ಕೃಷಿಕರ ಮಿತ್ರ ಸಾಯಿಶೇಖರ್‌ ಕರಿಕಳ ಅವರಿಗೆ ರೈತ ರತ್ನ ಪ್ರಶಸ್ತಿ

August 2, 2026
9:41 PM
ಮಳೆ ಮಾಹಿತಿ ಮೂಲಕ ಕೃಷಿಕರಿಗೆ ನೆರವಾಗುತ್ತಿರುವ ಸಾಯಿಶೇಖರ್‌ ಕರಿಕಳ ಅವರಿಗೆ ರೈತ ರತ್ನ ಪ್ರಶಸ್ತಿ ಲಭಿಸಿದೆ.

ರಾಜ್ಯದ ಸಾವಿರಾರು ಕೃಷಿಕರಿಗೆ ಹವಾಮಾನ ಮಾಹಿತಿಯ ಮೂಲಕ ವಿಶ್ವಾಸಾರ್ಹ ಮಾರ್ಗದರ್ಶನ ನೀಡುತ್ತಿರುವ ಸಾಯಿಶೇಖರ್‌ ಕರಿಕಳ ಅವರಿಗೆ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ನೀಡುವ ಪ್ರತಿಷ್ಠಿತ ‘ರೈತ ರತ್ನ’ ಪ್ರಶಸ್ತಿ ಲಭಿಸಿದೆ. ಭಾನುವಾರ ಬೆಂಗಳೂರಿನಲ್ಲಿ ಈ ಪ್ರಶಸ್ತಿ ಪ್ರದಾನವಾಗಿದೆ.

ಸಾಯಿಶೇಖರ್‌ ಕರಿಕಳ ಅವರಿಗೆ ರೈತ ರತ್ನ ಪ್ರಶಸ್ತಿ ಲಭಿಸಿರುವುದಕ್ಕೆ ನಾಡಿನ ಕೃಷಿಕರ ಪರವಾಗಿ ಅಭಿನಂದನೆಗಳು ಸಲ್ಲುತ್ತಿವೆ. ಸೇವೆಯನ್ನು ಗುರುತಿಸಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿದ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಸಂಸ್ಥೆಗಳಿಗೂ ಕೃಷಿಕರು ಅಭಿನಂದನೆ ಸಲ್ಲಿಸಿದ್ದಾರೆ.

ದ ರೂರಲ್‌ ಮಿರರ್.ಕಾಂ ಗೆ ಕಳೆದ 5 ವರ್ಷಗಳಿಂದ ಪ್ರತಿದಿನವೂ ಹವಾಮಾನ ವಿಶ್ಲೇಷಣೆ ಮಾಡಿ ಹವಾಮಾನ ವರದಿಯನ್ನು ಸಾಯಿಶೇಖರ್‌ ಕರಿಕಳ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೂರಲ್‌ ಮಿರರ್.ಕಾಂ ವತಿಯಿಂದ ಸಾಯಿಶೇಖರ್‌ ಕರಿಕಳ ಅವರಿಗೆ ಅಭಿನಂದನೆ.

ಸಾಯಿಶೇಖರ್‌ ಕರಿಕಳ ಹಾಗೂ ರಘುರಾಮ ಕಂಪದಕೋಡಿ ಇವರಿಬ್ಬರೂ ವೆದರ್‌ ಮ್ಯಾಪ್‌ ಹಾಗೂ ವಿವಿಧ ಹವಾಮಾನ ಮಾದರಿಗಳು ಹಾಗೂ ಸ್ಥಳೀಯ ಪರಿಸ್ಥಿತಿಗಳನ್ನು ವಿಶ್ಲೇಷಿಸಿ ಪ್ರತಿದಿನ ಮಳೆ ಮಾಹಿತಿಯನ್ನು ಕೃಷಿಕರಿಗೆ ತಲುಪಿಸುತ್ತಿದ್ದಾರೆ. ವಿಶೇಷವಾಗಿ ಅಡಿಕೆ ಬೆಳೆಗಾರರಿಗೆ ಇವರ ಮಾಹಿತಿ ಅತ್ಯಂತ ಉಪಯುಕ್ತವಾಗಿದೆ. ಬೇಸಿಗೆಯಲ್ಲಿ ಅಡಿಕೆ ಒಣಗಿಸುವ ಸಂದರ್ಭದಿಂದ ಹಿಡಿದು ಮಳೆ ಆರಂಭವಾಗುವ ಸಾಧ್ಯತೆಗಳವರೆಗೆ ನೀಡುವ ಮುನ್ಸೂಚನೆ ಕೃಷಿ ಚಟುವಟಿಕೆಗಳಿಗೆ ನೆರವಾಗುತ್ತಿದೆ.  ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ಮಂದಿ ಇವರ ಹವಾಮಾನ ಮಾಹಿತಿಯನ್ನು ಅನುಸರಿಸುತ್ತಿದ್ದು, ಕೃಷಿಕರ ವಿಶ್ವಾಸ ಗಳಿಸಿದ್ದಾರೆ. ದಿನನಿತ್ಯ ಸಮಯ ಮೀಸಲಿಟ್ಟು ಹವಾಮಾನ ವಿಶ್ಲೇಷಣೆ ಮಾಡಿ ಸಾರ್ವಜನಿಕರಿಗೆ ಉಚಿತವಾಗಿ ಮಾಹಿತಿ ನೀಡುತ್ತಿರುವ ಇವರ ಸೇವೆ ಗಮನಾರ್ಹವಾಗಿದೆ.

