ಮಹಾರಾಷ್ಟ್ರದ ಥಾಣೆಯ 10 ವರ್ಷದ ಸಾಯಿ ಪಾಟೀಲ್ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 38 ದಿನಗಳಲ್ಲಿ 3,600 ಕಿ.ಮೀ ಸೈಕ್ಲಿಂಗ್ ಮಾಡಿದ್ದಾಳೆ. ಈ ಬಾಲಕಿ ಈ ಹಿಂದೆ ಮಹಾರಾಷ್ಟ್ರದ ನಗರಗಳ ನಡುವೆ ಸೈಕಲ್ ಸವಾರಿ ಮತ್ತು ಹಲವಾರು ಈಜು ಸ್ಪರ್ಧೆಯ ಮೂಲಕ ದಾಖಲೆಗಳನ್ನು ಮಾಡಿದ್ದಾಳೆ.
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ರಯಾಣವನ್ನು ಮಾಡಬೇಕು ಎಂಬ ಇಚ್ಛೆ ಈಡೇರಿಸಲು ಸಾಯಿ ಪಾಟೀಲ್ ಒಂದು ವರ್ಷದಿಂದ ಅಭ್ಯಾಸ ಮಾಡುತ್ತಿದ್ದಳು. ಈ ಬಾರಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕ್ಲಿಂಗ್ ಮಾಡಿರುವಳು ಎಂದು ಸಾಯಿ ಪಾಟೀಲ್ ತಂದೆ ಆಶಿಶ್ ಪಾಟೀಲ್ ಹೇಳಿದರು. ನಾವು ಡಿಸೆಂಬರ್ 16 ರಂದು ಪ್ರಯಾಣವನ್ನು ಪ್ರಾರಂಭಿಸಿ ಜನವರಿ 30 ರಂದು ಪೂರ್ಣಗೊಳಿಸಿದ್ದೇವೆ ಎಂದು ಆಶಿಶ್ ಪಾಟೀಲ್ ಹೇಳಿದರು.
ಸಾಯಿ ಪಾಟೀಲ್ ಅವರ ಈ ಪ್ರಯತ್ನಕ್ಕೆ ಮಹಾರಾಷ್ಟ್ರದ ಹಲವಾರು ಪ್ರದೇಶಗಳಲ್ಲಿ ಜನರು ಇವರನ್ನು ಅಭಿನಂಧಿಸಿದರು. ಇವರ ಶೌರ್ಯ ಮತ್ತು ಸಮರ್ಪಣೆ ಬಗ್ಗೆ ನಿಜವಾಗಿಯೂ ಹೆಮ್ಮೆಯಿದೆ ಎಂದು ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…