ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ

November 21, 2024
7:09 PM
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ಹಾಗೂ ಅದಕ್ಕೆ ಸೂಕ್ತ ಬೆಲೆ ಸಿಕ್ಕರೆ ಇನ್ನಷ್ಟು ಮಂದಿ ಹುಣಸೆಹಣ್ಣು ಬೆಳೆಯಬಹುದಾಗಿದೆ.

ಹುಣಸೆಹಣ್ಣು  ಉದ್ಯಮಶೀಲರಿಗೆ ಕೊಯ್ಲು, ಸಂರಕ್ಷಣೆ ಹಾಗೂ ಮಾರಾಟ ಕುರಿತ ಮೂರು ದಿನದ ತರಬೇತಿ ಕಾರ್ಯಗಾರಕ್ಕೆ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಬೆಂಗಳೂರಿನಲ್ಲಿ ಚಾಲನೆ ನೀಡಿದರು.

Advertisement
Advertisement
Advertisement
Advertisement

ಬಳಿಕ ಮಾತನಾಡಿದ ಜಯಚಂದ್ರ, ಬೆಂಗಳೂರಿನಲ್ಲಿ ಐಟಿಬಿಟಿಗೆ ಸಂಬಂಧಿಸಿದ ನವೋದ್ಯಮಗಳು 10 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿವೆ. ಈ ಮೂಲಕ   ಹೊಸ ಹೊಸ ಸಂಶೋಧನೆಗೆ ಹೆಚ್ಚಿನ ಒತ್ತು ನೀಡುತ್ತಿವೆ. ಅದೇ ರೀತಿ ಹುಣಸೆಹಣ್ಣು ಬೆಳೆ ಕೊಯ್ಲು, ಸಂರಕ್ಷಣೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ರೈತರಿಗೆ ಸಕಾಲದಲ್ಲಿ ಮಾಹಿತಿ ನೀಡಿದಾಗ, ಹುಣಸೆಹಣ್ಣು ಬೆಳೆಗಾರರೂ ಕೂಡ ಈ ಕೃಷಿಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

Advertisement

ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತದ ಅಧ್ಯಕ್ಷ , ಬಿ.ಎಚ್. ಹರೀಶ್ ಮಾತನಾಡಿ, ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ಹಾಗೂ ಅದಕ್ಕೆ ಸೂಕ್ತ ಬೆಲೆ ಸಿಕ್ಕರೆ ಇನ್ನಷ್ಟು ಮಂದಿ ಹುಣಸೆಹಣ್ಣು ಬೆಳೆಯುವ ಕೆಲಸದಲ್ಲಿ ನಿರತರಾಗುತ್ತಾರೆ ಆ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಈ ವೇಳೆ  ವ್ಯವಸ್ಥಾಪಕ ನಿರ್ದೇಶಕ ಡಾ. ಎಚ್.ಕೆ. ಶಿವಕುಮಾರ್, ಡಾ.ಎಂ.ಎಚ್.ಎಂ ಪ್ರತಿಷ್ಠಾನದ ಅಧ್ಯಕ್ಷ ಡಾ. ಕೆ. ನಾರಾಯಣಗೌಡ,  ಟ್ರಸ್ಟಿ ಡಾ.ಎಸ್.ವಿ. ಹಿತ್ತಲಮನಿ, ಕಾರ್ಯದರ್ಶಿ ಡಾ.ಎಲ್. ಹನುಮಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ನವ ಮಂಗಳೂರು ಬಂದರಿನಿಂದ ಅತ್ಯಧಿಕ ಪ್ರಮಾಣದಲ್ಲಿ ಕಾಫಿ ಸಾಗಾಣಿಕೆ | ಕಾಫಿ ರಫ್ತು ವಹಿವಾಟಿಗೆ ಆದ್ಯತೆ ಅಗತ್ಯ |
February 16, 2025
4:50 PM
by: The Rural Mirror ಸುದ್ದಿಜಾಲ
ಚಿಕ್ಕಮಗಳೂರು ಜಿಲ್ಲೆ | ಮಂಗನ ಕಾಯಿಲೆ ಪೀಡಿತರ ಸಂಖ್ಯೆಯಲ್ಲಿ ಏರಿಕೆ |
February 16, 2025
4:46 PM
by: The Rural Mirror ಸುದ್ದಿಜಾಲ
ಮಂಡ್ಯ ಜಿಲ್ಲೆ| 14 ದಿನದೊಳಗೆ ರೈತರಿಗೆ ಕಬ್ಬಿನ ಹಣ ಪಾವತಿಸಬೇಕು | ಜಿಲ್ಲಾಧಿಕಾರಿ ಸೂಚನೆ
February 16, 2025
4:41 PM
by: The Rural Mirror ಸುದ್ದಿಜಾಲ
 ಬಿಎಸ್‌ಎನ್‌ಎಲ್ ಗೆ 269 ಕೋಟಿ ರೂಪಾಯಿ ಲಾಭ | ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಹೇಳಿಕೆ
February 16, 2025
4:33 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror