Women’s Day | ಗ್ರಾಮೀಣ ಭಾಗದ ಸ್ವಾಭಿಮಾನಿ ಮಹಿಳೆ | 2 ಎಕೆರೆ ಜಮೀನಿನಲ್ಲಿ ಸಮಗ್ರ ಕೃಷಿ |

March 8, 2024
10:43 AM
ಗ್ರಾಮೀಣ ಭಾಗದಲ್ಲಿ ಅನೇಕ ಸಾಧಕ ಮಹಿಳೆಯರು ಇದ್ದಾರೆ. ಅನೇಕ ಮಹಿಳೆಯರಿಗೆ ಶ್ರಮ ಎನ್ನುವುದು ಅವರ ಬದುಕಿನ ಭಾಗವೂ ಆಗಿರುತ್ತದೆ. ಅದೇ ಸಾಧನೆಯಾಗಿಯೂ ಬೆಳೆದಿರುತ್ತದೆ. ಗುರುತಿಸುವ ಮನಸ್ಸುಗಳು, ಕಣ್ಣುಗಳು ಸಾಕಷ್ಟು ಇರಬೇಕಾಗಿದೆ.

ಗ್ರಾಮೀಣ ಭಾಗದಲ್ಲಿ ಅನೇಕ ಮಹಿಳೆಯರು ಹಲವಾರು ಸಂಕಷ್ಟಗಳ ನಡುವೆಯೂ ಸ್ವಾಭಿಮಾನಿಯಾಗಿ ಬದುಕುತ್ತಾರೆ. ಮನೆ ನಿರ್ವಹಣೆ, ಆರ್ಥಿಕ ನಿರ್ವಹಣೆ , ಕೃಷಿ ನಿರ್ವಹಣೆ ಇದೆಲ್ಲವೂ ಮಹಿಳೆಯೇ ನಿರ್ವಹಿಸಬೇಕಾದ ಸಂದರ್ಭ ಇರುತ್ತದೆ. ರೈತ ಹೇಗೆ ದೇಶದ ಬೆನ್ನೆಲುಬಾಗಿದ್ದಾನೆಯೋ, ಮಹಿಳೆ ಪ್ರತೀ ಕುಟುಂಬದ ಬೆನ್ನೆಲುಬೂ ಹೌದು. ಅಂತಹ ಮಾದರಿ ಮಹಿಳೆಯೊಬ್ಬರು ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಗಿರಿಜ.

Advertisement
ಗಿರಿಜ

ಅಜ್ಜಾವರದ ಮಹಿಳೆ ಗಿರಿಜ. ಸಮಾಜದ ವ್ಯವಸ್ಥೆಯಲ್ಲಿ ಹಿಂದುಳಿದ ವರ್ಗ ಮಹಿಳೆ ಎಂದು ಕರೆಯಲ್ಪಡುವ ಕುಟುಂಬ ಇದು. ಆದರೆ ಸ್ವಾಭಿಮಾನದ ಬದುಕಿನಲ್ಲಿ ಎಲ್ಲರೊಂದಿಗೆ ನಿಲ್ಲುವ ಮಹಿಳೆ ಗಿರಿಜ. ತನ್ನ ಎರಡು ಎಕ್ರೆ ಜಮೀನಿನಲ್ಲಿ ಅಡಿಕೆ, ಕಾಳುಮೆಣಸು, ಕೊಕೋ, ಗೇರು, ಬಾಳೆ, ತೆಂಗು ಸಹಿತ ಸಮಗ್ರ ಕೃಷಿಯನ್ನು ಮಾಡುತ್ತಿದ್ದಾರೆ. ಕಳೆದ ವರ್ಷ ಇವರ ಪತಿ ತೀರಿಕೊಂಡ ನಂತರ ಇಡೀ ಕುಟುಂಬದ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದಾರೆ. ಮಗನಿಗೆ ಸಮೀಪದಲ್ಲಿಯೇ ಆಸ್ತಿ ನೀಡಿದ್ದಾರೆ, ವಿಧವೆ ಮಹಿಳೆ ಹಾಗೂ ಅವರ ಮಕ್ಕಳ ಜೊತೆಗೆ ಇಡೀ ಕುಟುಂಬ ನಿರ್ವಗಣೆ ಮಾಡುತ್ತಿದ್ದಾರೆ. ಕಾಳುಮೆಣಸು ಕೃಷಿ ಅನೇಕ ವರ್ಷಗಳಿಂದಲೂ ಇದೆ. ಈ ಕಾಳುಮೆಣಸು ಇವರ ಬದುಕಿನ ಕೈ ಹಿಡಿದಿದೆ. ಆರ್ಥಿಕವಾದ ಆದಾಯಕ್ಕೂ ಕಾರಣವಾಗಿದೆ. ಕೃಷಿ ಸಾಲ ಹೊರತುಪಡಿಸಿ ಇತರ ಯಾವುದೇ ಸಾಲ ಇಲ್ಲದೆ ಯಶಸ್ವಿ ಬದುಕನ್ನು ನಡೆಸುತ್ತಿದ್ದಾರೆ ಗಿರಿಜ.

