Advertisement
MIRROR FOCUS

#ruralmirror | ಕೊಲ್ಲಮೊಗ್ರ-ಕಲ್ಮಕಾರಿನಲ್ಲಿ ಪ್ರವಾಹದ ಸ್ಥಿತಿ | ಸೇವಾ ಕಾರ್ಯದಲ್ಲಿ ಯುವಕರ ತಂಡ |

Share

ಕಳೆದ ಮೂರು ದಿನಗಳಿಂದ ಕಲ್ಮಕಾರು – ಕೊಲ್ಲಮೊಗ್ರ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಪ್ರವಾಹದ ಸ್ಥಿತಿ ನಿರ್ಮಾಣವಾಗುತ್ತಿದೆ. ಸಂಜೆ ವೇಳೆಯೇ ಭಾರೀ ಮಳೆಯಾಗುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಕೊಲ್ಲಮೊಗ್ರ-ಕಲ್ಮಕಾರಿನಲ್ಲಿ ಯುವಕರ ತಂಡವೊಂದು ರಾತ್ರಿ ಇಡೀ ಜಾಗರಣೆ ಮಾಡಿ ಊರಿನ ಮಂದಿಗೆ ನೆರವು ನೀಡುತ್ತಿದ್ದಾರೆ, ನೆರೆಯ ಮಾಹಿತಿ ನೀಡುತ್ತಿದ್ದಾರೆ, ತಕ್ಷಣಕ್ಕೆ ನೆರವು ನೀಡುತ್ತಿದ್ದಾರೆ. ಇಲಾಖೆಗಳು, ಸರ್ಕಾರದ ಜೊತೆ ಕೈಜೋಡಿಸುತ್ತಿದ್ದಾರೆ. ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

Advertisement
Advertisement

ಪಶ್ಚಿಮಘಟ್ಟದ ತಪ್ಪಲು ಪ್ರದೇಶ ಹಾಗೂ ಪಶ್ಚಿಮ ಘಟ್ಟದ ಸಾಲಿನಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆಯಾಗುತ್ತಲೇ ಇದೆ. ಅದರಲ್ಲೂ ಸುಳ್ಯ ತಾಲೂಕಿನ ಕಲ್ಮಕಾರು, ಕೊಲ್ಲಮೊಗ್ರ, ಬಾಳುಗೋಡು, ಸಂಪಾಜೆ, ಚೆಂಬು ಅರಂತೋಡು, ತೊಡಿಕಾನ ಪ್ರದೇಶದ ಅರಣ್ಯ ಪ್ರದೇಶ ಹಾಗೂ ಅದರ ತಪ್ಪಲು ಭಾಗದಲ್ಲಿ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮಧ್ಯಾಹ್ನದವರೆಗೂ ಮಳೆ ಕಡಿಮೆಯಾಗಿ ಸಂಜೆಯಾಗುತ್ತಲೇ ಭಾರೀ ಮಳೆ ಸುರಿಯುತ್ತದೆ. ಒಮ್ಮೆಲೇ ಸುರಿಯುವ ಮಳೆಗೆ ಜನರು ತತ್ತರವಾಗುತ್ತಿದ್ದಾರೆ. ಮಳೆಯ ಜೊತೆಗೇ ಪ್ರವಾಹವೂ ಏರುವುದರಿಂದ ಹೊಳೆಯಲ್ಲಿ ನೀರು ಉಕ್ಕಿ ಹರಿಯುತ್ತದೆ. ಇಂತಹ ಸಮಯದಲ್ಲಿ ಗ್ರಾಮೀಣ ಭಾಗದಲ್ಲಿ ಜನರು ದಿಕ್ಕು ತೋಚದಂತಾಗುತ್ತದೆ. ಇಲಾಖೆಗಳು, ಸರ್ಕಾರಗಳಿಗೂ, ಆಡಳಿತಕ್ಕೂ ನಡುರಾತ್ರಿಯಲ್ಲಿ ಯಾವುದೇ ನೆರವು ನೀಡಲೂ ಕಷ್ಟವಾಗುತ್ತದೆ. ಇಂತಹ ಸಮಯದಲ್ಲಿ ಸ್ಥಳೀಯರ ಯುವಕರ ತಂಡ ತಕ್ಷಣ ನೆರವಿಗೆ ಧಾವಿಸುತ್ತಾರೆ. ಸೇವಾ ಮನೋಭಾವದ ಯುವಕರ ತಂಡವೇ ಈಗ ಗ್ರಾಮಗಳಲ್ಲಿ ಆಸರೆ ಹಾಗೂ ಹೆಚ್ಚು ಶಕ್ತಿ ನೀಡಿವೆ.

