಲ್ಲಿ ನಿರಂತರ ಮಳೆಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಏರಿಕೆ
July 8, 2026
4:18 PM
by: ಮಿರರ್‌ ಡೆಸ್ಕ್‌
ಹವಾಮಾನ ವರದಿ | 08-07-2026 | ಕರ್ನಾಟಕದಲ್ಲಿ ಮಳೆ ಇಳಿಮುಖ – ರೈತರಿಗೆ ಮಹತ್ವದ ಹವಾಮಾನ ಮಾಹಿತಿ..!
July 8, 2026
1:24 PM
by: ಸಾಯಿಶೇಖರ್ ಕರಿಕಳ
E20 ಪೆಟ್ರೋಲ್‌ : ದೇಶದ ಹಿತದ ಹೆಸರಿನಲ್ಲಿ ಸಾಮಾನ್ಯರ ಹೆಗಲಿನ ಮೇಲೆ ಹೆಚ್ಚು”ವರಿ”ಯೇ?
July 8, 2026
12:42 PM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror