ಗ್ರಾಮೀಣ ಭಾಗದಲ್ಲಿ ಅನೇಕ ಮಹಿಳೆಯರು ಹಲವಾರು ಸಂಕಷ್ಟಗಳ ನಡುವೆಯೂ ಸ್ವಾಭಿಮಾನಿಯಾಗಿ ಬದುಕುತ್ತಾರೆ. ಮನೆ ನಿರ್ವಹಣೆ, ಆರ್ಥಿಕ ನಿರ್ವಹಣೆ , ಕೃಷಿ ನಿರ್ವಹಣೆ ಇದೆಲ್ಲವೂ ಮಹಿಳೆಯೇ ನಿರ್ವಹಿಸಬೇಕಾದ ಸಂದರ್ಭ ಇರುತ್ತದೆ. ರೈತ ಹೇಗೆ ದೇಶದ ಬೆನ್ನೆಲುಬಾಗಿದ್ದಾನೆಯೋ, ಮಹಿಳೆ ಪ್ರತೀ ಕುಟುಂಬದ ಬೆನ್ನೆಲುಬೂ ಹೌದು. ಅಂತಹ ಮಾದರಿ ಮಹಿಳೆಯೊಬ್ಬರು ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಗಿರಿಜ.
ಅಜ್ಜಾವರದ ಮಹಿಳೆ ಗಿರಿಜ. ಸಮಾಜದ ವ್ಯವಸ್ಥೆಯಲ್ಲಿ ಹಿಂದುಳಿದ ವರ್ಗ ಮಹಿಳೆ ಎಂದು ಕರೆಯಲ್ಪಡುವ ಕುಟುಂಬ ಇದು. ಆದರೆ ಸ್ವಾಭಿಮಾನದ ಬದುಕಿನಲ್ಲಿ ಎಲ್ಲರೊಂದಿಗೆ ನಿಲ್ಲುವ ಮಹಿಳೆ ಗಿರಿಜ. ತನ್ನ ಎರಡು ಎಕ್ರೆ ಜಮೀನಿನಲ್ಲಿ ಅಡಿಕೆ, ಕಾಳುಮೆಣಸು, ಕೊಕೋ, ಗೇರು, ಬಾಳೆ, ತೆಂಗು ಸಹಿತ ಸಮಗ್ರ ಕೃಷಿಯನ್ನು ಮಾಡುತ್ತಿದ್ದಾರೆ. ಕಳೆದ ವರ್ಷ ಇವರ ಪತಿ ತೀರಿಕೊಂಡ ನಂತರ ಇಡೀ ಕುಟುಂಬದ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದಾರೆ. ಮಗನಿಗೆ ಸಮೀಪದಲ್ಲಿಯೇ ಆಸ್ತಿ ನೀಡಿದ್ದಾರೆ, ವಿಧವೆ ಮಹಿಳೆ ಹಾಗೂ ಅವರ ಮಕ್ಕಳ ಜೊತೆಗೆ ಇಡೀ ಕುಟುಂಬ ನಿರ್ವಗಣೆ ಮಾಡುತ್ತಿದ್ದಾರೆ. ಕಾಳುಮೆಣಸು ಕೃಷಿ ಅನೇಕ ವರ್ಷಗಳಿಂದಲೂ ಇದೆ. ಈ ಕಾಳುಮೆಣಸು ಇವರ ಬದುಕಿನ ಕೈ ಹಿಡಿದಿದೆ. ಆರ್ಥಿಕವಾದ ಆದಾಯಕ್ಕೂ ಕಾರಣವಾಗಿದೆ. ಕೃಷಿ ಸಾಲ ಹೊರತುಪಡಿಸಿ ಇತರ ಯಾವುದೇ ಸಾಲ ಇಲ್ಲದೆ ಯಶಸ್ವಿ ಬದುಕನ್ನು ನಡೆಸುತ್ತಿದ್ದಾರೆ ಗಿರಿಜ.