Advertisement

ಕಲ್ಮಕಾರು , ಕೊಲ್ಲಮೊಗ್ರದಲ್ಲಿ ಇಂತಹ ಯುವಕ ತಂಡ ಕಳೆದ ಮೂರು ದಿನಗಳಿಂದ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಎರಡು ದಿನಗಳ ಹಿಂದೆ ಕ್ರೇನ್‌ ಆಪರೇಟರ್‌ ರಕ್ಷಣೆ ಮಾಡಲು ಮೂಲಕ ಸುದ್ದಿಯಾದ ಗ್ರಾಮೀಣ ಭಾಗವು ಇದೀಗ ಸೇವಾ ಕಾರ್ಯದ ಮೂಲಕವೂ ಗುರುತಿಸಿಕೊಂಡಿದೆ. ಕೊಲ್ಲಮೊಗ್ರದಲ್ಲಿ ಸಾಮಾಜಿಕ ಕಾರ್ಯಕರ್ತ ಉದಯ ಶಿವಾಲ ಹಾಗೂ ಅವರ ನೇತೃತ್ವದ ತಂಡ ರಾತ್ರಿ ಇಡೀ ಗ್ರಾಮೀಣ ಭಾಗದಲ್ಲಿ ತಕ್ಷಣದ ನೆರವು ನೀಡುತ್ತಿದ್ದಾರೆ. ಕೊಲ್ಲಮೊಗ್ರ  ಗ್ರಾಪಂ ಅಧ್ಯಕ್ಷ ಉದಯ ಕುಮಾರ್‌ ಕೊಪ್ಪಡ್ಕ ಹಾಗೂ ಕೊಲ್ಲಮೊಗ್ರ ಪಿ ಡಿ ಒ ಕಳೆದ ಮೂರು ದಿನಗಳಿಂದ ಗ್ರಾಮದ ವಿವಿಧ ಕಡೆಗಳಲ್ಲಿ ಸುತ್ತಾಡುತ್ತಲೇ ಇದ್ದಾರೆ. ಅಗತ್ಯ ನೆರವು ಬೇಕಾದಲ್ಲಿಗೆ ತಾವೇ ಸ್ವತ: ಹೋಗಿ ಸಹಕಾರ ನೀಡುತ್ತಿದ್ದಾರೆ. ಯುವಕರ ತಂಡದಲ್ಲಿ  ಕೊಲ್ಲಮೊಗ್ರದ ರವಿಚಂದ್ರ, ಚಲನ್‌ ಕೊಪ್ಪಡ್ಕ, ಕೇಶವ ಅಂಬೆಕಲ್ಲು, ಹೇಮಂತ್‌ ಗೋಳ್ಯಾಡಿ,ಗಂಗಾಧರ ಮಿತ್ತೋಡಿ, ಶಶಿ ತೋಟದಮಜಲು, ಜಗದೀಶ ಅಂಬೆಕಲ್ಲು ಸೇರಿದಂತೆ ಇನ್ನೂ ಹಲವು ಯುವಕರು ತಂಡದಲ್ಲಿದ್ದಾರೆ. ಸಂಜೆಯಿಂದ ಗ್ರಾಮದ ಜನರಿಗೆ ಅಗತ್ಯ ನೆರವುಗಳ ಕಡೆಗೆ ಗಮನಹರಿಸುವ ಯುವಕರ ತಂಡ ಎಲ್ಲಾ ರೀತಿಯ ನೆರವನ್ನು ನೀಡುತ್ತಿದ್ದಾರೆ. ಯುವಕರ ಈ ಕಾರ್ಯ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

ಒಮ್ಮೆಲೇ ಪ್ರವಾಹದ ಮಾದರಿಯಲ್ಲಿ ನದಿಯಲ್ಲಿ ನೀರು ಬಂದಾಗ, ಭಾರೀ ಮಳೆಯಾದಾಗ ಗ್ರಾಮೀಣ ಭಾಗದ ಜನರು ಅತಂತ್ರವಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಅವರ ಜೊತೆ ನಿಲ್ಲಬೇಕಾದ್ದು ಅಗತ್ಯ ಹಾಗೂ ಅದು ಕರ್ತವ್ಯ ಎಂದು ಭಾವಿಸಿ ಸತತವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ ಉದಯ ಶಿವಾಲ.
ನಿಮ್ಮ ಅಭಿಪ್ರಾಯಗಳಿಗೆ....