ಕಳೆದ ವರ್ಷದವರೆಗೆ ಎರಡು-ಮೂರು ದನಗಳನ್ನು ಸಾಕಿ ಡೈರಿಗೆ ಹಾಲನ್ನೂ ಹಾಕುತ್ತಿದ್ದ ಗಿರಿಜ, ಬೆಳಗಿನಿಂದ ಇಡೀ ಕೆಲಸ ಮಾಡಿ, ಪಶುಪಾಲನೆ ಮಾಡಿ ಬಳಿಕ ದುಡಿಮೆಗೂ ತೆರಳುತ್ತಿದ್ದ ಗಿರಿಜ ಸಂಜೆ ಮನೆಗೆ ಬಂದು ತೋಟದ ಕೆಲಸವನ್ನೂ ಮಾಡುತ್ತಿದ್ದರು. ಇದೀಗ ಪತಿ ತೀರಿಕೊಂಡ ಬಳಿಕ ಹೈನುಗಾರಿಕೆಗೆ ವಿರಾಮ ನೀಡಿದ್ದಾರೆ. ತೋಟದ ಕೆಲಸವನ್ನು ಮುಂದುವರಿಸಿದ್ದರು, ಗಿರಿಜ ಅವರ ಮಕ್ಕಳೂ ಕೃಷಿಗೆ ಸಾತ್‌  ನೀಡುತ್ತಿದ್ದಾರೆ. ಕಾಳುಮೆಣಸು ಕೊಯ್ಯಲು ಬೇರೆಯವರನ್ನೂ ಕೂಡಾ ಕಾರ್ಮಿಕರಾಗಿ ಕರೆಯುತ್ತಾರೆ. ಸದ್ಯ ವರ್ಷಕ್ಕೆ ಎರಡು ಕ್ವಿಂಟಾಲ್‌ ಕಾಳುಮೆಣಸು ಆಗುತ್ತಿದೆ. ಸಹಜ , ಸಾವಯವ ಮಾದರಿಯ ಕೃಷಿಯನ್ನೇ ಮುಂದುವರಿಸುತ್ತಿದ್ದಾರೆ ಗಿರಿಜ.

ಮಹಿಳಾ ದಿನಾಚರಣೆಯಂದು ಸಾವಿರಾರು ಮಹಿಳೆಯರನ್ನು ಗುರುತಿಸುವ ವೇಳೆ ಸ್ವಾಭಿಮಾನಿಯಾಗಿ ಬೆಳೆದ ಗ್ರಾಮೀಣ ಭಾಗದ ಸಾವಿರಾರು ಮಹಿಳೆಯರ ಶ್ರಮವನ್ನು ನೆನಪಿಸಿಕೊಳ್ಳುತ್ತಾ ದ ರೂರಲ್‌ ಮಿರರ್‌.ಕಾಂ ಗಿರಿಜ ಅವರ ಪರಿಚಯ ಮಾಡಿದೆ.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಭದ್ರ ಜಲಾಶಯದಿಂದ ತುಂಗಭದ್ರಾ ನದಿಗೆ 8 ಸಾವಿರ ಕ್ಯೂಸೆಕ್ ನೀರು | ನದಿಪಾತ್ರದ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ
April 1, 2025
9:38 PM
by: The Rural Mirror ಸುದ್ದಿಜಾಲ
ಮನ್ರೇಗಾ ಕೂಲಿ ದರ ದಿನಕ್ಕೆ 370 ರೂಪಾಯಿಗೆ ಏರಿಕೆ
April 1, 2025
9:28 PM
by: The Rural Mirror ಸುದ್ದಿಜಾಲ
ನಾಳೆಯಿಂದ ರಾಜ್ಯದ ಹಲವೆಡೆ ಮಳೆ | ಹವಾಮಾನ ಇಲಾಖೆ ಎಚ್ಚರಿಕೆ |
April 1, 2025
8:46 PM
by: The Rural Mirror ಸುದ್ದಿಜಾಲ
15 ದಶಲಕ್ಷ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ತಪಾಸಣೆ | 200 ಡೇ-ಕೇರ್ ಕ್ಯಾನ್ಸರ್ ಕೇಂದ್ರ ಸ್ಥಾಪನೆ
April 1, 2025
8:20 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group