ರೈತ ಮೋರ್ಚಾವು(Raitha Morcha) ಬೂತ್ ಮಟ್ಟದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಪೂರ್ಣ ಪ್ರಮಾಣದ ಶಕ್ತಿ ಸಿಗುವಂತಾಗಲು ಆರೋಗ್ಯಕರವಾದ ಚರ್ಚೆ ಮಾಡಬೇಕಿದೆ. ಕೇಂದ್ರದಿಂದ ರೈತಾಪಿ ಕುಟುಂಬದಿಂದ ಆಗುತ್ತಿರುವ ಅನುಕೂಲಗಳನ್ನು ರೈತ ಕುಟುಂಬಗಳಿಗೆ(Farmer) ತಿಳಿಸಬೇಕು ಎಂದು ಬಿಜೆಪಿ(BJP) ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ನಡೆದ ಬಿಜೆಪಿ ರೈತ ಮೋರ್ಚಾ ರಾಜ್ಯ ಮಟ್ಟದ ಕಾರ್ಯಾಗಾರವನ್ನುದ್ದೇಶಿಸಿ, ಮಾತನಾಡಿದ ಅವರು . ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕೇಂದ್ರದ ಸೂಚನೆಯಂತೆ ರಾಜ್ಯದಲ್ಲಿ 1.5 ಕೋಟಿ ಬಿಜೆಪಿ ಸದಸ್ಯತ್ವದ ಗುರಿ ನೀಡಿದ್ದಾರೆ. 2014ರಲ್ಲಿ 74.88 ಲಕ್ಷ, ಕಳೆದ ಸಾರಿ ಅಂದರೆ 2019ರಲ್ಲಿ 26.86 ಲಕ್ಷ ಹೆಚ್ಚುವರಿ ಸದಸ್ಯತ್ವ ಸೇರಿ ಸುಮಾರು 1 ಕೋಟಿಯಷ್ಟು ಸದಸ್ಯತ್ವ ದಾಖಲಿಸಲಾಗಿತ್ತು ಎಂದು ತಿಳಿಸಿದರು.
ರೈತ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಜಯಸೂರ್ಯನ್ ಅವರು ಕನಿಷ್ಠ 10 ಲಕ್ಷ ಸದಸ್ಯತ್ವವನ್ನು ಮೀರುವಂತೆ ಕೆಲಸ ಮಾಡಲು ತಿಳಿಸಿದರು.
ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕಲ್ಮರುಡಪ್ಪ, ಡಾ. ಬಿ.ಸಿ.ನವೀನ್‍ಕುಮಾರ್, ರಾಜ್ಯ ಉಪಾಧ್ಯಕ್ಷರಾದ ಗುರುಲಿಂಗನಗೌಡ, ಭಾರತಿ ಮಲ್ಲಿಕಾರ್ಜುನ, ಬ್ಯಾಟರಂಗೇಗೌಡ, ರಾಜ್ಯ ಕಾರ್ಯದರ್ಶಿಗಳಾದ ಆರ್. ರಾಜೇಶ್, ಸತೀಶ್ ಕಡತನಮಲೆ, ಅಶೋಕ್ ಕುಮಾರ್, ರೈತ ಮೋರ್ಚಾ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತೋಟಗಾರಿಕೆ ಇಲಾಖೆಯಿಂದ ಬೆಳಗಾವಿಯ ಹೋಮ್ ಪಾರ್ಕ್ ನಲ್ಲಿ…
ದೇಶಾದ್ಯಂತ ಒಂದೇ ದಿನ 47 ಸ್ಥಳಗಳಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು ಬೆಂಗಳೂರಿನ ಎನ್ಎಸಿಐಎ…
ಅಲ್ಲಲ್ಲಿ ಸಂಜೆಯ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಬಳಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ ೨…
ಹಲಸಿನ ಕಾಯಿ ಪೂರಿಗೆ ಬೇಕಾಗುವ ಸಾಮಗ್ರಿಗಳು: ಹಲಸಿನ ಕಾಯಿ 1/2 ಕಪ್, ಗೋಧಿ ಹುಡಿ.1…
ಸರಕಾರದ ಸೂಚನೆಯಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಇ- ಕೆವೈಸಿ ಮಾಡಲಾದ ಪಡಿತರ ಚೀಟಿ ಫಲಾನುಭವಿಗಳನ್ನು…