ಕಳೆದ ವರ್ಷದವರೆಗೆ ಎರಡು-ಮೂರು ದನಗಳನ್ನು ಸಾಕಿ ಡೈರಿಗೆ ಹಾಲನ್ನೂ ಹಾಕುತ್ತಿದ್ದ ಗಿರಿಜ, ಬೆಳಗಿನಿಂದ ಇಡೀ ಕೆಲಸ ಮಾಡಿ, ಪಶುಪಾಲನೆ ಮಾಡಿ ಬಳಿಕ ದುಡಿಮೆಗೂ ತೆರಳುತ್ತಿದ್ದ ಗಿರಿಜ ಸಂಜೆ ಮನೆಗೆ ಬಂದು ತೋಟದ ಕೆಲಸವನ್ನೂ ಮಾಡುತ್ತಿದ್ದರು. ಇದೀಗ ಪತಿ ತೀರಿಕೊಂಡ ಬಳಿಕ ಹೈನುಗಾರಿಕೆಗೆ ವಿರಾಮ ನೀಡಿದ್ದಾರೆ. ತೋಟದ ಕೆಲಸವನ್ನು ಮುಂದುವರಿಸಿದ್ದರು, ಗಿರಿಜ ಅವರ ಮಕ್ಕಳೂ ಕೃಷಿಗೆ ಸಾತ್ ನೀಡುತ್ತಿದ್ದಾರೆ. ಕಾಳುಮೆಣಸು ಕೊಯ್ಯಲು ಬೇರೆಯವರನ್ನೂ ಕೂಡಾ ಕಾರ್ಮಿಕರಾಗಿ ಕರೆಯುತ್ತಾರೆ. ಸದ್ಯ ವರ್ಷಕ್ಕೆ ಎರಡು ಕ್ವಿಂಟಾಲ್ ಕಾಳುಮೆಣಸು ಆಗುತ್ತಿದೆ. ಸಹಜ , ಸಾವಯವ ಮಾದರಿಯ ಕೃಷಿಯನ್ನೇ ಮುಂದುವರಿಸುತ್ತಿದ್ದಾರೆ ಗಿರಿಜ.
ಮಹಿಳಾ ದಿನಾಚರಣೆಯಂದು ಸಾವಿರಾರು ಮಹಿಳೆಯರನ್ನು ಗುರುತಿಸುವ ವೇಳೆ ಸ್ವಾಭಿಮಾನಿಯಾಗಿ ಬೆಳೆದ ಗ್ರಾಮೀಣ ಭಾಗದ ಸಾವಿರಾರು ಮಹಿಳೆಯರ ಶ್ರಮವನ್ನು ನೆನಪಿಸಿಕೊಳ್ಳುತ್ತಾ ದ ರೂರಲ್ ಮಿರರ್.ಕಾಂ ಗಿರಿಜ ಅವರ ಪರಿಚಯ ಮಾಡಿದೆ.
ಅಡಿಕೆ ತೋಟಗಳಲ್ಲಿ ಹೂಗೊಂಚಲುಗಳು ಅರಳಿದರೂ ಕಾಯಿ ಕಟ್ಟದಿರುವುದಕ್ಕೆ ರೈತರು ಬಳಸುವ ಬೇವಿನ ಎಣ್ಣೆಯೇ…
ಕಳಪೆ ಗುಣಮಟ್ಟದ ಅಡಿಕೆ ಸಾಗಣೆ ಪ್ರಕರಣ ಪತ್ತೆಯಾಗಿದ್ದು, ಆಹಾರ ಸುರಕ್ಷತೆ ಮತ್ತು ಮಾನದಂಡಗಳ…
ಕಾಸರಗೋಡು CPCRI ತನ್ನ 110ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜನರೇಷನ್ Z ಗಾಗಿ…
ಮಹಿಳಾ ಉದ್ಯಮಶೀಲತೆ, ತೆಂಗು ಮೌಲ್ಯವರ್ಧನೆ ಹಾಗೂ ರೈತರ ಆದಾಯ ವೃದ್ಧಿಯಲ್ಲಿ ತೆಂಗು ಅಭಿವೃದ್ಧಿ…
ತೆಂಗಿನಕಾಯಿ ಬೆಲೆ ಇಳಿಕೆ ಆತಂಕ ಹೆಚ್ಚಾಗಿದೆ. ಉತ್ಪಾದನೆ ಏರಿಕೆ ನಡುವೆಯೇ ರಫ್ತು ಮತ್ತು…
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾನ್ ಅವರು…