ಬೆಂಗಳೂರಿನಲ್ಲಿ ರೈತ ಮೋರ್ಚಾ ರಾಜ್ಯ ಮಟ್ಟದ ಕಾರ್ಯಾಗಾರ| ರಾಜ್ಯದಲ್ಲಿ 1.5 ಕೋಟಿ ಬಿಜೆಪಿ ಸದಸ್ಯತ್ವದ ಗುರಿ

August 30, 2024
2:54 PM

ರೈತ ಮೋರ್ಚಾವು(Raitha Morcha) ಬೂತ್ ಮಟ್ಟದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಪೂರ್ಣ ಪ್ರಮಾಣದ ಶಕ್ತಿ ಸಿಗುವಂತಾಗಲು ಆರೋಗ್ಯಕರವಾದ ಚರ್ಚೆ ಮಾಡಬೇಕಿದೆ. ಕೇಂದ್ರದಿಂದ ರೈತಾಪಿ ಕುಟುಂಬದಿಂದ ಆಗುತ್ತಿರುವ ಅನುಕೂಲಗಳನ್ನು ರೈತ ಕುಟುಂಬಗಳಿಗೆ(Farmer) ತಿಳಿಸಬೇಕು ಎಂದು ಬಿಜೆಪಿ(BJP) ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಅವರು ತಿಳಿಸಿದರು.

Advertisement

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ನಡೆದ ಬಿಜೆಪಿ ರೈತ ಮೋರ್ಚಾ ರಾಜ್ಯ ಮಟ್ಟದ ಕಾರ್ಯಾಗಾರವನ್ನುದ್ದೇಶಿಸಿ, ಮಾತನಾಡಿದ ಅವರು . ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕೇಂದ್ರದ ಸೂಚನೆಯಂತೆ ರಾಜ್ಯದಲ್ಲಿ 1.5 ಕೋಟಿ ಬಿಜೆಪಿ ಸದಸ್ಯತ್ವದ ಗುರಿ ನೀಡಿದ್ದಾರೆ. 2014ರಲ್ಲಿ 74.88 ಲಕ್ಷ, ಕಳೆದ ಸಾರಿ ಅಂದರೆ 2019ರಲ್ಲಿ 26.86 ಲಕ್ಷ ಹೆಚ್ಚುವರಿ ಸದಸ್ಯತ್ವ ಸೇರಿ ಸುಮಾರು 1 ಕೋಟಿಯಷ್ಟು ಸದಸ್ಯತ್ವ ದಾಖಲಿಸಲಾಗಿತ್ತು ಎಂದು ತಿಳಿಸಿದರು.

ರೈತ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಜಯಸೂರ್ಯನ್ ಅವರು ಕನಿಷ್ಠ 10 ಲಕ್ಷ ಸದಸ್ಯತ್ವವನ್ನು ಮೀರುವಂತೆ ಕೆಲಸ ಮಾಡಲು ತಿಳಿಸಿದರು.

ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕಲ್ಮರುಡಪ್ಪ, ಡಾ. ಬಿ.ಸಿ.ನವೀನ್‍ಕುಮಾರ್, ರಾಜ್ಯ ಉಪಾಧ್ಯಕ್ಷರಾದ ಗುರುಲಿಂಗನಗೌಡ,  ಭಾರತಿ ಮಲ್ಲಿಕಾರ್ಜುನ, ಬ್ಯಾಟರಂಗೇಗೌಡ, ರಾಜ್ಯ ಕಾರ್ಯದರ್ಶಿಗಳಾದ ಆರ್. ರಾಜೇಶ್, ಸತೀಶ್ ಕಡತನಮಲೆ, ಅಶೋಕ್ ಕುಮಾರ್, ರೈತ ಮೋರ್ಚಾ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

2026 ರ ವೇಳೆಗೆ ತುಮಕೂರಿಗೆ ಎತ್ತಿನಹೊಳೆ ನೀರು
April 11, 2025
7:00 AM
by: The Rural Mirror ಸುದ್ದಿಜಾಲ
ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಸಂಭವ | ಹವಾಮಾನ ಇಲಾಖೆ ಮುನ್ಸೂಚನೆ
April 11, 2025
6:10 AM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಬಾಡಿಗೆ ಕೊಳವೆಬಾವಿಗಳಿಂದ ನೀರು ಪೂರೈಕೆ
April 11, 2025
6:00 AM
by: The Rural Mirror ಸುದ್ದಿಜಾಲ
ಶುಕ್ರ ನೇರ ಸಂಚಾರದ ಪರಿಣಾಮ : ಕೆಲ ರಾಶಿಗಳ ಮೇಲೆ ಪ್ರಭಾವ
April 11, 2025
5:51 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group