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ನಿರ್ಮಾಣ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಗ್ರೀನ್‌ ಸಿಗ್ನಲ್‌ : ಪರಿಸರದ ಮೇಲಾಗುವ ಪರಿಣಾಮಗಳೇನು..?

ಸರ್ಕಾರಗಳು(Govt) ಅಭಿವೃದ್ಧಿ(Developments) ಕಾರ್ಯಗಳನ್ನು ಕೈಗೊಳ್ಳಬೇಕಾದ್ದು ಅನಿವಾರ್ಯ. ಆದರೆ ಪರಿಸರಕ್ಕೆ(Environment) ಹಾನಿಯಾಗದಂತೆ ಕೈಗೊಳ್ಳುವುದು ಅತಿ…

3 hours ago

ರಹಸ್ಯ ಕಥೆಗಳನ್ನು ಹೇಳುವ ಭೀಮ್’ಕುಂಡ್ : ಭೀಮ ನಿರ್ಮಿಸಿದ ಈ ಕೆರೆಯ ವಿಶೇಷತೆ ಏನು ಗೊತ್ತಾ..? ಇದು ಬರೀ ಬಾವಿಯಲ್ಲ…

ಭೀಮ್'ಕುಂಡ್..(Bheem Kund) ಈ ಕೆರೆಯನ್ನು(Lake) ನಿರ್ಮಿಸಿದವನು ಭೀಮನಂತೆ(Bheema)... ಇದರ ಆಳ(Depth) ಎಷ್ಟಿದೆಯೆಂದು ಯಾರಿಗೂ…

3 hours ago

ಭಾರತದಲ್ಲಿ ಕೃಷಿ ಅರಣ್ಯ : ಆದ್ಯತೆ ಮತ್ತು ಪರಿಸರಕ್ಕಾಗುವ ಲಾಭ

ಕೃಷಿ ಅರಣ್ಯಶಾಸ್ತ್ರವು(Agroforestry) ಸಾಂಪ್ರದಾಯಿಕ(Cultural) ಮತ್ತು ಆಧುನಿಕ ಭೂ-ಬಳಕೆಯ(Modern land-use) ವ್ಯವಸ್ಥೆಗಳನ್ನು ವಿವರಿಸುತ್ತದೆ, ಅಲ್ಲಿ ಮರದ…

4 hours ago

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಒಂದೆಲಗ : ಕೈ ತೋಟಗಳಲ್ಲಿ ಸಿಗುವ ಸುಲಭೌಷಧಿ

ಒಂದೆಲಗ(Brahmi) ಗದ್ದೆ, ತೋಟಗಳಲ್ಲಿ ಕಂಡುಬರುವ, ಬಳ್ಳಿಯಂತೆ ನೆಲದಲ್ಲಿ ಹಬ್ಬಿ ಬೆಳೆಯುವ ಸಸ್ಯ(Plant). ಅದು…

4 hours ago

ಕರಾವಳಿ ಭಾಗದಲ್ಲಿ ಭಾರಿ ಮಳೆ : ಮಂಗಳೂರಿನ ಸಮುದ್ರ ತೀರದಲ್ಲಿ ಹೈಅಲರ್ಟ್: ಉಡುಪಿಯಲ್ಲಿ ಸಮುದ್ರ ಪ್ರಕ್ಷುಬ್ದ

ಕಳೆದ ವರ್ಷ ಮುಂಗಾರು ಮಳೆ(Mansoon Rain) ಕೊಟ್ಟ ಹಿನ್ನೆಲೆ, ಈ ಬಾರಿ ರಾಜ್ಯದ್ಯಂತ…

4 hours ago