ಹವಾಮಾನ ವಿಶ್ಲೇಷಣೆ ಸುಲಭದ ಕೆಲಸವಲ್ಲ. ಕ್ಷಣಕ್ಷಣಕ್ಕೂ ಬದಲಾಗುವ ಪ್ರಕೃತಿಯ ನಡುವೆ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ನಿಖರತೆಗೆ ಅತ್ಯಂತ ಸಮೀಪವಾಗುವ ಮುನ್ಸೂಚನೆ ನೀಡುವ ಪ್ರಯತ್ನವನ್ನು ಇಬ್ಬರೂ ನಿರಂತರವಾಗಿ ಮಾಡುತ್ತಿದ್ದಾರೆ. ಪ್ರಕೃತಿಯ ಅಂತಿಮ ನಿರ್ಧಾರವನ್ನು ಯಾರೂ ಊಹಿಸಲು ಸಾಧ್ಯವಿಲ್ಲದಿದ್ದರೂ, ವೈಜ್ಞಾನಿಕ ಮಾಹಿತಿಯ ಆಧಾರದಲ್ಲಿ ಕೃಷಿಕರಿಗೆ ನೆರವಾಗುವ ಸೇವೆಯನ್ನು ಅವರು ಮುಂದುವರಿಸಿದ್ದಾರೆ.

ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ನೀಡುವ ಪ್ರತಿಷ್ಠಿತ ‘ರೈತ ರತ್ನ’ ಪ್ರಶಸ್ತಿಗೆ ಈ ಬಾರಿ ಸಾಯಿಶೇಖರ್‌ ಕರಿಕಳ ಆಯ್ಕೆಯಾಗಿದ್ದಾರೆ. ಸಾಯಿಶೇಖರ್‌ ಕರಿಕಳ ಅವರಿಗೆ ರೈತ ರತ್ನ ಪ್ರಶಸ್ತಿ ಲಭಿಸಿರುವುದಕ್ಕೆ ನಾಡಿನ ಕೃಷಿಕರ ಪರವಾಗಿ ಅಭಿನಂದನೆಗಳು ಸಲ್ಲುತ್ತಿವೆ. ಜೊತೆಗೆ, ಕೃಷಿಕರಿಗಾಗಿ ಸಮಾನವಾಗಿ ಸೇವೆ ಸಲ್ಲಿಸುತ್ತಿರುವ ರಘುರಾಮ ಕಂಪದಕೋಡಿ ಅವರ ಕೊಡುಗೆಗೂ ಗೌರವ ವ್ಯಕ್ತವಾಗುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Sai Shekhar Karikala has been selected for the prestigious Raita Ratna Award instituted by Kannada Prabha and Suvarna News for his valuable weather advisory service to farmers.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮುಂಗಾರು ಬೇಗನೆ ವಿದಾಯ ಹೇಳುತ್ತಿದೆಯೇ..? ಸೆಪ್ಟೆಂಬರ್‌ನಲ್ಲಿ ಮಳೆ ಕಡಿಮೆಯಾಗುವ ಮುನ್ಸೂಚನೆ..?
August 22, 2026
10:25 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 22-08-2026 | ಕರಾವಳಿಯಲ್ಲಿ ಮಳೆ ಇಳಿಕೆ, 26ರಿಂದ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ
August 22, 2026
2:07 PM
by: ಸಾಯಿಶೇಖರ್ ಕರಿಕಳ
ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹಣ ಬರಬೇಕೇ? ರೈತರು ಈಗಲೇ e-KYC ಪೂರ್ಣಗೊಳಿಸಿ
August 22, 2026
6:47 AM
by: ದ ರೂರಲ್ ಮಿರರ್.ಕಾಂ
ಬೆಳೆ ವಿಮೆಗೆ ರೈತರಿಗೆ ಮತ್ತೊಂದು ಅವಕಾಶ : ಆಗಸ್ಟ್ 31ರವರೆಗೆ ನೋಂದಣಿ ಅವಧಿ ವಿಸ್ತರಣೆ
August 21, 2026
7:49 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror